Advertisment

ಬಳ್ಳಾರಿ ಜೈಲಿನಲ್ಲಿ ಮತ್ತೆ ಮಂಕಾದ ದರ್ಶನ್; ಅಧಿಕಾರಿಗಳ ಮುಂದೆ ಮತ್ತೊಂದು ಡಿಮ್ಯಾಂಡ್

author-image
Ganesh
Updated On
ದರ್ಶನ್‌ ಕಾಯುತ್ತಿದ್ದ ದಿನ ಬಂದೇ ಬಿಡ್ತಾ.. 3 ತಿಂಗಳ ಜಾಮೀನು ಸಿಗುತ್ತಾ? ಮೈಸೂರಿಗೆ ಶಿಫ್ಟ್ ಆಗ್ತಾರಾ?
Advertisment
  • ಜಾಮೀನು ನಿರೀಕ್ಷೆಯಲ್ಲಿದ್ದ ಆರೋಪಿ ದರ್ಶನ್​ಗೆ ನಿರಾಸೆ
  • ಜಾಮೀನು ಅರ್ಜಿ ವಜಾ ಮಾಡಿರುವ ಬೆಂಗಳೂರು ಕೋರ್ಟ್
  • ಪ್ರತಿದಿನ ಬಳ್ಳಾರಿ ಜೈಲಿಲ್ಲಿ ದರ್ಶನ್​ಗೆ ಚಿಕಿತ್ಸೆ ನೀಡಲಾಗ್ತಿದೆ

ಬಳ್ಳಾರಿ: ಜಾಮೀನು ನಿರೀಕ್ಷೆಯಲ್ಲಿದ್ದ ರೇಣುಕಾಸ್ವಾಮಿ ಪ್ರಕರಣದ ಆರೋಪಿ ದರ್ಶನ್​ಗೆ ನಿರಾಸೆ ಆಗಿದೆ. ಕೋರ್ಟ್​ ಬೇಲ್​ ನೀಡಲು ನಿರಾಕರಿಸಿದ ವಿಷಯ ತಿಳಿದು ಮತ್ತಷ್ಟು ಮಂಕಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

Advertisment

ಜೊತೆಗೆ ಜೈಲು ಅಧಿಕಾರಿಗಳ ಮುಂದೆ ಮತ್ತೊಂದು‌‌ ಡಿಮ್ಯಾಂಡ್ ಮಾಡಿದ್ದಾರಂತೆ. ಆರೋಗ್ಯ ಸಮಸ್ಯೆಗೆ ಒಳಗಾಗಿರುವ ದರ್ಶನ್, ನನಗೆ ಬಳ್ಳಾರಿಯಲ್ಲಿ ಚಿಕಿತ್ಸೆ ಕೊಡಿಸೋದು ಬೇಡ. ಬದಲಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ. ಸ್ಕ್ಯಾನಿಂಗ್, ಸರ್ಜರಿ ಎಲ್ಲವೂ ಮಣಿಪಾಲ್ ಆಸ್ಪತ್ರೆಯಲ್ಲಿ ಆಗಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ದರ್ಶನ್​ಗೆ ಯಾಕೆ ಸಿಕ್ಕಿಲ್ಲ ಬೇಲ್​? ಜಾಮೀನು ನಿರಾಕರಿಸಲು ಇದೇನಾ ಕಾರಣ! 

ಹೈಕೋರ್ಟ್ ಮೂಲಕವೇ ಬೆಂಗಳೂರು ಆಸ್ಪತ್ರೆಗೆ ಶಿಫ್ಟ್ ಮಾಡಲು ಮನವಿ ಸಾಧ್ಯತೆ ಇದೆ. ಪತ್ನಿ ಜೊತೆಗೆ ಚರ್ಚಿಸಿ ಅನಾರೋಗ್ಯದ ಕಾರಣ ನೀಡುವ ಸಾಧ್ಯತೆ ಇದೆ. ಕಳೆದ 25 ದಿನಗಳಿಂದ ಬೆನ್ನು ನೋವು ಉಲ್ಬಣಗೊಂಡಿದೆ. ಸಿಟಿ ಹಾಗೂ ಎಂಆರ್‌ಐ ಸ್ಕ್ಯಾನಿಂಗ್ ‌ಜೊತೆಗೆ ಸರ್ಜರಿಯ ಅಗತ್ಯ ಇದೆ ಎಂದು ವಿಮ್ಸ್ ವೈದ್ಯರು ಹೇಳಿದ್ದಾರೆ. ಆದರೆ ಬಳ್ಳಾರಿಯಲ್ಲಿ ತಮಗೆ ಚಿಕಿತ್ಸೆ ‌ಬೇಡ ಎಂದು ದರ್ಶನ್ ಪಟ್ಟು ಹಿಡಿದಿದ್ದಾರಂತೆ.

Advertisment

ಬೆನ್ನುನೋವು, ಕೈಮೂಳೆಗೆ ಹಿಂದೆ ಮಣಿಪಾಲ್ ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡಿದ್ದರು. ಈಗಲೂ ನಾನು ಅಲ್ಲಿಗೆ ಹೋದ್ಮೇಲೆ ಟ್ರೀಟ್​ಮೆಂಟ್ ಪಡೆಯುತ್ತೇನೆ ಎನ್ನುತ್ತಿದ್ದಾರಂತೆ. ಅದರಂತೆ ನಿನ್ನೆ ಅಳಿಯ ಹೇಮಂತ್ ಮುಂದೆಯೂ ಹೆಲ್ತ್ ಕಂಡಿಷನ್ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಪ್ರತಿದಿನ ಬಳ್ಳಾರಿ ಜೈಲಿಲ್ಲಿ ದರ್ಶನ್​ಗೆ ಚಿಕಿತ್ಸೆ ನೀಡಲಾಗ್ತಿದೆ.

ಇದನ್ನೂ ಓದಿ:ದರ್ಶನ್‌ ಅಭಿಮಾನಿಗಳಿಗೆ ಸಹಿಸಲಾಗದ ನೋವು.. ಮುಂದಿನ ದಾರಿ ಏನು? ಕಾನೂನು ತಜ್ಞರು ಏನು ಹೇಳ್ತಾರೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment