ದರ್ಶನ್​ಗೆ ಕೋರ್ಟ್​ ಕೊಟ್ಟ ಕಾಲಾವಧಿ ಎಷ್ಟು ದಿನ? ಮೆಡಿಕಲ್ ಬೇಲ್​ ಪಡೆದರೂ ರಿಪೋರ್ಟ್​ ಮಾಡಲೇಬೇಕು

author-image
AS Harshith
Updated On
ದರ್ಶನ್​ಗೆ ಕೋರ್ಟ್​ ಕೊಟ್ಟ ಕಾಲಾವಧಿ ಎಷ್ಟು ದಿನ? ಮೆಡಿಕಲ್ ಬೇಲ್​ ಪಡೆದರೂ ರಿಪೋರ್ಟ್​ ಮಾಡಲೇಬೇಕು
Advertisment
  • ಬಳ್ಳಾರಿಯಲ್ಲಿ 63 ದಿನಗಳನ್ನು ಕಳೆದ ಕೊಲೆ ಆರೋಪಿ
  • ಕೊನೆಗೂ ಮೆಡಿಕಲ್​ ಜಾಮೀನಿನ ಮೂಲಕ ಹೊರಕ್ಕೆ
  • ದರ್ಶನ್​ ಚಿಕಿತ್ಸೆಗಾಗಿ ಕೋರ್ಟ್​ ಏನೆಲ್ಲಾ ಅವಕಾಶ ನೀಡಿದೆ?

ದರ್ಶನ್​​ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಪಾಲಾಗಿದ್ದ ದರ್ಶನ್​ಗೆ ಕೋರ್ಟ್​ ಮಧ್ಯಂತರ ಜಾಮೀನು ನೀಡಿದೆ. ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್​ ಆಗಿದ್ದ ದರ್ಶನ್​ಗೆ ಬೆನ್ನು ಹುರಿ ನೋಡುವ ಕಾಣಿಸಿಕೊಂಡಿತ್ತು. ಇದೇ ವಿಚಾರವಾಗಿ ಚಿಕಿತ್ಸೆಗೆಂದು ದರ್ಶನ್​ ಪರವಾದ ಲಾಯರ್​ ಬೇಲ್​ಗೆ ಅರ್ಜಿ ಸಲ್ಲಿಸಿದ್ದರು. ದರ್ಶನ್​ ವೈದ್ಯಕೀಯ ವರದಿಯನ್ನು ಪರಿಶೀಲಿಸಿದ ಹೈಕೋರ್ಟ್​​ ಮಧ್ಯಂತರ ಜಾಮೀನು ನೀಡಿದೆ.

ಮಧ್ಯಂತರ ಜಾಮೀನು ಎಂದರೇನು?

ಬಳ್ಳಾರಿ ಜೈಲಿಗೆ ಸೇರಿದ ದರ್ಶನ್​ ಅಲ್ಲಿ 63 ಕಳೆದಿದ್ದಾರೆ. ಇದರ ನಡುವೆ ಬೆನ್ನು ನೋವು ಕಾಣಿಸಿಕೊಂಡಿದೆ. ಇದೀಗ ಹೈಕೋರ್ಟ್​ ದರ್ಶನ್​​​​ ಬೆನ್ನು ನೋವಿನ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ನೀಡಿದೆ. ಮಧ್ಯಂತರವೆಂದರೆ ತಾತ್ಕಾಲಿಕ ಜಾಮೀನು ಆಗಿದ್ದು, ಕೋರ್ಟ್​ ಆದೇಶದಂತೆ ಆರೋಪಿಯು ನಿರ್ದಿಷ್ಟ ಅವಧಿಯವರೆಗೆ ಈ ಜಾಮೀನು ನೀಡಿದೆ. ಅದರಂತೆಯೇ ದರ್ಶನ್​ ವಿಚಾರದಲ್ಲಿ 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕಿದೆ.

ನ್ಯಾ. ವಿಶ್ವಜಿತ್ ಶೆಟ್ಟಿಯವರು ದರ್ಶನ್​ ಆರೋಗ್ಯ ವರದಿಯನ್ನು ಪರಿಶೀಲಿಸಿ ಮೆಡಿಕಲ್ ಬೇಲ್ ಮಂಜೂರು ಮಾಡಿದ್ದಾರೆ. ನಿಗದಿತ ಅವಧಿಯವರೆಗೆ ಜಾಮೀನು ನೀಡಿದ್ದಾರೆ.

ದರ್ಶನ್​ ಚಿಕಿತ್ಸೆಗೆ ಅವಕಾಶ 

ದರ್ಶನ್  ಆಯ್ಕೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ. ಆಡ್ಮಿಟ್ ಆಗಿ‌ ಒಂದು ವಾರದಲ್ಲಿ ವರದಿ ನೀಡಬೇಕು. ಯಾವ ಚಿಕಿತ್ಸೆ ಆಗಿದೆ ಅಂತಾ ರಿಪೋರ್ಟ್ ನೀಡಬೇಕು. ಯಾವ ಚಿಕಿತ್ಸೆ, ಏನ್ ಅವಶ್ಯಕತೆ ಇದೆ ಹಾಗೂ ಎಲ್ಲಾ ಡಿಟೇಲ್ಸ್ ನೀಡಬೇಕು. ಇದಲ್ಲದೆ ಚಿಕಿತ್ಸೆಗೂ ಮುನ್ನ ದರ್ಶನ್​ ಪಾಸ್​ಪೋರ್ಟನ್ನು ಕೋರ್ಟ್​ಗೆ ನೀಡಬೇಕು.

ಇದರ ಜೊತೆಗೆ ಈ ಆದೇಶದ ಪ್ರತಿಯ ಸಿಸಿಹೆಚ್ 57ಕ್ಕೆ ಸಲ್ಲಿಸಬೇಕು. ಅಲ್ಲಿ ರಿಲೀಸ್ ಆರ್ಡರ್ ಪಡೆಯಬೇಕು. ಆನಂತರ ಅದನ್ನ ಜೈಲಿಗೆ ಸಲ್ಲಿಸಬೇಕು. ಆಮೇಲೆ ರಿಲೀಸ್ ಮಾಡಿಸಿಕೊಂಡು ಬರಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment