/newsfirstlive-kannada/media/post_attachments/wp-content/uploads/2024/06/DARSHAN_NAGARAJ_RACHAYYA.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಇದರ ನಡುವೆ, ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿರುವ ಕೆಲ ಆರೋಪಿಗಳ ಕಥೆಯನ್ನು ಕೇಳ್ತಿದ್ರೆ, ನಿಜಕ್ಕೂ ಶಾಕ್ ಆಗುತ್ತೆ.. ನೆಚ್ಚಿನ ನಟನಿಗೆ ಸಹಾಯ ಮಾಡಲು ಹೋಗಿ ತಗಲಾಕಿಕೊಂಡಿರುವ ಬಹುತೇಕ ಆರೋಪಿಗಳು ದರ್ಶನ್ ಅವರ ಅಭಿಮಾನಿಗಳೇ.. ಹೀಗಾಗಿ ತನ್ನ ಮನದರಸಿಗಾಗಿ ನಟ ದರ್ಶನ್ ಅಭಿಮಾನಿಗಳನ್ನು ದುರ್ಬಳಕೆ ಮಾಡಿಕೊಂಡ್ರಾ ಎಂಬ ಪ್ರಶ್ನೆ ಮೂಡಿದೆ.
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್... ಅಭಿಮಾನಿಗಳ ಪಾಲಿಗೆ ಈತನೇ ‘ಒಡೆಯ’.. ಸ್ಯಾಂಡಲ್ವುಡ್ ಎಂಬ ‘ಬೃಂದಾವನ’ದ ‘ಯಜಮಾನ’ನನ್ನು ಆತನ ಅಭಿಮಾನಿಗಳು ‘ಭಗವಾನ್’ ಎಂದೇ ಆರಾಧಿಸುತ್ತಾರೆ. ಮೆಜೆಸ್ಟಿಕ್ನ ಕರಿಯ ಯಾವುದೇ ಕಾಂಟ್ರವರ್ಸಿಯಲ್ಲಿ ಸಿಲುಕಿದ್ರೂ.. ಅಭಿಮಾನಿಗಳು ಮಾತ್ರ ನೀನೇ ನಮ್ಮ ಪ್ರಿನ್ಸ್.. ನಿಮ್ಮ ಪರ ನಿಲ್ಲುವುದೇ ನಮ್ಮ ‘ಬಾಸ್’ ಎಂದು ತಲೆಯ ಮೇಲೆ ಹೊತ್ತು ಚಕ್ರವರ್ತಿಯಂತೆ ಮೆರೆಸುತ್ತಿದ್ದರು.. ದರ್ಶನ್ ಕೂಡ ಅಭಿಮಾನಿಗಳೇ ನನ್ನ ಸೆಲೆಬ್ರೆಟಿಗಳು ಎಂದು ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ರು. ಆದ್ರೆ ಹೇಳೋದು ವೇದಾಂತ.. ತಿನ್ನೋದು ಬದನೆಕಾಯಿ ಎಂಬ ಗಾಧೆ ಮಾತಿನಂತೆ.. ಸುಯೋಧನ ತನ್ನ ಮನದರಿಸಿ ಪವಿತ್ರಾಗೌಡಳ ಮಾನ ಕಾಪಾಡಲು ಅಭಿಮಾನಿಗಳನ್ನೇ ದುರ್ಬಳಕೆ ಮಾಡಿಕೊಂಡಿದ್ದಾನೆ. ತಮ್ಮ ಬಾಸ್ ಮಾತನ್ನು ಪಾಲನೆ ಮಾಡೋದೇ ನಮ್ಮ ಧರ್ಮ ಎಂದು ಮಾಡಬಾರದ ಕೆಲ್ಸ ಮಾಡಿ, ಇದೀಗ ಪೊಲೀಸರ ಮುಂದೆ ಪಶ್ಚಾತಾಪದ ಮಾತುಗಳನ್ನಾಡ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ತಗಲಾಕೊಂಡಿರೋದು ಆರೋಪಿಗಳಲ್ಲಿ ಬಹುತೇಕರು ದರ್ಶನ್ ಅಭಿಮಾನಿಗಳೇ ಅನ್ನೋದು ಆಘಾತಕಾರಿ ವಿಷ್ಯ.. ಅವರ ಹಿನ್ನೆಲೆಯನ್ನು ಕೇಳ್ತಿದ್ರೆ ಅಯ್ಯೋ ಪಾಪ ಅನ್ಸುತ್ತೆ.
ಕಾರ್ಪೋರೇಟರ್ ಕನಸು ಹೊತ್ತವನು ಇದೀಗ ಕಂಬಿ ಹಿಂದೆ
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿರುವ 11ನೇ ಆರೋಪಿ ಮೈಸೂರು ನಿವಾಸಿ ನಾಗರಾಜ್.. ನಟ ದರ್ಶನ್ನ ಅಪ್ಪಟ ಅಭಿಮಾನಿಯಂತೆ. ನಾಗರಾಜ್ ಮೂಲತಃ ಮೈಸೂರು ನಗರದ ಟಿ.ಕೆ.ಲೇಔಟ್ನ ನಿವಾಸಿ. ಹಿಂದೆ ಪೆಟ್ರೋಲ್ ಬಂಕ್ನಲ್ಲಿ ಕೆಲ್ಸ ಮಾಡ್ತಿದ್ದ ಈತ, ಬಳಿಕ ಸ್ನೇಹಿತರ ಮೂಲಕ ನಟ ದರ್ಶನ್ ಆಪ್ತವಲಯಕ್ಕೆ ಎಂಟ್ರಿಕೊಟ್ಟಿದ್ದ.. ಕಳೆದ 15 ವರ್ಷದಿಂದ ದರ್ಶನ್ ಜೊತೆಯಲ್ಲೇ ಇದ್ನಂತೆ. ಮೈಸೂರು ತಾಲೂಕಿನ ಕೆಂಪಯ್ಯನಹುಂಡಿಯಲ್ಲಿರುವ ದರ್ಶನ್ ತೋಟದ ಮನೆ ನಿರ್ವಹಣೆಯ ಹೊಣೆ ಹೊತ್ತಿದ್ದ ಈ ನಾಗರಾಜ್ ಹೊತ್ತಿದ್ದ.. ಅಷ್ಟೇ ಅಲ್ಲ ದರ್ಶನ್ ಅಭಿಮಾನಿ ಸಂಘಗಳಿಗೆ ಸಂಪರ್ಕ ಸೇತುವೆಯಾಗಿದ್ನಂತೆ.. ದರ್ಶನ್ ನಂಬಿಕೆ ಗಳಿಸಿದ್ದ ಕಾರಣ ನಾಗರಾಜ್‌ಗಾಗಿ ಮೈಸೂರಿನಲ್ಲಿ ಬಾರ್ ಇಟ್ಟುಕೊಟ್ಟಿದ್ರಂತೆ ನಟ ದರ್ಶನ್.. ಆದ್ರೆ ವ್ಯವಹಾರ ಕೈ ಹಿಡಿಯದ ಹಿನ್ನೆಲೆ ಮತ್ತೆ ದರ್ಶನ್ ಜೊತೆಯಲ್ಲೇ ನಾಗರಾಜ್ ಸುತ್ತಾಡಿಕೊಂಡಿದ್ದ. ಇತ್ತೀಚೆಗೆ ಕಾಂಗ್ರೆಸ್ ಪಕ್ಷದಲ್ಲಿ ಸಖತ್ ಸಕ್ರೀಯನಾಗಿದ್ದ ನಾಗರಾಜ್, ರಾಜ್ಯ ಕುರುಬರ ಸಂಘಕ್ಕೆ ಮೈಸೂರಿನಿಂದ ಸ್ಪರ್ಧಿಸಿ ನಿರ್ದೇಶಕನಾಗಿದ್ದ. ಹಾಗೂ ಮಹಾನಗರ ಪಾಲಿಕೆ 21ನೇ ವಾರ್ಡ್‌ನಿಂದ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡು, ದರ್ಶನ್ ಮೂಲಕವೇ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿ ಇದ್ನಂತೆ. ಚಿತ್ರದುರ್ಗದಿಂದ ರೇಣುಕಾಸ್ವಾಮಿ ಕರೆಸಿಕೊಂಡಿದ್ದೇ ಈ ನಾಗರಾಜ್.. ಹೀಗಾಗಿ ದರ್ಶನ್ಗೆ ಸಹಾಯ ಮಾಡಲು ಹೋಗಿ ಕಂಬಿ ಹಿಂದೆ ಲಾಕ್ ಆಗಿದ್ದಾನೆ.
ಇದನ್ನೂ ಓದಿ:ಪೊಲೀಸ್ರ ಮುಂದೆ ಸ್ಫೋಟಕ ಹೇಳಿಕೆ ಕೊಟ್ಟ ನಟ ದರ್ಶನ್.. ಅದೊಂದೇ ಉತ್ತರ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ