ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಮತ್ತೆರಡು ದಿನ ಪೊಲೀಸ್ ಕಸ್ಟಡಿ
ನಟ ದರ್ಶನ್ ಹೆಸರಿನಲ್ಲಿವೆ ಸಾಲು ಸಾಲು ಕ್ರಿಮಿನಲ್ ಕೇಸ್ಗಳು
ಪತ್ನಿ ಮೇಲಿನ ಹಲ್ಲೆ ಸೇರಿ ನಟನ ಮೇಲೆ ಇಷ್ಟೊಂದು ಕೇಸ್ ಇವೆಯಾ?
ಮೈಸೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ತನಿಖೆ ಎದುರಿಸುತ್ತಿದ್ದಾರೆ. ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಭೀಕರ ಹತ್ಯೆ ಪ್ರಕರಣದಲ್ಲಿ ದರ್ಶನ್ಗೆ ಜೈಲು ಶಿಕ್ಷೆಯಾಗುವ ಬಹುತೇಕ ಲಕ್ಷಣಗಳು ಕಾಣುತ್ತಿವೆ. ಆದರೆ ಅದಕ್ಕೂ ಮುನ್ನ ದರ್ಶನ್ ಹೆಸರಲ್ಲಿರುವ ಈವರೆಗೆ ಕ್ರಿಮಿನಲ್ ಕೇಸ್ಗಳು ಯಾವುವು ಎಂದು ನೋಡೋಣ.
ದರ್ಶನ್ ವಿರುದ್ಧ ದಾಖಲಾಗಿರುವುದು ಒಂದಲ್ಲ, ಎರಡಲ್ಲ, ನಾಲ್ಕು ಕ್ರಿಮಿನಲ್ ಕೇಸ್ಗಳು ದಾಖಲಾಗಿದೆ. ಪತ್ನಿಯ ಮೇಲೆ ಹಲ್ಲೆ ಸೇರಿದಂತೆ ಈ ನಟ ಮೇಲೆ ಕ್ರಿಮಿನಲ್ ಕೇಸ್ಗಳಿವೆ. ಅವುಗಳಲ್ಲಿ 2011ರಲ್ಲಿ ದರ್ಶನ್ ವಿರುದ್ಧ ಮೊದಲ ಕೇಸ್ ದಾಖಲಾಗಿತ್ತು. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 425/2021 ಅಡಿಯಲ್ಲಿ 498(A) 323, 355, 506(B) ಅಡಿಯಲ್ಲಿ ಕೇಸ್ ದಾಖಲಾಗಿತ್ತು.
ಇದನ್ನೂ ಓದಿ: ದರ್ಶನ್ ‘ಡೆವಿಲ್’ ಸಿನಿಮಾಗೆ ಬಂಡವಾಳ ಹಾಕಿದ್ದು ಈ ನಾಯಕ! ಶೂಟಿಂಗ್ ಸ್ಥಗಿತವಾಗಿ ಕಣ್ಣೀರು
ಎರಡನೇ ಕೇಸ್ ತಿ.ನರಸೀಪುರ ಠಾಣೆಯಲ್ಲಿ ದಾಖಲಾಗಿತ್ತು. ಎಫ್ ಓಸಿ 19/2022-23 ಅಡಿಯಲ್ಲಿ ದೂರು ದಾಖಲಾಗಿತ್ತು. WLPA 972, ಕಲಂ 2(1),(5)(14)(16)(36),09,39(01)ax, 40,49ರೆ/ವಿ,50,52,55,57 ಶೆಡ್ಯುಲ್ ಪಾರ್ಟ್ ಬಿ ಬರ್ಡ್ಸ್ ಸೀರಿಯಲ್ ನಂ 231 ಅಡಿ ಫಾರೆಸ್ಟ್ ಆಕ್ಟ್ ನಲ್ಲಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ: ಮಂಡ್ಯದಲ್ಲಿ ಕಾನ್ಸ್ಟೇಬಲ್ ಮೇಲೂ ದರ್ಶನ್ ಪಟಾಲಂ ಹಲ್ಲೆ! FIR ಸ್ವೀಕರಿಸಲು ಪೊಲೀಸ್ ಇಲಾಖೆಯೇ ನಕಾರ!
ಉಳಿದಂತೆ ರಾಜರಾಜೇಶ್ಚರಿ ಪೊಲೀಸ್ ಠಾಣೆಯಲ್ಲಿ ಮೊ.ಸಂ. 144/2024 ಅಡಿ ಕಲಂ 289 IPC ಅಡಿ ದೂರು ದಾಖಲಾಗಿತ್ತು. ಸದ್ಯ ಈಗ ಮತ್ತೊಂದು ಕೇಸ್ ದಾಖಲಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮತ್ತೊಂದು ಕೇಸ್ ದಾಖಲಾಗಿದೆ.
ಇದನ್ನೂ ಓದಿ: ಮಾಜಿ ಪತಿಗೆ ಹುಟ್ಟಿದ ಮಗುವಿನ ಮೇಲೆ 3ನೇ ಪತಿಯಿಂದ ಕ್ರೌರ್ಯ.. ಮಲತಂದೆಯ ಮೃಗೀಯ ವರ್ತನೆಗೆ ಆಸ್ಪತ್ರೆಗೆ ದಾಖಲಾದ ಕಂದ
ಪತ್ನಿ ಮೇಲೆ ಹಲ್ಲೆ ಮಾಡಿ ಒಮ್ಮೆ ಜೈಲು ಸೇರಿ 26 ದಿನ ಸೆರೆವಾಸ ಅನುಭವಿಸಿದ್ದ ಪ್ರಕರಣ ದರ್ಶನ್ ಮೇಲಿತ್ತು. ಈಗ ಕೊಲೆ ಆರೋಪದಲ್ಲಿ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ