ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ಸಿನಿಮಾ ವೀಕ್ಷಣೆ, ದರ್ಶನ್ ನಡೆ ಬಗ್ಗೆ ಭಾರೀ ಚರ್ಚೆ..!

author-image
Ganesh
Updated On
ಅಂಬಿ ಅಪ್ಪಾಜಿ ಹುಟ್ಟು ಹಬ್ಬಕ್ಕೆ ನಟ ದರ್ಶನ್​ ಸ್ಪೆಷಲ್​ ವಿಶ್​.. ಹೇಳಿದ್ದೇನು..?
Advertisment
  • ಬೆನ್ನು ನೋವು ಅಂತಾ ನೆಪ ಹೇಳಿ ಕೋರ್ಟ್​ಗೆ ದರ್ಶನ್ ಬಂಕ್!
  • ಬೆನ್ನು ನೋವಿದ್ರೂ ಆಪ್ತ ಧನ್ವೀರ್​ ಸಿನಿಮಾ ನೋಡಿದ ದಾಸ!
  • ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ಸಿನಿಮಾ ವೀಕ್ಷಣೆ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣ ಸ್ನೇಹಿತ ಧನ್ವೀರ್ ಅಭಿನಯದ ವಾಮನ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗ್ತಿದೆ. ಗೆಳೆಯನ ಸಿನಿಮಾ ದರ್ಶನ್ ಸಾಥ್ ನೀಡಿದ್ದು, ಪ್ರೀಮಿಯರ್ ಶೋನಲ್ಲಿ ಭಾಗಿಯಾಗಿದ್ರು. ಆದ್ರೆ ಮೊನ್ನೆ ಕೋರ್ಟ್​ಗೆ ಹಾಜರಾಗದ ದರ್ಶನ್​ ನಿನ್ನೆ ಸಿನಿಮಾ ನೋಡಲು ಬಂದಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.

ನಟ ದರ್ಶನ್ ಮತ್ತು ಸಂಗಡಿಗರ ವಿರುದ್ಧ ಗಂಭೀರ ಆರೋಪ ಇದೆ. ರೇಣುಕಾಸ್ವಾಮಿ ಕೇಸ್ ಸಂಬಂಧ ಏಪ್ರಿಲ್​ 8 ರಂದು ಕೋರ್ಟ್​ ವಿಚಾರಣೆಗೆ ಹಾಜರಾಗುವಂತೆ ಷರತ್ತು ವಿಧಿಸಿತ್ತು. ಕೋರ್ಟ್​ಗೆ ಹಾಜರಾಗದ ನಟ ದರ್ಶನ್, ನಿನ್ನೆ ಪ್ರಾಣ ಸ್ನೇಹಿತನ ಸಿನಿಮಾ ನೋಡಕ್ಕೆ ಬಂದಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಧನ್ವೀರ್​ ಸಿನಿಮಾ ನೋಡಿದ ದಾಸ!

ಕೊಲೆ ಕೇಸ್​ನಲ್ಲಿ ಬೆಂಗಳೂರು ನಗರ ಸಿಸಿಎಚ್ 57ನೇ ನ್ಯಾಯಾಲಯ​ ಡೇಟ್​ ಕೊಟ್ಟಿತ್ತು. ಆ ದಿನ ರೇಣುಕಾಸ್ವಾಮಿ ಕೊಲೆ ಕೇಸ್​ನ ಆರೋಪಿ ಪವಿತ್ರಾ ಗೌಡ ಸೇರಿ ಇತರೆ 16 ಹಾಜರಾಗಿದ್ರು. ಈ ಕೇಸ್​ನ ಎ2 ಆರೋಪಿ ನಟ ದರ್ಶನ್​ ಮಾತ್ರ ಬಂದಿರಲಿಲ್ಲ.. ಶೂಟಿಂಗ್ ಒತ್ತಡ.. ಬೆನ್ನು ನೋವು.. ಅಂತಾ ನೆಪ ಹೇಳಿ ಆಬ್ಸೆಂಟ್ ಆಗಿದ್ರು. ನಟ ದರ್ಶನ್‌ ಗೈರನ್ನ ಗಮನಿಸಿದ ನ್ಯಾಯಾಧೀಶರು ದರ್ಶನ್ ವಕೀಲರಿಗೆ ಎಚ್ಚರಿಕೆ ನೀಡಿದ್ರು. ಪ್ರಕರಣದ ವಿಚಾರಣೆ ಇದ್ದ ದಿನ ಕೋರ್ಟ್‌ಗೆ ಹಾಜರಾಗಬೇಕು ಅಂತಾ ಗರಂ ಆಗಿದ್ದರು.

ಇದನ್ನೂ ಓದಿ: ಬೆನ್ನು ನೋವಿನಲ್ಲೇ ಪ್ರಾಣ ಸ್ನೇಹಿತನ ಸಿನಿಮಾ ನೋಡಲು ಬಂದ ನಟ ದರ್ಶನ್; 10 ಫೋಟೋಗಳು ಇಲ್ಲಿವೆ!

publive-image

ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ಸಿನಿಮಾ ವೀಕ್ಷಣೆ!

ಮೊನ್ನೆ ಕೋರ್ಟ್​ಗೆ ಹಾಜರಾಗದ ದರ್ಶನ್, ನಿನ್ನೆ ಸೆಲೆಬ್ರಿಟಿಗಳಿಗೆ ಅಂತಾನೇ ಆಯೋಜಿಸಿದ್ದ ವಾಮನ ಸಿನಿಮಾದ ಪ್ರೀಮಿಯರ್ ಶೋಗೆ ಹಾಜರಿ ಹಾಕಿದ್ದಾರೆ. ಇದು ದರ್ಶನ್​ ಪ್ರಾಣ ಸ್ನೇಹಿತ ಧನ್ವೀರ್ ನಟನೆಯ ಸಿನಿಮಾ. ಆದ್ದರಿಂದ ದಾಸ ಸಪೋರ್ಟ್ ಮಾಡಲು ಬಂದಿದ್ದರು.

ಇನ್ನು ಬೆಂಗಳೂರಿನ ಖಾಸಗಿ ಮಾಲ್​ನಲ್ಲಿ ಸಿನಿಮಾ ಪ್ರದರ್ಶನ ಏರ್ಪಡಿಸಿದ್ದು, ದರ್ಶನ್ ಅವರು ಬಂದ ಕೂಡಲೇ ಅಭಿಮಾನಿಗಳು ಮುತ್ತಿಕೊಂಡ್ರು. ಡಿ ಬಾಸ್ ಎಂದು ಜೈಕಾರ ಕೂಗಲು ಆರಂಭಿಸಿದ್ರು. ಕುಂಟುತ್ತಲೇ ಸಾಗಿದ ದರ್ಶನ್, ಚಿತ್ರತಂಡದ ಜೊತೆ ಕುಳಿತು ವಾಮನ ಸಿನಿಮಾ ನೋಡಿದ್ರು.

ಇದನ್ನೂ ಓದಿ: ಮೋಹನ್ ಬಾಬು ಮನೆ ರಾಮಾಯಣ.. ಚಂದ್ರಮುಖಿ ಬಂಗಲೆ ಮುಂದೆ ಮನೋಜ್ ಪ್ರತಿಭಟನೆ ಯಾಕೆ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment