Advertisment

‘ಅಲ್ಲಿ ಏನಾಗ್ತಿದೆ ಅನ್ನೋದು ನನಗೆ ಗೊತ್ತೇ ಇಲ್ಲ, ಸರ್..’ ಅಧಿಕಾರಿಗಳ ಮುಂದೆ ದರ್ಶನ್ ಮತ್ತೊಂದು ಹೇಳಿಕೆ

author-image
Ganesh
Updated On
10ಕ್ಕೂ ಹೆಚ್ಚು ಜನರ ವಶಕ್ಕೆ ಪಡೆಯಲಾಗಿದೆ -ದರ್ಶನ್ ಅರೆಸ್ಟ್ ಬಗ್ಗೆ ಪೊಲೀಸ್ ಕಮಿಷನರ್ ಸ್ಫೋಟಕ ಮಾಹಿತಿ
Advertisment
  • ದರ್ಶನ್ ಅಂಡ್ ಗ್ಯಾಂಗ್​ನಿಂದ ರೇಣುಕಾಸ್ವಾಮಿ ಹತ್ಯೆ ಆರೋಪ
  • A2 ದರ್ಶನ್ ತೂಗುದೀಪರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ
  • ಸರ್.. ನಾನು ರೇಣುಕಾಸ್ವಾಮಿಗೆ ಹೆದರಿಸಿದ್ದು ಅಷ್ಟೇ-ದರ್ಶನ್

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ಅಂಡ್ ಗ್ಯಾಂಗ್​ ವಿರುದ್ಧದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ.. ಪ್ರಕರಣಕ್ಕೆ ಸಂಬಂಧಿಸಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರಿಂದಲೇ ಮಾಹಿತಿ ಕಲೆ ಹಾಕಲಾಗಿದೆ ಎನ್ನಲಾಗಿದೆ.

Advertisment

ಸರ್.. ನಾನು ರೇಣುಕಾಸ್ವಾಮಿಗೆ ಹೆದರಿಸಿದ್ದು ಅಷ್ಟೇ ಸರ್. ನಾನು ಕೊಲೆ ಮಾಡಿಲ್ಲ ಸರ್. ನಾನು ಕೊಲೆ ಮಾಡಿ ಅಂತಾನೂ ಯಾರಿಗೂ ಹೇಳಿಲ್ಲ ಎಂದಿದ್ದಾರೆ. ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಮಾಡಿದ್ದಾನೆ ಅನ್ನೋದಷ್ಟೇ ನನಗೆ ಗೊತ್ತಾಗಿದ್ದು. ಅದು ಎಲ್ಲಿ ಹೇಗೆ ಅನ್ನುವುದು ನನಗೆ ಗೊತ್ತಿಲ್ಲ. ನಾನು ಸೋಷಿಯಲ್ ಮೀಡಿಯಾ ಯೂಸ್ ಮಾಡಲ್ಲ. ಸೋಶಿಯಲ್ ಯೂಸ್ ಮಾಡೋದು ನನ್ನ ಟೀಂ. ಅಲ್ಲಿ ಏನಾಗ್ತಿದೆ ಅನ್ನುವುದು ನನಗೆ ಗೊತ್ತಿಲ್ಲ ಸರ್ ಎಂದು ದರ್ಶನ್ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:Watch: ‘ಕೊನೆ ಸಲ ಅಪ್ಪನ ನೋಡುತ್ತಾನೆ ಕರೆಸಿ ಸಾರ್..’ ದರ್ಶನ್ ಕೇಸ್​ನಲ್ಲಿ ಅರೆಸ್ಟ್ ಆಗಿರೋ ಅನು ಅಕ್ಕ ಕಣ್ಣೀರು

ಇನ್ನು ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧಿಸಿದಂತೆ ದರ್ಶನ್ ಮತ್ತು  ಗ್ಯಾಂಗ್ ವಿಚಾರಣೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಪೊಲೀಸರು ಈ ಹತ್ಯೆ ಕೇಸ್​ಗೆ ಸಂಬಂಧಿಸಿ ನಟ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳ ಸ್ವ-ಇಚ್ಚಾ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಕೊಲೆ ನಡೆದ ಸ್ಥಳ, ಮೃತದೇಹ ಪತ್ರೆಯಾದ ಸ್ಥಳದಲ್ಲಿ ಮಹಜರು ಪೂರ್ಣಗೊಂಡಿದೆ. ತಾಂತ್ರಿಕ ಸಾಕ್ಷ್ಯಗಳ ಸಂಗ್ರಹ, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಸಾಂಧರ್ಬಿಕ ಸಾಕ್ಷ್ಯಗಳ ಸಂಗ್ರಹ ಮಾಡಲಾಗಿದೆ. ತನಿಖೆ ಬೇಕಾದ ಎಲ್ಲಾ ಅಗತ್ಯ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.

Advertisment

ಇದನ್ನೂ ಓದಿ:ದರ್ಶನ್​​ಗೆ ಕಾಡಿತ್ತು ಪಶ್ಚತಾಪ.. ‘ಡೆವಿಲ್ ಶೂಟಿಂಗ್​​​ನಲ್ಲಿ ನಟ ಹೇಗಿದ್ದರು ಅಂದರೆ..’

ಬಹುತೇಕ ಕೊಲೆ ಪ್ರಕರಣ ತನಿಖೆಯನ್ನು ಪೊಲೀಸರು ಅಂತಿಮ ಹಂತಕ್ಕೆ ತಂದಿದ್ದಾರೆ. ಭಾನುವಾರು ಬಂಧಿತ ಆರೋಪಿಗಳನ್ನ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಕೋರಮಂಗಲದ ನ್ಯಾಯಾಧೀಶರ ನಿವಾಸಕ್ಕೆ ಹಾಜರು ಪಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹೀಗಾಗಿ ಬಹುತೇಕ ಭಾನುವಾರ ದರ್ಶನ್ ಅಂಡ್ ಗ್ಯಾಂಗ್ ಜೈಲು ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ದರ್ಶನ್​​ ಕೇಸ್​​​ನಲ್ಲಿ ರಾಜಕಾರಣಿಗಳ ಪ್ರಭಾವ? ರಕ್ಷಣೆಗೆ ಬಂದ್ರಾ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment