Advertisment

ಅಪರಿಚಿತ ವಾಹನ ಡಿಕ್ಕಿ.. ಭೀಕರ ಅಪಘಾತಕ್ಕೆ ಸ್ಥಳದಲ್ಲೇ ಪ್ರಾಣಬಿಟ್ಟ ದರ್ಶನ್ ಅಭಿಮಾನಿ

author-image
Ganesh
Updated On
ಅಪರಿಚಿತ ವಾಹನ ಡಿಕ್ಕಿ.. ಭೀಕರ ಅಪಘಾತಕ್ಕೆ ಸ್ಥಳದಲ್ಲೇ ಪ್ರಾಣಬಿಟ್ಟ ದರ್ಶನ್ ಅಭಿಮಾನಿ
Advertisment
  • ಸೋಸಲೆ ಗ್ರಾಮದಲ್ಲಿ ನಡೆದ ಭೀಕರ ಅಪಘಾತ
  • ಆಸ್ಪತ್ರೆ ಮುಂಭಾಗ ಕುಟುಂಬಸ್ಥರ ಆಕ್ರಂದನ
  • ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮೈಸೂರು: ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಸೋಸಲೆ ಗ್ರಾಮದ ಬಳಿ ನಡೆದಿದೆ.

Advertisment

ರವಿ (23) ಮೃತ ಬೈಕ್ ಸವಾರ. ಮೃತ ರವಿ ನರಸೀಪುರ ಪಟ್ಟಣದ ವಿನಾಯಕ ಕಾಲೋನಿ ನಿವಾಸಿ ಆಗಿದ್ದರು. ಸ್ಥಳಕ್ಕೆ ಬನ್ನೂರು ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ. ಮೃತ ರವಿಯ ಟಿಶರ್ಟ್​ ಮೇಲೆ ಜೈಲು ಸೇರಿರುವ ನಟ ದರ್ಶನ್ ಅವರ ಫೋಟೋ ಇದ್ದು, ದರ್ಶನ್ ಅಭಿಮಾನಿ ಆಗಿದ್ದರು ಎಂದು ತಿಳಿದುಬಂದಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆ ಮುಂಭಾಗ ಕುಟುಂಬಸ್ಥರು ದೌಡಾಯಿಸಿದ್ದಾರೆ. ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮಳೆ ಮಾಡಿದ ಅನಾಹುತಕ್ಕೆ ನಾಲ್ವರು ಸಾವು.. ಇಂದು ಮುಂಜಾನೆ ನಡೆಯಿತು ಘೋರ ದುರಂತ.. Photos

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment