/newsfirstlive-kannada/media/post_attachments/wp-content/uploads/2024/12/DARSHAN-FANS-CELEBRATION.jpg)
ದರ್ಶನ್ ತೂಗುದೀಪ್​ಗೆ ಹೈಕೋರ್ಟ್​​ನಲ್ಲಿ ಪೂರ್ಣಾವಧಿ ಜಾಮೀನು ಸಿಕ್ಕ ಬಳಿಕ ದರ್ಶನ್ ಫ್ಯಾನ್ಸ್​ಗಳ ಸಂಬ್ರಮ ಜೋರಾಗಿದೆ. ಹೊಸ ವರ್ಷ ಜನವರಿ ಒಂದಲ್ಲ ಸರ್ ನಮಗೆ ಇಂದೇ ಹೊಸ ವರ್ಷ ಎಂದು ಹೇಳಿದ್ದಾರೆ.
ದರ್ಶನ್ ದಾಖಲಾಗಿರುವ ಬಿಜಿಎಸ್​ ಆಸ್ಪತ್ರೆಯ ಮುಂದೆ ಹಾಗೂ ರಾಜರಾಜೇಶ್ವರಿಯಲ್ಲಿರುವ ದರ್ಶನ್ ನಿವಾಸದ ಮುಂದೆ ಅಭಿಮಾನಿಗಳು ಜಮಾಯಿಸಿದ್ದಾರೆ. ಆಸ್ಪತ್ರೆಯ ಮುಂದೆ ನಿಲ್ಲಬೇಡಿ ಎಂದು ಪೊಲೀಸರು ಅಭಿಮಾನಿಗಳನ್ನು ಚದುರಿಸಿದ್ದಾರೆ.
ಇದನ್ನೂ ಓದಿ: ನಟ ದರ್ಶನ್​ಗೆ​ ಜಾಮೀನು; ಸ್ಯಾಂಡಲ್​ವುಡ್​ ತಾರೆಯರು ಫುಲ್​ ಖುಷ್
ಇತ್ತ ರಾಜರಾಜೇಶ್ವರಿ ನಗರದಲ್ಲಿ ಅಭಿಮಾನಿಗಳು ದರ್ಶನ್ ನಿವಾಸ ತೂಗುದೀಪ ನಿಲಯದ ಬೋರ್ಡಿಗೆ ಹಾರ ಹಾಕಿ ಘೋಷಣೆ ಕೂಗಿ ಸಂಭ್ರಮಾಚರಣೆ ನಡೆಸುತ್ತಿದ್ದಾರೆ.
ಇನ್ನು ಹುಬ್ಬಳ್ಳಿಯಲ್ಲಿಯೂ ಕೂಡ ದರ್ಶನ್ ಅಭಿಮಾನಿಗಳು ಸಂಭ್ರಮ ಆಚರಿಸಿದ್ದಾರೆ. ಬಾಸ್.. ಬಾಸ್.. ಡಿಬಾಸ್, ಎಂದು ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us