ದರ್ಶನ್​ ಬೇಡ, ಡಿ ಬಾಸ್​ ಬೇಡ.. ವಾಹನಕ್ಕೆ ಅಂಟಿಸಿರೋ ಸ್ಟಿಕ್ಕರ್​ ಕಿತ್ತೆಸೆದ ಫ್ಯಾನ್ಸ್​

author-image
AS Harshith
Updated On
ದರ್ಶನ್​ ಬೇಡ, ಡಿ ಬಾಸ್​ ಬೇಡ.. ವಾಹನಕ್ಕೆ ಅಂಟಿಸಿರೋ ಸ್ಟಿಕ್ಕರ್​ ಕಿತ್ತೆಸೆದ ಫ್ಯಾನ್ಸ್​
Advertisment
  • ನೆಚ್ಚಿನ ನಟನ ವಿರುದ್ಧ ತಿರುಗಿ ಬಿದ್ದ ಅಭಿಮಾನಿಗಳು
  • ವಾಹನದ ಮೇಲಿರುವ ಸ್ಟಿಕ್ಕರ್ ಕಿತ್ತುಹಾಕಿದ ಡಿ ಬಾಸ್​ ಫ್ಯಾನ್ಸ್​
  • ನಟ ದರ್ಶನ್ ಆ್ಯಂಡ್​ ಗ್ಯಾಂಗ್​ನ ಕರಾಳ ಮುಖ ಒಂದೊಂದೇ ಬಯಲು

ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ದರ್ಶನ್​ ಆ್ಯಂಡ್​ ಗ್ಯಾಂಗ್​ ಅರೆಸ್ಟ್​ ಆಗಿದ್ದು, 6 ಜನರು ಜೈಲು ಪಾಲಾಗಿದ್ದಾರೆ. ದರ್ಶನ್​ ಸೇರಿ ಉಳಿದ 4 ಜನರು 11 ದಿನದಿಂದ ಪೊಲೀಸರ ವಶದಲ್ಲಿದ್ದಾರೆ. ಈಗಾಗಲೇ ಹಂತಕರ ಒಂದೊಂದು ಮುಖ ಅನಾವರಣಗೊಂಡಿದ್ದು, ಆರೋಪಿ ದರ್ಶನ್​ಗೆ ಬಹುಪಾಲು ಶಿಕ್ಷೆಯಾಗುವ ಸಾಧ್ಯತೆ ಇದೆ. ಆದರೆ ಇತ್ತ​ ನೆಚ್ಚಿನ ನಟನನ್ನು ನೆಚ್ಚಿಕೊಂಡಿದ್ದ ಅಭಿಮಾನಿಗಳು ರೇಣುಕಾಸ್ವಾಮಿ ಕೊಲೆಯ ಕೇಸ್​ ನಂತರ ತಿರುಗಿಬಿದ್ದಿದ್ದಾರೆ. ದರ್ಶನ್​ ಮಾಡಿರುವ ಕೃತ್ಯ ಬಯಲಾಗುತ್ತಿದ್ದಂತೆಯೇ ಅತ್ತ ಡಿ ಬಾಸ್ ಫ್ಯಾನ್ಸ್​ ತಮ್ಮ ವಾಹನದ ಮೇಲಿರುವ ಸ್ಟಿಕ್ಕರ್ ಕಿತ್ತುಹಾಕುವ ಮೂಲಕ ಈ ಹತ್ಯೆಯನ್ನು ಖಂಡಿಸಿದ್ದಾರೆ.

publive-image

ಇದನ್ನೂ ಓದಿ: ದರ್ಶನ್ ಕೊಲೆ ಆರೋಪ ಬೆನ್ನಲ್ಲೇ ‘ಡಿ ಗ್ಯಾಂಗ್’ ಟೈಟಲ್ ಗೆ ಭಾರೀ ಡಿಮ್ಯಾಂಡ್! ಮೊದಲು ರಿಜಿಸ್ಟರ್​ ಮಾಡಿಸಿದ್ಯಾರು?

ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ನಟ ದರ್ಶನ್ ಕರಾಳ ಮುಖ ಬಯಲಾದ ಹಿನ್ನೆಲೆ ವಾಹನಗಳಿಗೆ ಅಂಟಿಸಿರುವ ರೇಡಿಯಂ ಸ್ಟಿಕ್ಕರನ್ನು ಚಾಕು ಬಳಿ ತೆಗೆದುಹಾಕುತ್ತಿದ್ದಾರೆ. ಡಿ ಬಾಸ್ ಹೆಸರು ನಮ್ಮ ವಾಹನದಲ್ಲಿ ಬೇಡ ಎಂದು ತೆಗೆಯುತ್ತಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ಅಮ್ಮನಿಗೆ ಅನಾರೋಗ್ಯ, ಕಣ್ಣೀರು ಹಾಕಿತ್ತಿರೋ ಅಕ್ಕ.. ದರ್ಶನ್​ ನಂಬಿ ಜೈಲು ಸೇರಿದ ನಂದೀಶ್ ಕುಟುಂಬಕ್ಕೆ ಸಂಕಷ್ಟ

ಕರ್ನಾಟಕದಲ್ಲಿ ಅನೇಕರು ನಟ ದರ್ಶನ್ ಸಿನಿಮಾವನ್ನು ಫಾಲೋ ಮಾಡುತ್ತಿದ್ದರು. ನಟನ ಮೇಲಿನ ಅಭಿಮಾನಕ್ಕಾಗಿ ಬೈಕ್, ಕಾರ್ ಗಳ ಮೇಲೆ ಡಿ ಬಾಸ್ ಸ್ಟಿಕ್ಕರ್ ಅಂಟಿಸುತ್ತಿದ್ದರು. ಆದರೀಗ ರೇಣುಕಾಸ್ವಾಮಿ ಭೀಕರ ಹತ್ಯೆಯ ಹಿಂದಿನ ಕೈಗಳಲು ಯಾರು ಎಂಬ ಸಂಗತಿ ಬಯಲಾದಂತೆ ಫ್ಯಾನ್ಸ್​ ವಾಹನದ ಮೇಲಿರುವ ಸ್ಟಿಕ್ಕರ್​ ಕಿತ್ತು ಹಾಕುತ್ತಿದ್ದಾರೆ.

ಇದನ್ನೂ ಓದಿ: ಕುಡಿದ ಅಮಲಿನಲ್ಲಿ ಗಲಾಟೆ.. ಕ್ಷುಲ್ಲಕ ಕಾರಣಕ್ಕೆ ಅರಣ್ಯಾಧಿಕಾರಿಯನ್ನು ಅಟ್ಟಾಡಿಸಿ ಕೊಲೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment