ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ಗೆ ಬೇಲ್
ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಹೋದ ಬಳಿಕ ಬೆನ್ನುನೋವು
ಸರಿಯಾದ ಚಿಕಿತ್ಸೆಗಾಗಿ ದರ್ಶನ್ಗೆ ಮಧ್ಯಂತರ ಜಾಮೀನು ನೀಡಿದ ಕೋರ್ಟ್
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ A1 ಆರೋಪಿಯಾಗಿರುವ ದರ್ಶನ್ಗೆ ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ. ಬಳ್ಳಾರಿ ಜೈಲು ಸೇರಿದ ಬಳಿಕ ಸಂಕಷ್ಟ ಅನುಭವಿಸುತ್ತಿದ್ದ ದರ್ಶನ್ಗೆ ಕೋರ್ಟ್ ಅಲ್ಪಾವಧಿಯ ಮುಕ್ತಿ ನೀಡಿದೆ. ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್ಗೆ ಚಿಕಿತ್ಸೆಯ ಅನಿವಾರ್ಯತೆ ಇರುವ ಕಾರಣ ಮಧ್ಯಂತರ ಜಾಮೀನು ಸಿಕ್ಕಿದೆ. ಇದರಿಂದಾಗಿ ದರ್ಶನ್ಗೆ ಸ್ಪಲ್ಪ ಸಮಾಧಾನವಾದಂತಿದೆ.
ತೀರ್ಪಿನ ಪ್ರಮುಖ ಅಂಶ:
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಕಾರಣ ಆತನನ್ನು ಕರೆಸಿ ಕೊಲೆ ಮಾಡಲಾಗಿತ್ತು. ಆರ್ ಆರ್ ನಗರದ ಪಟ್ಟಣಗೆರೆ ಶೆಡ್ನಲ್ಲಿ ಆರೋಪಿ ದರ್ಶನ್ ಮತ್ತು ಆತನ ಸಹಚರರು ರೇಣುಕಾಸ್ವಾಮಿಗೆ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದರು.
ಬಳಿಕ ರೇಣುಕಾಸ್ವಾಮಿ ಶವವನ್ನು ಸುಮನಹಳ್ಳಿ ಸೇತುವೆ ಬಳಿ ಎಸೆದಿದ್ದರು. ಈ ಪ್ರಕರಣದ ಸಂಬಂಧ ತನಿಖೆ ನಡೆಸಿದ ಪೊಲೀಸರಿಗೆ ಇದರಲ್ಲಿ ಸ್ಯಾಂಡಲ್ವುಡ್ ನಟ ದರ್ಶನ್ ಇರುವ ಸಂಗತಿ ಬಯಲಾಗಿದೆ. ಪ್ರಕರಣದ ಸಂಬಂಧ ಜೂನ್ 11ರಂದು ದರ್ಶನ್ರನ್ನು ಅರೆಸ್ಟ್ ಮಾಡಲಾಯ್ತು.
ಇದನ್ನೂ ಓದಿ: Darshan: ಇಂದು ಮಧ್ಯಂತರ ಜಾಮೀನು ತೀರ್ಪು.. ಬೆನ್ನು ನೋವಿನಿಂದ ದರ್ಶನ್ಗೆ ಇಷ್ಟೊಂದು ಅಪಾಯವಿದೆಯಾ?
ಪ್ರಾರಂಭದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ಗೆ ಜೈಲಿನೊಳಗೆ ವಿಡಿಯೋ ಕರೆ, ರಾಜ ಮರ್ಯಾದೆ ನೀಡುತ್ತಿರುವ ವಿಚಾರ ದೃಶ್ಯ ಸಮೇತ ಬೆಳಕಿಗೆ ಬಂದಿತ್ತು. ಇದೇ ಕಾರಣಕ್ಕೆ ದರ್ಶನ್ನನ್ನು ಬಳ್ಳಾರಿ ಶಿಫ್ಟ್ ಮಾಡಲಾಯ್ತು. ಬಳಿಕ ದರ್ಶನ್ಗೆ ಬೆನ್ನು ನೋವು ಜಾಸ್ತಿಯಾಗಿತ್ತು. ಕೊನೆಗೆ ಫಿಜಿಯೋಥೆರಪಿ ಚಿಕಿತ್ಸೆ ಪಡೆದರು. ಆದರೂ ನೋವು ಕಡಿಮೆಯಾಗಿರಲಿಲ್ಲ. ಹೀಗಾಗಿ ದರ್ಶನ್ಗೆ ಆಪರೇಷನ್ ಆಗತ್ಯವಿದ್ದು, ಮಧ್ಯಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಗಿದೆ, ಇದರ ವಾದ-ಪ್ರತಿವಾದ ಮುಕ್ತಾಯವಾಗಿ, ಇಂದು ಕೋರ್ಟ್ ತೀರ್ಪು ನೀಡಿದೆ.
ಇದನ್ನೂ ಓದಿ: 1 ಕೆಜಿಗೆ 3 ಲಕ್ಷ ರೂಪಾಯಿ.. ಪರಿಶುದ್ಧ ಕೇಸರಿ ಹೇಗೆ ತಯಾರಿಸುತ್ತಾರೆ? ಚರ್ಮದ ಸಮಸ್ಯೆಗೆ ಇದೇ ರಾಮಬಾಣ!
ದರ್ಶನ್ಗೆ ಮಧ್ಯಂತರ ಬೇಲ್ ನೀಡಲೆಂದು ವಿಮ್ಸ್ನ ಚಿಕಿತ್ಸಕ ವಿಭಾಗದ ಪ್ರೊಫೆಸರ್ ಮತ್ತು ಎಚ್‌ಒಡಿ ಎಸ್.ವಿಶ್ವನಾಥ್ ಸಹಿಯ 26 ದಾಖಲೆಗಳನ್ನು ಕೋರ್ಟ್ಗೆ ನೀಡಲಾಗಿದೆ. ಇದರಲ್ಲಿ ಫಿಜಿಯೊಥೆರಪಿ, ನೋವು ನಿವಾರಕ, ನರದ ಉಪಚಾರಕ್ಕೆ ಔಷಧ ತೆಗೆದುಕೊಳ್ಳುವುದು. ಲಂಬಾರ್ ಬ್ರೇಸ್ (ಸೊಂಟಕ್ಕೆ ಕಟ್ಟುವ ಪಟ್ಟಿ) ಉಪಯೋಗಿಸುವುದರ ಕುರಿತು ಬರೆಯಲಾಗಿತ್ತು. ಈ ದಿಸೆಯಲ್ಲಿ ರೋಗಿಗೆ ಉಪಚಾರದ ಬಳಿಕ ಸ್ವಲ್ಪ ನೋವು ನಿವಾರಣೆಯಾಗಿದೆ. ಆದರೆ ಹೆಚ್ಚುವರಿ ಚಿಕಿತ್ಸೆಗಾಗಿ ಈಗ ಕೋರ್ಟ್ ದರ್ಶನ್ಗೆ ಮಧ್ಯಂತರ ಜಾಮೀನು ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ