Advertisment

ದರ್ಶನ್​​ಗೆ ಫುಡ್​​ ಪಾಯಿಸನ್​ ಆಗಿರೋದು ನಿಜಾನಾ? ವೈದ್ಯಕೀಯ ವರದಿಯಲ್ಲಿ ಸತ್ಯ ಬಹಿರಂಗ

author-image
AS Harshith
Updated On
ಸ್ನಾನ ಇಲ್ಲ, ಜಿಮ್​ ಇಲ್ಲ.. ನೆಲದ ಮೇಲೆ ಕೂರ್ಬೇಕು, ಅನ್ನ ಸಾಂಬರ್​ ತಿನ್ಬೇಕು.. ದರ್ಶನ್​ ಈಗಿನ ಪರಿಸ್ಥಿತಿ ಹೇಗಿದೆ?
Advertisment
  • ಮನೆಯೂಟಕ್ಕಾಗಿ ನ್ಯಾಯಾಲಯದ ಮೊರೆ ಹೋದ ದರ್ಶನ್‌
  • ಕೋರ್ಟ್‌ನಲ್ಲಿ ‘ದಾಸ’ನ ಫುಡ್‌ ಪಾಯಿಸನ್ ನಿಜಾಂಶ ಪತ್ತೆ
  • ದರ್ಶನ್‌ಗೆ ಹಿಪ್ ಜಾಯಿಂಟ್, ಬೆನ್ನು ಉರಿ ನೋವಿರೋದು ನಿಜ

ಕೊಲೆ ಆರೋಪದಲ್ಲಿ ಜೈಲು ಸೇರಿರೋ ದರ್ಶನ್​ಗೆ ಮನೆಯೂಟದ ಮೇಲೆ ಆಸೆ ಬಂದಿದೆ. ಹೊರಗಡೆ ತಿಂದುಂಡ ದರ್ಶನ್​ಗೆ ಜೈಲಿನ ಉಪ್ಪು-ಸೊಪ್ಪಿನ ಊಟ, ದೇಹವನ್ನೇ ಸಣಕಲು ಮಾಡಿದೆ. ಹೇಗಾದ್ರೂ ಮಾಡಿ ಮನೆಯೂಟ ಬೇಕು ಅಂತ ಮಕ್ಕಳಂತೆ ಗೋಗರೆದು ಕೋರ್ಟ್​ನಲ್ಲಿ ಅಲೆದಾಡ್ತಿದ್ದಾರೆ. ನಿನ್ನೆಯ ಸಹ ವಿಚಾರಣೆ ನಡೆದಿದೆ. ಆದ್ರೆ, ಕೋರ್ಟ್‌ನ ವಾದ-ಪ್ರತಿವಾದದಲ್ಲಿ ದರ್ಶನ್‌ ಫುಡ್‌ಪಾಯಿಸನ್‌ ಕತೆಯ ಅಸಲಿಯತ್ತು ಬಯಲಾಗಿದೆ.

Advertisment

ಮಾಡಿದ್ದು ಭೀಕರ ಹತ್ಯೆ. ಕೇಸ್​ನಲ್ಲಿ ಲಾಕ್​​ ಆಗಿ ಜೈಲು ಸೇರಿದ ಪುಂಡರ ತಂಡದ ನಾಯಕ ದರ್ಶನ್​​ಗೆ ಜೈಲೂಟ ಒಗ್ತಿಲ್ವಂತೆ. ಸಿನಿಮಾ ಮಾಡಿಕೊಂಡಿದ್ದ ಸಮಯದಲ್ಲಿ ಚೆನ್ನಾಗಿ ತಿನ್ನುತ್ತಾ ಮೈ ಬೆಳೆಸಿಕೊಂಡಿದ್ದ ದರ್ಶನ್​​ಗೆ ಈಗ ನನಗೆ ಆ ಊಟದ ನೆನಪಾಗಿದೆ. ಆದ್ರೆ, ಇದು ಪರಪ್ಪನ ಅಗ್ರಹಾರ ಜೈಲು. ಈ ಸರಳಿ ಹಿಂದಿರೋದು ಭರ್ತಿ 5000 ಕೈದಿಗಳು. ಅದರಲ್ಲಿ ಈ ಭೂಪತಿನೂ ಒಬ್ಬ. ಈ ಊಟಕ್ಕೆ ಕೋರ್ಟ್​​ ಮೂರು ದಿನ ಕಾಯಬೇಕು​ ಎಂದು ಹೇಳಿದೆ.

publive-image

ಮನೆಯೂಟಕ್ಕಾಗಿ ನ್ಯಾಯಾಲಯಕ್ಕೆ ದರ್ಶನ್‌ ಅರ್ಜಿ ಸಲ್ಲಿಕೆ

ಹೈಕೋರ್ಟ್​ನ ನಿರ್ದೇಶನದಂತೆ 24ನೇ ಎಸಿಎಂಎಂ ಕೋರ್ಟ್​ನಲ್ಲಿ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆದಿದೆ. ಇದೇ 26ರ ಒಳಗೆ ನಿರ್ಧಾರ ಪ್ರಕಟಿಸೋದಾಗಿ ಕೋರ್ಟ್ ಹೇಳಿದೆ. ಅಂದ್ಹಾಗೆ ಮನೆಯೂಟಕ್ಕೆ ಹಲುಬುತ್ತಿರುವ ದರ್ಶನ್‌ಗೆ ನಿಜವಾಗ್ಲೂ ಫುಡ್‌ಪಾಯಿಸನ್ ಆಗಿದ್ಯಾ? ಕೋರ್ಟ್‌ನಲ್ಲಿ ಮೆಡಿಕಲ್ ರಿಪೋರ್ಟ್‌ ಬಗ್ಗೆ ನಡೆದ ಆದ ವಾದ-ಪ್ರತಿವಾದವೇನು?.

publive-image

ನಿನ್ನೆ ಕೋರ್ಟ್‌ನಲ್ಲಿ ವಿಚಾರಣೆ ಹಿನ್ನೆಲೆ ಮೂವರು ವೈದ್ಯರು ದರ್ಶನ್‌ರ ಆರೋಗ್ಯ ತಪಾಸಣೆ ನಡೆಸಿದ್ರು. ಬಳಿಕ ಕೋರ್ಟ್‌ಗೆ ಸಲ್ಲಿಸಿರೋ ಜೈಲು ಆಸ್ಪತ್ರೆ ವೈದ್ಯಕೀಯ ವರದಿಯಲ್ಲಿ ಸತ್ಯ ಬಹಿರಂಗವಾಗಿದೆ. ದರ್ಶನ್‌ಗೆ ಡಯೆರಿಯಾ, ಭೇದಿ ಆಗಿರೋದು ಪತ್ತೆಯಾಗಿಲ್ಲ. ದರ್ಶನ್ ಮೊದಲು ಹೇಳಿದಂತೆ ಪುಡ್ ಪಾಯಿಸನ್ ಕೂಡಾ ಆಗಿಲ್ಲ. ವೈದ್ಯಕೀಯ ಪರೀಕ್ಷೆ ಮಾಡಿದಾಗ ಈ ಸತ್ಯವೂ ಬಹಿರಂಗವಾಗಿದೆ. ದರ್ಶನ್‌ಗೆ ನಡೆದಿರೋ ವೈದ್ಯಕೀಯ ಪರೀಕ್ಷೆ ಬಗ್ಗೆ ಕೋರ್ಟ್‌ನ ವಾದ-ಪ್ರತಿವಾದದಲ್ಲಿ ಅಸಲಿಯತ್ತು ಬಯಲಾಗಿದೆ.

Advertisment

ದರ್ಶನ್​ಗೂ ಇದೆಯಾ ಕೈ ನೋವು

ಇದಷ್ಟೇ ಅಲ್ಲ. ದರ್ಶನ್‌ಗೆ ಹಿಪ್ ಜಾಯಿಂಟ್ ಸಮಸ್ಯೆ ಕಾಣಿಸಿಕೊಂಡಿತ್ತು. ಸದ್ಯ ಈ ಸಮಸ್ಯೆ ಕೂಡಾ ಗುಣಮುಖ ಆಗಿದೆ. ಕೈ ನೋವಿಗೂ ಸಹ ವೈದ್ಯಕೀಯ ಚಿಕಿತ್ಸೆ ನೀಡ್ತಿದ್ದೇವೆ ಅಂತ ಜೈಲಿನ ಆಸ್ಪತ್ರೆ ವೈದ್ಯರು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

publive-image

ಮತ್ತೊಂದೆಡೆ ದರ್ಶನ್‌ ಬೆನ್ನು ಉರಿ ನೋವಿರೋದು ಧೃಡವಾಗಿದೆ. ಅದಕ್ಕಾಗಿ ದರ್ಶನ್‌ಗೆ ಜೈಲು ಆಸ್ಪತ್ರೆಯಲ್ಲಿ ಟ್ರೀಟ್‌ಮೆಂಟ್‌ ಕೂಡಾ ನಡಿತಿದೆ. ದರ್ಶನ್ ಸದ್ಯ ವೈರಲ್ ಫೀವರ್‌ನಿಂದ ಬಳಲುತ್ತಿದ್ದಾರೆ. ಅದಕ್ಕೂ ಸಹ ಟ್ರೀಟ್ಮೆಂಟ್ ಮುಂದುವರೆದಿದೆ ಅಂತ ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜೈಲೂಟವೇ ಫಿಕ್ಸ್​?

ಸದ್ಯ ಜುಲೈ 25ರ ತನಕ ದರ್ಶನ್​ಗೆ ಜೈಲೂಟವೇ ಫಿಕ್ಸ್​ ಆಗಿದೆ. ಆದ್ರೆ, ವೈದ್ಯಕೀಯ ರಿಪೋರ್ಟ್‌ನಲ್ಲಿ ಬೆಳಕಿಗೆ ಬಂದಿರೋ ವಿಚಾರಗಳಿಂದ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಮನೆಯೂಟಕ್ಕೆ ಅನುಮತಿ ಸಿಗುತ್ತಾ? ಇಲ್ವಾ ಅನ್ನೋದು ಜುಲೈ 25ಕ್ಕೆ ಗೊತ್ತಾಗಲಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment