/newsfirstlive-kannada/media/post_attachments/wp-content/uploads/2024/06/DARSHAN_GANG.jpg)
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ನಟ ದರ್ಶನ್ ಆ್ಯಂಡ್ ಗ್ಯಾಂಗ್ ಮತ್ತೆ ಕಸ್ಟಡಿಗೆ ಒಪ್ಪಿಸಲಾಗಿದೆ. ಇನ್ನಷ್ಟು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹ ಮಾಡಲು ಕೋರ್ಟ್ ಅನುಮತಿ ಮೇರೆಗೆ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಕಾರ್ತಿಕ್ ಅಲಿಯಾಸ್ ಕಪ್ಪೆ ಫೋನ್ ಕಸಿದು ಬಚ್ಚಿಟ್ಟಿರುವ ಬಗ್ಗೆ ಆರೋಪಿ ದೀಪಕ್ ಬಾಯ್ಬಿಟ್ಟಿದ್ದಾನೆ. ಪೊಲೀಸರಿಗೆ ಕಾರ್ತಿಕ್ ಶರಣಾಗಲು ನಿರಾಕರಿಸಿದ್ದ. ಇದೇ ಕಾರಣಕ್ಕೆ ಫೋನ್ ಕಸಿದುಕೊಂಡು ಆಟವಾಡಿಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ:ಅಂತಾರಾಷ್ಟ್ರೀಯ ಯೋಗ ದಿನ.. ಉತ್ತಮ ಆರೋಗ್ಯಕ್ಕಾಗಿ ಯೋಗ..!
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ನಡೆದ ಬಳಿಕ ಆರೋಪಿ ಕಾರ್ತಿಕ್ ಅಲಿಯಾಸ್ ಕಪ್ಪೆ ಪೋನ್ ಅನ್ನು ಆರೋಪಿ ದೀಪಕ್ ಬಚ್ಚಿಟ್ಟಿದ್ದನು. ಪೊಲೀಸರ ವಶದಲ್ಲಿರುವ ಆರೋಪಿ ದೀಪಕ್ನನ್ನ ವಿಚಾರಣೆ ಮಾಡಲಾಗುತ್ತಿದೆ. ಈ ವೇಳೆ ಹತ್ಯೆ ನಡೆದ ಬಳಿಕ ಕಾರ್ತಿಕ್ ಪೋನ್ ಕಸಿದುಕೊಂಡು ಪಟ್ಟಣಗೆರೆಯ ಶೆಡ್ನಲ್ಲಿ ಬಚ್ಚಿಟ್ಟಿರುವುದಾಗಿ ಹೇಳಿದ್ದಾನೆ.
ಇದನ್ನೂ ಓದಿ: ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್ ಟಾರ್ಚ್ನಿಂದ ಶಾಕ್.. ದೇಹ ಶೇಕಡಾ 30 ರಷ್ಟು ಸುಟ್ಟು ಹೋಗಿತ್ತು ಮಾಂಸಖಂಡ; ಹೇಗಿತ್ತು ಆ ಕರಾಳ?
ಬಳಿಕ ಶೇಡ್ಗೆ ಹೋಗಿ ಮೊಬೈಲ್ ಪೋನ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ದೀಪಕ್ ಶೆಡ್ ಉಸ್ತುವಾರಿಯಾಗಿ ಎಲ್ಲವನ್ನು ನೋಡಿಕೊಳ್ಳುತ್ತಿದ್ದ. ಅಲ್ಲದೇ ರೇಣುಕಾಸ್ವಾಮಿ ಕೊಲೆ ನಡೆದ ಮೇಲೆ ಕಾರ್ತಿಕ್, ನಿಖಿಲ್, ಹಾಗೂ ಕೇಶವ್ ಮೂರ್ತಿ ಎನ್ನುವರನ್ನು ಪ್ರಕರಣ ಸಂಬಂಧ ಪೊಲೀಸರಿಗೆ ಶರಣಾಗಲು ಹಣದ ಆಮಿಷ ಒಡ್ಡಿ ಒಪ್ಪಿಸಿದ್ದ. ಹೀಗಾಗಿಯೇ ಕೊಲೆ ಆದ ಮೇಲೆ ಈ ಮೂವರು ಹೋಗಿ ಪೊಲೀಸರಿಗೆ ಶರಣಾಗಿದ್ದರು. ಈ ಎಲ್ಲ ಮಾಹಿತಿಗಳು ದೀಪಕ್ನನ್ನ ವಿಚಾರಣೆ ಮಾಡುವಾಗ ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ