newsfirstkannada.com

ಮಂಡ್ಯದಲ್ಲಿ ಕಾನ್​ಸ್ಟೇಬಲ್ ಮೇಲೂ ದರ್ಶನ್​ ಪಟಾಲಂ​ ಹಲ್ಲೆ! FIR ಸ್ವೀಕರಿಸಲು ಪೊಲೀಸ್​ ಇಲಾಖೆಯೇ ನಕಾರ!

Share :

Published June 21, 2024 at 9:20am

Update June 21, 2024 at 9:40am

    ದರ್ಶನ್ ಕಾರು ಚಾಲಕ ಲಕ್ಷ್ಮಣ್, ಆಪ್ತರಾದ ಮಣಿ, ನಾಗರಾಜುವಿನಿಂದ ಹಲ್ಲೆ

    ದೂರು ಕೊಟ್ಟರೂ ಎಫ್‌ಐಆರ್ ದಾಖಲಿಸಿಕೊಲ್ಲದ ಕೆಸ್ತೂರು ಪೊಲೀಸರು

    ಮಾಧ್ಯಮಗಳಿಗೆ ಆ ವಿಚಾರದ ಬಗ್ಗೆ ಮಾತನಾಡದಂತೆ ಕಾನ್​ಸ್ಟೇಬಲ್​ಗೆ ತಾಕೀತು

ಮಂಡ್ಯ: ಕಾನ್​ಸ್ಟೇಬಲ್ ಮೇಲೆ ದರ್ಶನ್ ಪಟಾಲಮ್ ಹಲ್ಲೆ ಮಾಡಿರುವ ಪ್ರಕರಣ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ. ಡಿ ಗ್ಯಾಂಗ್ ಕಾನ್​ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಕರ್ತವ್ಯಕ್ಕೆ ಅಡ್ಡಪಡಿಸಿದ್ದಾರೆ ಎನ್ನಲಾಗಿದೆ.

ಎರಡು ತಿಂಗಳ ಹಿಂದೆ ಮಂಡ್ಯದಲ್ಲಿ ನಡೆದಿದ್ದ ಘಟನೆ ಇದಾಗಿದೆ. ಕಾನ್​ಸ್ಟೇಬಲ್ ನಾಗೇಶ್​ ಮದ್ದೂರು ಶಾಸಕರ ಗನ್ ಮ್ಯಾನ್ ಆಗಿದ್ದರು. ದರ್ಶನ್​ ಸ್ಟಾರ್ ಚಂದ್ರು ಪರ ಚುನಾವಣಾ ಕ್ಯಾಂಪೇನ್ ನಡೆಸುತ್ತಿದ್ದ ವೇಳೆ ನಾಗೇಶ್​ ಮೇಲೆ ಡಿ ಗ್ಯಾಂಗ್​ ಹಲ್ಲೆ ಮಾಡಿದ್ದಾರೆ. ಮುಖಂಡರನ್ನ ಹತ್ತಿರಕ್ಕೆ ಬಿಟ್ಟು ಕೊಳ್ಳುವ ವಿಚಾರಕ್ಕೆ ಜಗಳ ನಡೆದಿದೆ ಎನ್ನಲಾಗುತ್ತಿದೆ.

ಕ್ಯಾಂಪೇನ್ ಮುಗಿದ ಬಳಿಕ ಶಾಸಕ ಉದಯ್ ಮನೆಯಲ್ಲಿಯೇ ಗಲಾಟೆ ನಡೆದಿದೆ. ಕಾನ್​ಸ್ಟೇಬಲ್ ನಾಗೇಶ್ ಮೇಲೆ ದರ್ಶನ್ ಕಾರು ಚಾಲಕ ಲಕ್ಷ್ಮಣ್, ಆಪ್ತರಾದ ಮಣಿ, ನಾಗರಾಜು ಸೇರಿದಂತೆ ಹಲವರಿಂದ ಕಾನ್​ಸ್ಟೇಬಲ್ ಮೇಲೆ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ:ಮಾಜಿ ಪತಿಗೆ ಹುಟ್ಟಿದ ಮಗುವಿನ ಮೇಲೆ 3ನೇ ಪತಿಯಿಂದ ಕ್ರೌರ್ಯ.. ಮಲತಂದೆಯ ಮೃಗೀಯ ವರ್ತನೆಗೆ ಆಸ್ಪತ್ರೆಗೆ ದಾಖಲಾದ ಕಂದ

ಹಲ್ಲೆಗೊಳಗಾದ ನಾಗೇಶ್​​ ಮದ್ದೂರು ತಾಲೂಕು ಆಸ್ಪತ್ರೆಯಲ್ಲಿ ಎಂಎಲ್‌ಸಿಯಾದ್ರು ಎಫ್​ಐಆರ್ ಆಗಿಲ್ಲ. ಅನಿವಾರ್ಯವಾಗಿ ದೂರು ಕೊಟ್ಟರೂ ಕೆಸ್ತೂರು ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿಲ್ಲ. ಹಲ್ಲೆ ವಿಷಯ ಮೇಲಾಧಿಕಾರಿಗಳ ಗಮನಕ್ಕೆ ತಿಳಿಸಿದರು ಕಾನ್​ಸ್ಟೇಬಲ್ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಇದನ್ನೂ ಓದಿ: 3ನೇ ಬಾರಿಗೆ ದರ್ಶನ್ ಪೊಲೀಸ್​​​ ಕಸ್ಟಡಿಗೆ.. ಈ ಆ್ಯಂಗಲ್​ನಲ್ಲಿ ನಡಿಯಲಿದೆ ತನಿಖೆ

ಮೇಲಾಧಿಕಾರಿಗಳ ನಡೆಗೆ ಬೇಸತ್ತಿದ್ದ ಕಾನ್​ಸ್ಟೇಬಲ್. ಕೊನೆಗೆ ಗನ್ ಮ್ಯಾನ್ ಹುದ್ದೆಯಿಂದಲೆ ವಿಮುಕ್ತಿ ಪಡೆದಿದ್ದಾರೆ. ಡಿಎಆರ್ ತುಕಡಿಯಲ್ಲಿಯೇ ಸದ್ಯ ಕಾನ್​ಸ್ಟೇಬಲ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: 10 ದಿನಗಳ ತನಿಖೆಯಲ್ಲಿ ಬಯಲಾಯ್ತು ‘ಡಿ’ ಗ್ಯಾಂಗ್​ ಕಳ್ಳಾಟ.. ಒಬ್ಬೊಬ್ಬರ ಪಾತ್ರ ವಿಚಿತ್ರ

ಅತ್ತ ಮಾಧ್ಯಮಗಳಿಗೆ ಆ ವಿಚಾರದ ಬಗ್ಗೆ ಮಾತನಾಡದಂತೆ ಕಾನ್​ಸ್ಟೇಬಲ್​ಗೆ ತಾಕೀತು ಮಾಡಲಾಗಿದೆ. ಪ್ರಕರಣ ಸಂಬಂಧ ಪ್ರತಿಕ್ರಿಯಿಸಲು ಮಂಡ್ಯ ಎಸ್‌ಪಿ ಎನ್.ಯತೀಶ್ ನಿರಾಕರಿಸಿದ್ದಾರೆ. ಅತ್ತ ಶಾಸಕರು ಸಹ ನನಗೆ ವಿಚಾರ ಗೊತ್ತಿಲ್ಲ ಎಂದು ಹೇಳಿದ್ದಾರೆ. ಸದ್ಯ ಸಿಬ್ಬಂದಿಗಿಂತ ಪೊಲೀಸ್ ಇಲಾಖೆಗೆ ಸೆಲೆಬ್ರಿಟಿ ಪಟಾಲಂ ಮುಖ್ಯನಾ? ಅನ್ನೋ ಪ್ರಶ್ನೆ ಸಾರ್ವಜನಿಕರನ್ನು ಕಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯದಲ್ಲಿ ಕಾನ್​ಸ್ಟೇಬಲ್ ಮೇಲೂ ದರ್ಶನ್​ ಪಟಾಲಂ​ ಹಲ್ಲೆ! FIR ಸ್ವೀಕರಿಸಲು ಪೊಲೀಸ್​ ಇಲಾಖೆಯೇ ನಕಾರ!

https://newsfirstlive.com/wp-content/uploads/2024/06/Police-nagesh.jpg

Load More