/newsfirstlive-kannada/media/post_attachments/wp-content/uploads/2024/06/renukaswami1.jpg)
ಚಿತ್ರದುರ್ಗ: ರೇಣುಕಾಸ್ವಾಮಿ ಕ್ರೂರ ಸಾವಿನ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿ ಮುಂದುವರಿದಿದೆ. 17 ಆರೋಪಿಗಳ ಪೈಕಿ ಇಂದಿಗೆ ಐವರು ಜಾಮೀನಿನ ಮೇಲೆ ಬಿಡುಗಡೆ ಆಗುತ್ತಿದ್ದಾರೆ. ಆದರೆ A1, A2 ಪವಿತ್ರಾ ಗೌಡ, ದರ್ಶನ್ ಅವರ ಮನವಿ ನ್ಯಾಯಾಲಯ ನಿರಾಕರಿಸಿದೆ. ದರ್ಶನ್ ಹಾಗೂ ಪವಿತ್ರಾ ಅವರಿಗೆ ಇನ್ನಷ್ಟು ದಿನ ಜೈಲುವಾಸ ಖಾಯಂ ಆಗಿದೆ.
ಇದನ್ನೂ ಓದಿ: Big Breaking: ಆರೋಪಿ ದರ್ಶನ್ಗೆ ಜೈಲೇ ಗತಿ.. ಜಾಮೀನು ಅರ್ಜಿ ವಜಾ!
ದರ್ಶನ್, ಪವಿತ್ರಾ ಅವರ ಜಾಮೀನಿನ ತೀರ್ಪಿನ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ ಕುಟುಂಬಸ್ಥರು ಪ್ರತಿಕ್ರಿಯೆ ನೀಡಿದ್ದಾರೆ. ಭಾವುಕರಾಗಿರುವ ರೇಣುಕಸ್ವಾಮಿ ತಂದೆ ಕಾಶಿನಾಥ್ ಅವರು ನ್ಯಾಯಾಂಗದ ಬಗ್ಗೆ ನನಗೆ ಗೌರವ ಇದೆ. ಪೊಲೀಸರು ಪ್ರಕರಣದಲ್ಲಿ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ನ್ಯಾಯಾಂಗದ ತೀರ್ಪು ಸ್ವಾಗತಿಸುತ್ತೇನೆ ಎಂದು ಕಣ್ಣೀರು ಹಾಕಿದ್ದಾರೆ.
ಮೃತ ರೇಣುಕಾಸ್ವಾಮಿ ಚಿಕ್ಕಪ್ಪ ಷಡಕ್ಷರಯ್ಯ ಅವರು ಕೋರ್ಟ್ ತೀರ್ಪಿನ ಬಳಿಕ ಮಾತನಾಡಿದ್ದಾರೆ. ನ್ಯಾಯಾಂಗ ವ್ಯವಸ್ಥೆ ಮೇಲೆ ನಮಗೆ ಭರವಸೆ ಹೆಚ್ಚಾಗಿದೆ. ಸಾಮಾನ್ಯ ಜನರಿಗೂ ನ್ಯಾಯ ಸಿಗುವ ಭರವಸೆ ಮೂಡಿದೆ. ದೇಶದ ಸಂವಿಧಾನ ಆ ರೀತಿಯಾಗಿದೆ. ನ್ಯಾಯಾಲಯ ನ್ಯಾಯವನ್ನ ಎತ್ತಿ ಹಿಡಿದಿದೆ. ತಪ್ಪಿತಸ್ಥರು ಯಾರೇ ಇದ್ದರು ಅವರಿಗೆ ಶಿಕ್ಷೆ ಹಾಗೆ ಆಗುತ್ತೆ ಅನ್ನೋ ಭರವಸೆ ಇದೆ. ಮುಂದಿನ ದಿನಗಳಲ್ಲಿ ಅದೇ ಆಗುತ್ತೆ ಅನ್ನೋ ಭರವಸೆ ಇದೆ ಎಂದಿದ್ದಾರೆ.
ಇನ್ನು, ನಮ್ಮ ಹುಡುಗ ಈಗಾಗಲೇ ನಮ್ಮನ್ನು ಬಿಟ್ಟು ಹೋಗಿದ್ದಾನೆ. ತಪ್ಪಿತಸ್ಥರಿಗೆ ಸಿಗುವ ಶಿಕ್ಷೆಯಲ್ಲಿ ನಮ್ಮ ಹುಡುಗನನ್ನ ನೋಡ್ತೀವಿ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇ ಬೇಕು ಅನ್ನೋದು ನಮ್ಮ ಒಕ್ಕೂರೊಲ ಆಗ್ರಹವಾಗಿದೆ. ಸರ್ಕಾರ ಶೀಘ್ರಗತಿಯಲ್ಲಿ ಈ ಕೇಸ್ ವಿಚಾರಣೆ ಮಾಡಬೇಕು. ಕೊಲೆ ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ನಟಿ ಪವಿತ್ರಾಗೌಡಗೆ ಬಿಗ್ ಶಾಕ್; ಕೊಲೆ ಕೇಸಲ್ಲಿ ಕೋರ್ಟ್ನಿಂದ ಮಹತ್ವದ ತೀರ್ಪು
ರೇಣುಕಾಸ್ವಾಮಿ ಪತ್ನಿ ಸಹನಾ ಅವರಿಗೆ ಮುಂದಿನ ತಿಂಗಳು ಡೆಲಿವರಿ ಆಗುತ್ತೆ. ಆದ್ದರಿಂದ ಸರ್ಕಾರಕ್ಕೆ ಕೇಳಿಕೊಳ್ಳೋದು ಏನು ಅಂದ್ರೆ ಅವರಿಗೆ ಏನಾದ್ರೂ ಒಂದು ದಾರಿ ಮಾಡಿ ಕೊಡಬೇಕು. ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಹುದ್ದೆ ನೀಡಬೇಕು ಅಂತ ಮೃತ ರೇಣುಕಾಸ್ವಾಮಿ ಚಿಕ್ಕಪ್ಪ ಕೇಳಿ ಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ