ದರ್ಶನ್​ ಗ್ಯಾಂಗ್​ ಪ್ರಕರಣದ ಮತ್ತೊಂದು ಮಹತ್ವದ ವರದಿ ಬಯಲು.. ಕಾರಿನಲ್ಲಿ ನಡೆದಿದ್ದು ಏನು?

author-image
Bheemappa
Updated On
ದರ್ಶನ್​ ಗ್ಯಾಂಗ್​ ಪ್ರಕರಣದ ಮತ್ತೊಂದು ಮಹತ್ವದ ವರದಿ ಬಯಲು.. ಕಾರಿನಲ್ಲಿ ನಡೆದಿದ್ದು ಏನು?
Advertisment
  • ಪೊಲೀಸರು ಮಾಹಿತಿ ಸಂಗ್ರಹ ಮಾಡಿರೋದು ಹೇಗೆ ಗೊತ್ತಾ?
  • ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್
  • ಮೃತದೇಹ ಕಾರಲ್ಲಿ ಸಾಗಾಟ ಮಾಡಿರೋದು ಯಾರು, ಯಾರು?

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪದಡಿ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಆರೋಪಿಗಳು ಪರಪ್ಪನ ಅಗ್ರಹಾರದ ಜೈಲು ಪಾಲಾಗಿದ್ದಾರೆ. ಕೊಲೆ ನಡೆದು ತಿಂಗಳುಗಳು ಕಳೆಯುತ್ತ ಬಂದಿದ್ದು, ಕೊಲೆಯ ಬಗ್ಗೆ ಒಂದೊಂದೇ ಸಾಕ್ಷ್ಯಗಳನ್ನು ಪೊಲೀಸರು ತನಿಖೆಯಿಂದ ದೃಢ ಪಡಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹ್ವತ್ವದ ಮಾಹಿತಿ ಹೊರ ಬಿದ್ದಿದೆ.

ಇದನ್ನೂ ಓದಿ:2 ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ಘೋಷಣೆ.. ಕರ್ನಾಟಕದ 3 ಕ್ಷೇತ್ರಗಳಿಗೆ ಬೈ-ಎಲೆಕ್ಷನ್ ಅನೌನ್ಸ್ ಸಾಧ್ಯತೆ

ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಬಳಿಕ ಮೃತದೇಹವನ್ನು ಆರೋಪಿಗಳಾದ ನಿಖಿಲ್, ರಾಘವೇಂದ್ರ, ಕಾರ್ತಿಕ್ ಕಾರಿನಲ್ಲಿ ಸಾಗಾಟ ಮಾಡಿದ್ದರು. ಕಾರನ್ನು ಪರಿಶೀಲನೆ ಮಾಡುವಾಗ ಪೊಲೀಸರಿಗೆ ಕೂದಲು ಸಿಕ್ಕಿತ್ತು. ಈ ಕುರಿತು ಪೊಲೀಸರು ಕೆಲ ಮಾಹಿತಿಗಳನ್ನು ಸಂಗ್ರಹ ಮಾಡಿದ್ದರು. ಬಳಿಕ ಆರೋಪಿಗಳ ಕೂದಲು ಮಾದರಿಯನ್ನು ಎಫ್ಎಸ್ಎಲ್​ಗೆ ಕಳುಹಿಸಿ ಕೊಟ್ಟಿದ್ದರು.

publive-image

ಇದೀಗ ಎಫ್ಎಸ್ಎಲ್​ನಿಂದ ವರದಿ ಬಂದಿದ್ದು ಕಾರಿನಲ್ಲಿ ರೇಣುಕಾಸ್ವಾಮಿ ಮೃತದೇಹ ಸಾಗಾಟ ಮಾಡಿರೋದು ದೃಢವಾಗಿದೆ. ಇದರ ರಿಪೋರ್ಟ್​ ಪೊಲೀಸರ ಕೈಸೇರಿದೆ. ಮೃತದೇಹ ಸಾಗಿಸಿದ್ದ ಅರೋಪಿಗಳಾದ ನಿಖಿಲ್, ರಾಘವೇಂದ್ರ, ಕಾರ್ತಿಕ್ ಅವರ ಕೂದಲು ಅನ್ನೋದು ವರದಿಯಿಂದ ಕನ್ಫರ್ಮ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment