ಆರೋಪಿಗಳ ಬೆರಳಚ್ಚು, ದರ್ಶನ್ ಹಾಗೂ ಪವಿತ್ರ ಮೊಬೈಲ್ ರವಾನೆ
ಇನ್ನೊಂದು ವಾರದಲ್ಲಿ ಅಧಿಕಾರಿಗಳ ಕೈ ಸೇರಲಿರೋ ಕೇಸ್ ರಿಪೋರ್ಟ್
ರೇಣುಕಾ ಹತ್ಯೆ ಕೇಸ್‌ನಲ್ಲಿ 180ಕ್ಕೂ ಹೆಚ್ಚು ಸಾಕ್ಷ್ಯಗಳ ಹೇಳಿಕೆ ದಾಖಲು
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರೋ ದರ್ಶನ್ ಅಂಡ್ ಗ್ಯಾಂಗ್‌ಗೆ ಹೊಸ ಸಂಕಷ್ಟ ಎದುರಾಗಿದೆ. ಈಗಾಗಲೇ ಹತ್ಯೆ ಪ್ರಕರಣದಲ್ಲಿ 200ಕ್ಕೂ ಹೆಚ್ಚು ಸಾಕ್ಷ್ಯಗಳು ಪೊಲೀಸರ ಕೈ ಸೇರಿದೆ. ಅದರಲ್ಲಿ ಕೆಲವೊಂದಿಷ್ಟು ವಸ್ತುಗಳನ್ನ ಎಫ್‌ಎಸ್‌ಎಲ್‌ಗೆ ರವಾನಿಸಿದ್ದು, ರಿಪೋರ್ಟ್‌ಗಾಗಿ ಪೊಲೀಸರು ಚಾತಕ ಪಕ್ಷಿಯಂತೆ ಕಾಯ್ತಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಕೇಸ್‌ನಲ್ಲಿ 180ಕ್ಕೂ ಹೆಚ್ಚು ಸಾಕ್ಷ್ಯಗಳು ಹಾಗೂ ಇತರರ ಹೇಳಿಕೆಗಳನ್ನ ಪರಿಗಣಿಸಿರೋ ಪೊಲೀಸ್ರು ಇದುವರೆಗೂ ಸರಿ ಸುಮಾರು 200ಕ್ಕೂ ಹೆಚ್ಚು ಸಾಕ್ಷ್ಯಗಳನ್ನ ಕಲೆ ಹಾಕಿದ್ದಾರೆ. ಘಟನೆ ನಡೆದಾಗಿನಿಂದ ಇದುವರೆಗೂ ಇಂಚಿಂಚೂ ಸ್ಥಳಗಳನ್ನ ಮಹಜರು ನಡೆಸಿರೋ ಪೊಲೀಸರಿಗೆ ಅಲ್ಲೂ ಕೂಡ ಸಾಕಷ್ಟು ಸಾಕ್ಷಿ ಲಭ್ಯವಾಗಿದೆ. ಇದೀಗ ಅದರಲ್ಲಿ 66 ವಸ್ತುಗಳನ್ನ ಎಫ್‌ಎಸ್‌ಎಲ್‌ಗೆ ರವಾನಿಸಿದೆ.
ಇದನ್ನೂ ಓದಿ: ಮುಂದಿನ ನಿಲ್ದಾಣ.. ಅಪರ್ಣಾ ಬಳಿಕ ಮೆಟ್ರೋದ ಹೊಸ ಮಾರ್ಗಗಳಿಗೆ ಧ್ವನಿ ಯಾರದ್ದು?
‘ಡಿ ಗ್ಯಾಂಗ್’ಗೆ ಸಂಕಷ್ಟ!
ಈವರೆಗೂ 66 ವಸ್ತುಗಳನ್ನ ಎಫ್‌ಎಸ್‌ಎಲ್‌ಗೆ ಪೊಲೀಸರು ಕಳುಹಿಸಿದ್ದಾರೆ. ರೇಣುಕಾಸ್ವಾಮಿ ಧರಿಸಿದ್ದ ಬಟ್ಟೆ, ಚಪ್ಪಲಿ, ರಕ್ತದ ಕಲೆ, ಕೂದಲು ಹಾಗೂ ಆರೋಪಿಗಳನ ಹೇರ್ ಸ್ಯಾಂಪಲ್ಸ್‌ನ ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ. ಅದಷ್ಟೇ ಅಲ್ಲದೇ ಆರೋಪಿಗಳ ಬೆರಳಚ್ಚು, ದರ್ಶನ್ & ಪವಿತ್ರ ಮೊಬೈಲ್ ಕಳುಹಿಸಲಾಗಿದೆ. ಇನ್ನೊಂದು ವಾರದಲ್ಲಿ ರಿಪೋರ್ಟ್ ಅಧಿಕಾರಿಗಳ ಕೈ ಸೇರಲಿದೆ. ಎಫ್‌ಎಸ್‌ಎಲ್ ವರದಿ ಆಧರಿಸಿ ಚಾರ್ಜ್‌ಶೀಟ್ ಸಲ್ಲಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ದರ್ಶನ್ ಅಂಡ್ ಗ್ಯಾಂಗ್ ವಿರುದ್ಧವಾಗಿಯೇ ಸಾಕ್ಷ್ಯಗಳು ಸಿಕ್ಕಿರೋದು. ಒಂದು ವೇಳೆ ಎಫ್‌ಎಸ್‌ಎಲ್ ವರದಿ ಬಂದ ನಂತ್ರ ಪೊಲೀಸ್ರು ಚಾರ್ಜ್‌ಶೀಟ್ ಹಾಕಿದ್ರೆ ಡಿ ಗ್ಯಾಂಗ್ ಮಾತ್ರ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳೋಕೆ ಸಾಧ್ಯನೇ ಇಲ್ಲ. ಇತ್ತ ಆರೋಪಿ ದರ್ಶನ್ ಮನೆಯೂಟದ ಬೇಡಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಕೋರ್ಟ್‌ಗೆ ಜೈಲಾಧಿಕಾರಿಗಳು ಅಫಿಡವಿಟ್ ಸಲ್ಲಿಸಲು ಸಿದ್ಧತೆ ಮಾಡ್ಕೊಂಡಿದ್ದಾರೆ.
ಮನೆಯೂಟಕ್ಕೆ ಆಕ್ಷೇಪ!
ನೀವು ಕೊಡುತ್ತಿರೋ ಊಟವನ್ನ ದರ್ಶನ್ ಸೇವಿಸುತ್ತಿದ್ದಾರಾ. ಊಟ ಸೇವಿಸಿ ಅವರಿಗೆ ಏನಾದ್ರೂ ಆರೋಗ್ಯ ಸಮಸ್ಯೆಯಾಗಿದ್ಯಾ. ಇಲ್ಲಿವರೆಗೂ ನಟ ದರ್ಶನ್‌ಗೆ ಎಷ್ಟು ಬಾರಿ ಚಿಕಿತ್ಸೆ ನೀಡಲಾಗಿದೆ. ಅಲ್ಲದೇ ದರ್ಶನ್‌ಗೆ ಈವರೆಗೆ ಯಾವ ಯಾವ ಚಿಕಿತ್ಸೆ ನೀಡಲಾಗಿದೆ. ದರ್ಶನ್ ಅವರಿಗೆ ಆರೋಗ್ಯ ಸಮಸ್ಯೆಯಾಗಲು ಕಾರಣ ಏನು ಅಂತಾ ಕೋರ್ಟ್ ಪ್ರಶ್ನಿಸಿದೆ. ದರ್ಶನ್‌ಗೆ ಮನೆಯೂಟ ಕೊಟ್ರೆ ಇತರೆ ಆರೋಪಿಗಳು ಕೇಳ್ತಾರೆ. ಎಲ್ಲಾ ಆರೋಪಿಗಳಿಗೂ ಮನೆಯೂಟ ನೀಡೋದಕ್ಕೆ ಸಾಧ್ಯನಾ ಎಂದು ಜೈಲಾಧಿಕಾರಿಗಳ ವಾದವಾಗಿದೆ. ಅತ್ತ ದರ್ಶನ್‌ಗೆ ಮನೆಯೂಟ ಸಿಕ್ತಿಲ್ಲ. ಮತ್ತೊಂದ್ಕಡೆ ನೋಡಿದ್ರೆ ಎಫ್‌ಎಸ್‌ಎಲ್ ವರದಿ ಬಂದ್ರೆ ಪೊಲೀಸ್ರು ಚಾರ್ಜ್‌ಶೀಟ್ ಹಾಕೋಕೆ ತಯಾರಿ ಮಾಡ್ಕೊಂಡಿದ್ದು ದರ್ಶನ್ ಅಂಡ್ ಗ್ಯಾಂಗ್ ಸಂಕಷ್ಟ ಕಟ್ಟಿಟ್ಟ ಬುತ್ತಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ