Advertisment

ನ್ಯೂಸ್ ​ಫಸ್ಟ್ ಇಂಫ್ಯಾಕ್ಟ್​; ಆರೋಪಿ ರವಿ ಕುಟುಂಬಕ್ಕೆ ಹರಿದು ಬಂದ ನೆರವಿನ ಹಸ್ತ.. ಶಾಲೆಗೆ ಹೊರಟ ಮಕ್ಕಳು

author-image
Bheemappa
Updated On
ನ್ಯೂಸ್ ​ಫಸ್ಟ್ ಇಂಫ್ಯಾಕ್ಟ್​; ಆರೋಪಿ ರವಿ ಕುಟುಂಬಕ್ಕೆ ಹರಿದು ಬಂದ ನೆರವಿನ ಹಸ್ತ.. ಶಾಲೆಗೆ ಹೊರಟ ಮಕ್ಕಳು
Advertisment
  • ಉಚಿತ ಶಿಕ್ಷಣದ ಭರವಸೆ ನೀಡಿದ ಭೋವಿ ಮಠದ ಮಹಾಸ್ವಾಮೀಜಿ
  • ಪೇರೆಂಟ್ಸ್ ಅಸೋಸಿಯೇಷನ್, ಕರುನಾಡ ಸೇನೆ ನೆರವಿನ ಭರವಸೆ
  • ಶಾಲೆಗೆ ಮಕ್ಕಳನ್ನು ಬಿಟ್ಟು ಬಂದು ರವಿ ಹೆಂಡತಿ ಮಾತನಾಡಿದ್ದೇನು..?

ಚಿತ್ರದುರ್ಗ: ನಟ ದರ್ಶನ್ ಗ್ಯಾಂಗ್​ನಲ್ಲಿ ಜೈಲು ಪಾಲಾಗಿರುವ ಎ8 ಆರೋಪಿ ರವಿ ಮಕ್ಕಳು ಶಾಲೆಗೆ ಹೋಗುತ್ತಿಲ್ಲ ಎಂದು ನ್ಯೂಸ್​ಫಸ್ಟ್​ ವರದಿ ಮಾಡಿತ್ತು. ಇದರ ಬೆನ್ನಲ್ಲೇ ನೆರವಿನ ಹಸ್ತ ಹರಿದು ಬಂದಿದ್ದು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಭೋವಿ ಮಠದ ಶ್ರೀ ಇಮ್ಮಡಿ ಸಿದ್ದರಾಮ ಮಹಾಸ್ವಾಮೀಜಿ ತಿಳಿಸಿದ್ದಾರೆ ಎಂದು ರವಿ ಪತ್ನಿ ತಿಳಿಸಿದ್ದಾರೆ.

Advertisment

ಇದನ್ನೂ ಓದಿ: ಜಸ್ಟ್​ ಗುರಾಯಿಸಿದ್ಕೆ.. ಬಿಯರ್ ಬಾಟಲ್​ಗಳಿಂದ ತಲೆಗೆ ಹೊಡೆದು ವ್ಯಕ್ತಿಯ ಭೀಕರ ಕೊಲೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ ಗ್ಯಾಂಗ್​ನಲ್ಲಿ ಆರೋಪಿ ರವಿ ಕೂಡ ಜೈಲು ಪಾಲಾಗಿದ್ದಾನೆ. ಇದರಿಂದ ಸ್ಕೂಲ್ ಫೀಸು ಕಟ್ಟಲಾಗದೇ ಪತ್ನಿ ಕವಿತಾ ಅವರು ಮಕ್ಕಳನ್ನು ಶಾಲೆ ಬಿಡಿದ್ದರು. ಈ ಬಗ್ಗೆ ನ್ಯೂಸ್​ಫಸ್ಟ್​ ವರದಿ ಮಾಡಿತ್ತು. ಈ ವರದಿ ಬೆನ್ನಲ್ಲೇ ಮಕ್ಕಳು ಓದುತ್ತಿದ್ದ ಭೋವಿ ಗುರುಪೀಠದ ಶಾಲೆಯಲ್ಲಿ ಮಕ್ಕಳು ಉಚಿತವಾಗಿ ಈ ವರ್ಷ ಓದಲಿ ಎಂದು ಸ್ವಾಮೀಜಿ ಹೇಳಿದ್ದಾರೆ. ಭೋವಿ ಮಠದ ಶ್ರೀ ಇಮ್ಮಡಿ ಸಿದ್ದರಾಮ ಮಹಾಸ್ವಾಮೀಜಿ ಅವರು ನಿಮ್ಮ ಮಕ್ಕಳು ಈ ವರ್ಷ ನಮ್ಮ ಶಾಲೆಯಲ್ಲಿ ಉಚಿತವಾಗಿ ಓದಲಿ ಎಂದು ತಾಯಿಗೆ ತಿಳಿಸಿದ್ದಾರೆ. ಇಷ್ಟೇ ಅಲ್ಲದೇ ಪೇರೆಂಟ್ಸ್ ಅಸೋಸಿಯೇಷನ್, ಕರುನಾಡ ಸೇನೆ ಕೂಡ ನೆರವಿಗೆ ಬಂದಿದೆ.

ಇದನ್ನೂ ಓದಿ:Kalki 2898 AD: ತೆರೆ ಮೇಲೆ ಗ್ರ್ಯಾಂಡ್ ಆಗಿ ಅಪ್ಪಳಿಸಿದ ಕಲ್ಕಿ.. ಸ್ಟಾರ್ ದಿಗ್ಗಜರ ಕಂಡು ಸಿನಿ ರಸಿಕರು ಫುಲ್ ಖುಷ್..!

Advertisment

publive-image

ಈ ಸಂಬಂಧ ಮಾತನಾಡಿರುವ ಆರೋಪಿ ರವಿ ಪತ್ನಿ ಕವಿತಾ ಅವರು, ಮೊದಲು ಕನ್ನಡದ ಜನತೆಗೆ ಧನ್ಯವಾದ ತಿಳಿಸಿದ್ದಾರೆ. ಶಾಲೆಯಿಂದ ಫೋನ್ ಬಂದಿತ್ತು. ಸ್ವಾಮೀಜಿಯವರು ಮಾತನಾಡಿ, ಇಲ್ಲಮ್ಮ ಈ ವರ್ಷ ನಿಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸಿ. ನ್ಯೂಸ್​ನಲ್ಲಿ ನೋಡಿದೆವು. ಡೊನೆಷನ್​ ಏನು ಕೊಡಬೇಡ ಮಕ್ಕಳನ್ನ ಶಾಲೆಗೆ ಕಳುಹಿಸಿ ಅಂತ ಹೇಳಿದರು. ಹೀಗಾಗಿ ಇವತ್ತು ಬೆಳಗ್ಗೆ ಮಕ್ಕಳನ್ನು ಶಾಲೆಗೆ ಬಿಟ್ಟು ಬಂದೆ. ಒಬ್ಬ 3ನೇ ತರಗತಿ, ಇನ್ನೊಬ್ಬ ಎಲ್​ಕೆಜಿ ಇದ್ದಾನೆ. ಮಕ್ಕಳು ಶಾಲೆಗೆ ಹೋಗಿದ್ದಕ್ಕೆ ಸಂತಸ ಆಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:LK Advani : ಬಿಜೆಪಿ ಹಿರಿಯ ನಾಯಕ, ಭಾರತ ರತ್ನ ಪುರಸ್ಕೃತ ಅಡ್ವಾಣಿ ತಡರಾತ್ರಿ ಆಸ್ಪತ್ರೆಗೆ ದಾಖಲು

ಬೆಂಗಳೂರಿನ ಎಜುಕೇಷನ್ ಟ್ರಸ್ಟ್​​ನಿಂದ ಯೋಗಾನಂದ ಎನ್ನುವರು ಫೋನ್ ಮಾಡಿ ಮಕ್ಕಳ ಬುಕ್​, ಪೆನ್ನು, ಬ್ಯಾಗ್ ಬೇಕಾದರೆ ಕೇಳಿ ಎಂದು ಪೋನ್ ನಂಬರ್ ಕೊಟ್ಟಿದ್ದಾರೆ. ನನ್ನ ಗಂಡ ಬಂದಿದ್ದರೆ ಇದನ್ನೆಲ್ಲ ನಾವೇ ಮಾಡಿಕೊಂಡು ಹೋಗಬಹುದಿತ್ತು. ಆದರೆ ಇನ್ನೊಬ್ಬರಿಂದ ಇದನ್ನೆಲ್ಲ ತಗೊಂತ್ತಿದ್ದನಲ್ಲ ಎಂಬುದು ಬೇಜಾರು ಇದೆ. ನಾವು ಇನ್ನೊಬ್ಬರಿಗೆ ಕೊಡುವ ತರ ಇದ್ದೀವಿ. ಈಗ ಬೇರೆಯವರಿಂದ ನಾವು ತಗೋತರ ಆದೇವು. ಯಾರದರು ಲಾಯರ್ ನನ್ನ ಗಂಡನನ್ನ ಬಿಡಿಸಿಕೊಂಡು ಬನ್ನಿ ಸರ್. ಬೇಗ ಕರ್ಕೊಂಡು ಬನ್ನಿ. ಕನ್ನಡ ಜನತೆಯಲ್ಲಿ ಇದೊಂದೆ ಕೇಳುವುದು ನಾನು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment