/newsfirstlive-kannada/media/post_attachments/wp-content/uploads/2024/06/DARSHAN_GANG_SIM.jpg)
ಬೆಂಗಳೂರು: ನಟ ದರ್ಶನ್ ಆ್ಯಂಡ್​ ಗ್ಯಾಂಗ್​ನಿಂದ ಕೊಲೆ ಪ್ರಕರಣಕ್ಕೆ ಸಂಬಂಧಿಸದಂತೆ ಆರೋಪಿಗಳ ಹೆಸರಲ್ಲಿ ಪೊಲೀಸರು ಹೊಸ ಸಿಮ್​ ಕಾರ್ಡ್ ಅನ್ನು​ ಖರೀದಿ ಮಾಡಿದ್ದಾರೆ. ಕೋರ್ಟ್ ಅನುಮತಿ ಮೇರೆಗೆ ಪೊಲೀಸರು ಸಿಮ್ ಖರೀದಿಸಿ ಆಕ್ಟಿವ್ ಮಾಡಿದ್ದಾರೆ.
ಇದನ್ನೂ ಓದಿ: NEET- PG ಎಕ್ಸಾಂ ಮುಂದೂಡಿಕೆ.. ಪರೀಕ್ಷೆಯಲ್ಲಿ ಅಕ್ರಮ ವಾಸನೆ, ಸುಬೋಧ್ ಕುಮಾರ್ ಸಿಂಗ್ ವಜಾ
ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿ ಆರೋಪಿಗಳನ್ನು ಬಂಧಿಸಿದ ಬಳಿಕ ವಿಚಾರಣೆ ಮಾಡಲಾಗಿದೆ. ಹತ್ಯೆ ನಂತರ ಆರೋಪಿಗಳು ವೆಬ್ ಆ್ಯಪ್ ಬಳಸಿರೋದು ತನಿಖೆಯಿಂದ ಗೊತ್ತಾಗಿದೆ. ನಂತರ ಡಾಟಾವನ್ನ ನಿಷ್ಕ್ರಿಯಗೊಳಿಸಿದ್ದಾರೆ (ಡಿಲೇಟ್). ಇದರಿಂದ ಹಲವು ಮಾಹಿತಿ ಪೊಲೀಸರಿಗೆ ಸಿಕ್ಕಿಲ್ಲದ ಕಾರಣ ಅದನ್ನು ರಿ ಆಕ್ಸೆಸ್ ಮಾಡಲು ಇದೀಗ ಪೊಲೀಸರು ಮುಂದಾಗಿದ್ದಾರೆ.
ಇದನ್ನೂ ಓದಿ:ಸಲಿಂಗ ಲೈಂಗಿಕ ಕೇಸ್​.. ನಿಗೂಢ ಸ್ಥಳದಲ್ಲಿ ಮಧ್ಯರಾತ್ರಿ ಸೂರಜ್​ ರೇವಣ್ಣ ವಿಚಾರಣೆ
/newsfirstlive-kannada/media/post_attachments/wp-content/uploads/2024/06/darshan43.jpg)
ಕೋರ್ಟ್ ಅನುಮತಿ ಮೇರೆಗೆ ಆರೋಪಿಗಳ ಹೆಸರಲ್ಲಿ ಪೊಲೀಸರು ಸಿಮ್ ಕಾರ್ಡ್ ಖರೀದಿ ಮಾಡಿದ್ದಾರೆ. ಬಳಿಕ ನ್ಯಾಯಾಲಯದ ಅನುಮತಿಯಂತೆ ಸಿಮ್ ಅನ್ನು ಆಕ್ಟಿವ್ ಮಾಡಲಾಗಿದೆ. ಸರ್ವಿಸ್ ಪ್ರೊವೈಡರ್ ಮೂಲಕ ಸಿಮ್ ಅನ್ನು ಮತ್ತೆ ಆಕ್ಟಿವ್ ಮಾಡಿದ್ದಾರೆ. ಮೊಬೈಲ್ ಡಾಟಾ, ಕರೆಗಳ ವಿನಿಮಯ ಪತ್ತೆ ಹಚ್ಚಲಾಗುತ್ತಿದೆ. ವಿಚಾರಣೆಯಲ್ಲಿ ನಟ ದರ್ಶನ್ ಅವರು ಮನೆಯಲ್ಲಿ ಸಿಕ್ಕ ಹಣದ ಮೂಲದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಹೀಗಾಗಿ ದರ್ಶನ್ ನೀಡಿದ ಮಾಹಿತಿ ಮೇರೆಗೆ ಹಣ ನೀಡಿದವರ ವಿಚಾರಣೆ ಮಾಡಲು ಪೊಲೀಸರು ತಯಾರಿ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us