newsfirstkannada.com

×

ದರ್ಶನ್ ಗ್ಯಾಂಗ್​ನಿಂದ ಸೀಕ್ರೆಟ್ ಮೆಂಟೇನ್.. ಈ ಪ್ರಶ್ನೆಗಳಿಗೆ ಇನ್ನೂ ಪೊಲೀಸರಿಗೆ ಉತ್ತರ ಸಿಕ್ಕಿಲ್ಲ

Share :

Published June 23, 2024 at 8:21am

    ಕೊಲೆ ಕೇಸ್‌ನ ದಿಕ್ಕನ್ನೇ ಬದಲಿಸುವಂತಹ ಸಂಗತಿ ತೆರೆದಿಟ್ಟ ವಿನಯ್

    ಇದೀಗ ಪ್ರಕರಣದ ತನಿಖೆಯನ್ನ ಚುರುಕುಗೊಳಿಸಿರುವ ಪೊಲೀಸರು

    ಪೊಲೀಸರಿಗೆ ಮೃತ ರೇಣುಕಾಸ್ವಾಮಿ ಮೊಬೈಲ್ ಸಿಕ್ಕಿದೆಯಾ, ಇಲ್ವಾ?

ದರ್ಶನ್‌ ಮತ್ತು ಮೂವರನ್ನ ಮೂರನೇ ಬಾರಿಗೆ ಕಸ್ಟಡಿಗೆ ಪಡೆದಿದ್ದ ಪೊಲೀಸರು, ಪ್ರಕರಣದಲ್ಲಿ ಅಗತ್ಯವಿದ್ದ ಕೆಲ ವಿವರಗಳನ್ನ ಬಾಯಿಬಿಡಿಸಲು ಯತ್ನಿಸಿದ್ದಾರೆ. 2 ದಿನ ಕಸ್ಟಡಿಯಲ್ಲಿ ತೀವ್ರ ವಿಚಾರಣೆಯನ್ನೇ ಮಾಡಿದ್ದಾರೆ. ಆದ್ರೆ, ಎಷ್ಟೇ ಪ್ರಶ್ನೆ ಕೇಳಿದ್ರೂ ಆರೋಪಿಗಳು ಪ್ರಮುಖ ಮಾಹಿತಿ ಬಗ್ಗೆ ಬಾಯ್ಬಿಟ್ಟಿಲ್ವಂತೆ. ಈ ಮಧ್ಯೆ ಆರೋಪಿ ವಿನಯ್ ಕೊಲೆ ಕೇಸ್‌ನ ದಿಕ್ಕನ್ನೇ ಬದಲಿಸುವಂತಹ ಸಂಗತಿಯನ್ನ ತೆರೆದಿಟ್ಟಿದ್ದಾನೆ.

ದರ್ಶನ್ ಅಂಡ್ ಗ್ಯಾಂಗ್‌ನ ಕ್ರೌರ್ಯ ದಿನದಿನಕ್ಕೂ ಅನಾವರಣ ಆಗುತ್ತಿದೆ. ಪವಿತ್ರಾ ಗೌಡ ತಾಳಕ್ಕೆ ಕುಣಿದು ಡೆವಿಲ್ ಪಡೆ ಜೈಲು ಸೇರಿದೆ. ಇದೀಗ ಪ್ರಕರಣದ ತನಿಖೆಯನ್ನ ಚುರುಕುಗೊಳಿಸಿರೋ ಪೊಲೀಸರು ಅಸಲಿಯತ್ತನ್ನ ಬಾಯ್ಬಿಡಿಸಲು ಹರಸಾಹಸಪಡ್ತಿದ್ದಾರೆ. ಆದ್ರೆ, ಆರೋಪಿಗಳು ಮಾತ್ರ ಪ್ರಮುಖ ಸಾಕ್ಷ್ಯಗಳ ಬಗ್ಗೆ ಹೇಳದೇ ಭಂಡತನ ತೋರುತ್ತಿದ್ದಾರೆ.

ಇದನ್ನೂ ಓದಿ: ಸಲಿಂಗ ಲೈಂಗಿಕ ಕೇಸ್​.. ನಿಗೂಢ ಸ್ಥಳದಲ್ಲಿ ಮಧ್ಯರಾತ್ರಿ ಸೂರಜ್​ ರೇವಣ್ಣ ವಿಚಾರಣೆ

2 ದಿನಗಳ ವಿಚಾರಣೆ.. 4 ಸತ್ಯ ಬಾಯ್ಬಿಡಿಸಲು ಸರ್ಕಸ್‌!

ಕಳೆದ 12 ದಿನಗಳಿಂದ ರೇಣುಕಾಸ್ವಾಮಿ ಕೊಲೆ ಕೇಸ್‌ನ ಪ್ರಮುಖ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ರು. ಈ ವೇಳೆ ಸ್ಥಳ ಮಹಜರು ಸೇರಿದಂತೆ ಮಹತ್ವದ ಸಾಕ್ಷ್ಯಾಧಾರ ಕಲೆಹಾಕಲು ಪೊಲೀಸರು ನಿರಂತರವಾಗಿ ಕಾರ್ಯೋನ್ಮುಖರಾಗಿದ್ರು. ಬಳಿಕ ಮೊನ್ನೆಯಷ್ಟೇ ದರ್ಶನ್, ಪ್ರದೂಶ್, ಧನರಾಜ್‌, ವಿನಯ್‌ನ ಮತ್ತೆರಡು ದಿನ ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿದ್ರು. ಆದ್ರೆ, 2 ದಿನಗಳ ವಿಚಾರಣೆಯಲ್ಲಿ ಪೊಲೀಸರು ಹೆಚ್ಚೇನೂ ವಿವರ ಕಲೆಹಾಕಲು ಸಾಧ್ಯವಾಗಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.

ಹೊರಬರದ ಸತ್ಯ! -ಟಾರ್ಚ್ ಟಾರ್ಚರ್

  • ರೇಣುಕಾಸ್ವಾಮಿಗೆ ಹಲ್ಲೆ ವೇಳೆ ಕರೆಂಟ್​ ಶಾಕ್​ ನೀಡಿದ್ದ ಧನರಾಜ್
  • ಎಲೆಕ್ಟ್ರಿಕ್ ಶಾಕ್ ಟಾರ್ಚ್​ನ ಬಳಸಿ ರೇಣುಕಾಸ್ವಾಮಿಗೆ ಟಾರ್ಚರ್​
  • ಎಲೆಕ್ಟ್ರಿಕ್ ಶಾಕ್ ಟಾರ್ಚ್ ಎಲ್ಲಿ ಖರೀದಿಸಿದ್ದು ಅಂತ ಬಾಯ್ಬಿಟ್ಟಿಲ್ಲ

ಹೊರಬರದ ಸತ್ಯ! – ಅನಾಮಧೇಯ ವ್ಯಕ್ತಿ

ಮತ್ತೊಬ್ಬ ಆರೋಪಿ ಪ್ರದೂಷ್​ ಜೊತೆಗೆ ಅಂದು ಕೊಲೆ ನಡೆದ ದಿನ ಇನ್ನೊಬ್ಬ ವ್ಯಕ್ತಿ ಪಟ್ಟಣಗೆರೆ ಶೆಡ್‌ಗೆ ಬಂದು ಹೋಗಿದ್ದಾನೆ, ಆ ವ್ಯಕ್ತಿಯ ಯಾರು ಎಂಬ ಬಗ್ಗೆ ಆರೋಪಿ ಪ್ರದೂಷ್ ಬಾಯ್ಬಿಟ್ಟಿಲ್ಲ ಎಂದು ತಿಳಿದು ಬಂದಿದೆ.

ಹೊರಬರದ ಸತ್ಯ! -ರೇಣುಕಾಸ್ವಾಮಿ ಮೊಬೈಲ್

ಕೊಲೆ ನಡೆದು 15 ದಿನಗಳೇ ಕಳೆದ್ರೂ ಇದುವರೆಗೂ ಮೃತ ರೇಣುಕಾಸ್ವಾಮಿ ಮೊಬೈಲ್ ಪತ್ತೆಯಾಗಿಲ್ಲ. ಮೃತನ ಮೊಬೈಲ್​ ಎಲ್ಲಿದೆ ಅಂತ ಡೆವಿಲ್ ಗ್ಯಾಂಗ್‌ನ ಆರೋಪಿಗಳು ಮಾಹಿತಿ ನೀಡುತ್ತಾನೆ ಇಲ್ವಂತೆ.

ವಿನಯ್ ಮೊಬೈಲ್‌ನಲ್ಲಿದ್ದ ವಿಡಿಯೋ ರಹಸ್ಯ ಬಯಲು

ಇನ್ನೂ 10ನೇ ಆರೋಪಿ ವಿನಯ್ ಮೊಬೈಲ್‌ಗೆ ರೇಣುಕಾಸ್ವಾಮಿ ಹತ್ಯೆ ಮಾಡಿದ ಬಳಿಕ ವಿಡಿಯೋವೊಂದು ಬಂದಿತ್ತು. ಇದೀಗ ವಿಡಿಯೋ ಸೀಕ್ರೆಟ್‌ನ ಬಾಯ್ಬಿಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದು ಕೊಲೆ ಕೇಸ್‌ಗೆ ಮಹತ್ವದ ಸಾಕ್ಷ್ಯವಾಗೋದು ಪಕ್ಕಾ ಆಗಿದೆ.

ಹೊರಬಂದ ಸತ್ಯ! -ವಿಡಿಯೋ ಸೀಕ್ರೆಟ್​

  • ಆರೋಪಿ ವಿನಯ್ ಮೊಬೈಲ್​ನಲ್ಲಿ ಕೃತ್ಯದ ಸಂಬಂಧ ವಿಡಿಯೋ ಪತ್ತೆ
  • ಆ ವಿಡಿಯೋ ಕಳಿಸಿದ್ದು ಯಾರು ಅಂತ ಬಾಯ್ಬಿಡದ ಆರೋಪಿ ವಿನಯ್​
  • ಅಲ್ಲದೇ ವಿನಯ್ ಮೊಬೈಲ್​ನಲ್ಲಿ ಕೆಲ ನಂಬರ್​ ಡಿಲೀಟ್​ ಆಗಿದ್ದು ಪತ್ತೆ
  • ಈ ಹಿನ್ನಲೆ ಆರೋಪಿ ವಿನಯ್​ ಮೊಬೈಲ್​ ಎಫ್​ಎಸ್​ಎಲ್​ಗೆ​​ ರವಾನೆ

ಇದನ್ನೂ ಓದಿ: NEET- PG ಎಕ್ಸಾಂ ಮುಂದೂಡಿಕೆ.. ಪರೀಕ್ಷೆಯಲ್ಲಿ ಅಕ್ರಮ ವಾಸನೆ, ಸುಬೋಧ್ ಕುಮಾರ್ ಸಿಂಗ್ ವಜಾ

ಕೊಲೆ ಬಳಿಕ ಆರೋಪಿ ದರ್ಶನ್‌ ಕೂಡ ಕೆಲವರನ್ನ ಸಂಪರ್ಕಿಸಿದ್ದು, ಅವರು ಯಾರು ಎಂಬ ಯಾವುದೇ ಮಹತ್ವದ ವಿವರಗಳು ಬಯಲಾಗಿಲ್ಲ. ಜೊತೆಗೆ ಪ್ರದೂಶ್‌ ನೀಡಿದ 5 ಲಕ್ಷ ಹಣವನ್ನ ಕೇಶವಮೂರ್ತಿ ತನ್ನ ಸ್ನೇಹಿತನಿಗೆ ನೀಡಿದ್ದಾಗಿ ಹೇಳಿದ್ದು, ಆ ಸ್ನೇಹಿತ ಯಾರು ಅನ್ನೋ ಸುಳಿವು ಸಿಕ್ಕಿಲ್ಲ. ರೇಣುಕಾಸ್ವಾಮಿಯನ್ನ ಕೊಲೆಗೈದಿರೋ ಡೆವಿಲ್ ಗ್ಯಾಂಗ್ ಸಾಕ್ಷ್ಯಗಳ ಬಗ್ಗೆ ಬಾಯ್ಬಿಡದೇ ಸೀಕ್ರೆಟ್ ಮೆಂಟೇನ್ ಮಾಡ್ತಿದೆ. ಇದೀಗ ಪೊಲೀಸರು ತಮ್ಮ ಭಾಷೆಯಲ್ಲೇ ಅಸಲಿ ಮ್ಯಾಟರ್ ಕಕ್ಕಿಸಲು ಮುಂದಾಗ್ತಾರಾ? ಹೊರಬಾರದ ಸತ್ಯಗಳನ್ನ ಹೇಗೆ ಬಯಲು ಮಾಡ್ತಾರೆ ಅನ್ನೋದೆ ಮುಂದಿರೋ ಚಾಲೆಂಜ್‌.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ ಗ್ಯಾಂಗ್​ನಿಂದ ಸೀಕ್ರೆಟ್ ಮೆಂಟೇನ್.. ಈ ಪ್ರಶ್ನೆಗಳಿಗೆ ಇನ್ನೂ ಪೊಲೀಸರಿಗೆ ಉತ್ತರ ಸಿಕ್ಕಿಲ್ಲ

https://newsfirstlive.com/wp-content/uploads/2024/06/DARSHAN_GANG-1.jpg

Load More