/newsfirstlive-kannada/media/post_attachments/wp-content/uploads/2024/10/Darshan-release-bellary-Jail.jpg)
ಬೆಂಗಳೂರು: ರೇಣುಕಾಸ್ವಾಮಿ ಕೇಸ್​ನಲ್ಲಿ ನಟ ದರ್ಶನ್​​ ಸೇರಿ ಒಟ್ಟು 7 ಮಂದಿಗೆ ಹೈಕೋರ್ಟ್ ಪೂರ್ಣಾವಧಿಯ ಜಾಮೀನು ಮಂಜೂರು ಮಾಡಿದೆ. ಆ ಮೂಲಕ ದರ್ಶನ್​​ಗೆ ಬಿಗ್​ ರಿಲೀಫ್ ಸಿಕ್ಕಂತಾಗಿದೆ.
ಯಾರಿಗೆಲ್ಲ ಜಾಮೀನು..?
ಪ್ರಕರಣದ ಎ1 ಪವಿತ್ರಗೌಡ, ಎ2 ದರ್ಶನ್, ಎ4 ಜಗದೀಶ್, ಎ7 ಅನುಕುಮಾರ್ ಅಲಿಯಾಸ್ ಅನು, ಎ 12 ಲಕ್ಷ್ಮಣ್, ಎ 11ನಾಗರಾಜ್, ಎ 14 ಪ್ರದೋಷ್​ಗೆ ಜಾಮಿನು ಸಿಕ್ಕಿದೆ. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ಜಾಮೀನು ಮಂಜೂರು ಮಾಡಿ ಆದೇಶ ನೀಡಿದ್ದಾರೆ.
ಹೈಕೋರ್ಟ್​ನಲ್ಲಿ ವಿಚಾರಣೆ ಹೇಗಿತ್ತು..?
ಹೈಕೋರ್ಟ್​ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಏಕಸದಸ್ಯ ಪೀಠದಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆದಿತ್ತು. ದರ್ಶನ್ ಪರ ವಕೀಲ ಸಿ.ವಿ ನಾಗೇಶ್ ಮಾಡಿದ್ದ ವಾದ ಮಂಡಿಸಿದ್ದರು. ಎಸ್​ಪಿಪಿ ಪ್ರಸನ್ನ ಕುಮಾರ್ ಪ್ರತಿವಾದಿಸಿದ್ದರು. ವಾದ-ಪ್ರತಿವಾದಗಳನ್ನ ಆಲಿಸಿದ ನ್ಯಾಯಾಧೀಶರು ಅರ್ಜಿ ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದರು. ಅನಾರೋಗ್ಯ ಕಾರಣ ನೀಡಿ ಮಧ್ಯಂತರ ಬೇಲ್​ ಕೊಡಿಸುವಲ್ಲಿ ಯಶಸ್ವಿಯಾಗಿರೋ ನಾಗೇಶ್​, ಇವತ್ತು ಟೆಕ್ನಿಕಲ್ ಮಿಸ್ಟೇಕ್ ಆಧಾರದ ಮೇಲೆ ಬೇಲ್ ಪಡೆಯಲು ಪ್ರಬಲವಾದ ವಾದ ಮಂಡಿಸಿದ್ದರು.
ಕೋರ್ಟ್​​ನಲ್ಲಿ ವಾದ-ಪ್ರತಿವಾದ ಹೀಗಿತ್ತು?
ಸಿ.ವಿ.ನಾಗೇಶ್​, ದರ್ಶನ್​ ಪರ ವಕೀಲ: ದೇಹದ ಮೇಲೆ 1.5-2.5 ಸೆಂಟಿ ಮೀಟರ್ ಗಾಯ ಮಾತ್ರ ಇದೆ. ದೇಹದ ಮೇಲಿನ ಉಳಿದ ಗಾಯ ರಕ್ತಗಾಯಗಳಲ್ಲ. ರೇಣುಕಾಸ್ವಾಮಿಗೆ ಮಹಿಳೆಯರ ಬಗ್ಗೆ ಗೌರವವಿಲ್ಲ. ಕಾನೂನಿನ ಬಗ್ಗೆಯೂ ರೇಣುಕಾಸ್ವಾಮಿಗೆ ಯಾವುದೇ ಗೌರವ ಇಲ್ಲ. ಮಹಿಳೆಯರಿಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ.
ರೇಣುಕಾಸ್ವಾಮಿಯ ಕೇಸ್‌ನಲ್ಲಿ ಕಿಡ್ನ್ಯಾಪ್ ಮಾಡಿದ ಆರೋಪವಿದೆ. ಆದರೆ ಸ್ವಇಚ್ಛೆಯಿಂದ ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದಿದ್ದಾನೆ. ಹಲ್ಲೆಗೆ ಬಳಸಿದ ವಸ್ತುಗಳು ಅಂತಾ ಮರದ ಕೊಂಬೆಯನ್ನ ರಿಕವರಿ ಮಾಡಲಾಗಿದೆ. ಆದರೆ ಕೊಂಬೆಯಲ್ಲಿ ರಕ್ತದ ಕಲೆ ಇಲ್ಲ ಅಂತಾ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.
ಮೂರು ದಿನ ತಡವಾಗಿ ಪೊಲೀಸರು ಹಗ್ಗ, ಮರದ ಎರಡು ಕೊಂಬೆಗಳನ್ನು ಸಾಕ್ಷ್ಯಗಳನ್ನಾಗಿ ರಿಕವರಿ ಮಾಡಿದ್ದಾರೆ. ಘಟನೆ ಬಳಿಕ ಶೆಡ್‌ಗೆ ಜೂನ್ 9ರಂದು ಪೊಲೀಸರು ಬೀಗ ಹಾಕಿದರು. ಬಳಿಕ ಕೀ ತಮ್ಮ ಬಳಿ ಇಟ್ಕೊಂಡು ಜೂನ್ 12ರಂದು ಶೆಡ್​ ಮಹಜರು ಮಾಡಿ ಸೀಜ್​ ಮಾಡಿದ್ದಾರೆ. ಆ ಸಮಯದಲ್ಲಿ ತಮಗೆ ಬೇಕಾದಂತೆ ಸಾಕ್ಷಿ ಸೃಷ್ಟಿ ಮಾಡಿದ್ದಾರೆ. ಮೃತದೇಹ ಜೂನ್​ 9ಕ್ಕೆ ಸಿಕ್ಕಿದ್ರೂ ಅದರ ಪೋಸ್ಟ್​ ಮಾರ್ಟ್​ 11ರಂದು ನಡೆದಿದೆ. ಅಲ್ಲದೆ, ಪೋಸ್ಟ್​ ಮಾರ್ಟ್‌ಂ ರಿಪೋರ್ಟ್ 1 ತಿಂಗಳು ತಡವಾಗಿ ಬಂದಿದೆ. ಪೊಲೀಸರು ರಿಕವರಿ ಮಾಡಿರುವುದೇ ಬೇರೆ. ದರ್ಶನ್​ ಚಪ್ಪಲಿ ಹಾಕಿದ್ದಾಗಿ ಹೇಳಿದ್ದಾರೆ. ದರ್ಶನ್ ಬಟ್ಟೆ, ಶೂ ವಶಕ್ಕೆ ಪಡೆದು ಮಹಜರು ಮಾಡಲಾಗಿದೆ.
ನ್ಯಾ. ವಿಶ್ವಜಿತ್ ಶೆಟ್ಟಿ, ಜಡ್ಜ್ : ಅದು ದರ್ಶನ್ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿತ್ತಾ?
ಸಿ.ವಿ.ನಾಗೇಶ್​, ದರ್ಶನ್​ ಪರ ವಕೀಲ: ಇಲ್ಲಾ ಇದು ವಿಜಯಲಕ್ಷ್ಮಿ ಅವರ ಬೇರೆ ಅಪಾರ್ಟ್‌ಮೆಂಟ್​ನಲ್ಲಿ ಸಿಕ್ಕಿದೆ. ಆ ಶೂಗಳನ್ನ ಎಫ್ಎಸ್ಎಲ್​ಗೆ ಕಳುಹಿಸಲಾಗಿತ್ತು. ದರ್ಶನ್ ಹೇಳಿದ ಸ್ಥಳದಲ್ಲಿ ರಿಕವರಿ ಆಗಿಲ್ಲ. ರಿಕವರಿ ಆಗಿರೋದು ವಿಜಯಲಕ್ಷ್ಮಿಯವರ ಮನೆಯಲ್ಲಿ. ಇಲ್ಲಿ ಅವರ ಶೂ ಮೇಲೆ ರಕ್ತದ ಕಲೆ ಸಿಕ್ಕಿರೋದೇ ಅನುಮಾನ. ಪೊಲೀಸರು FSLಗೆ ರೇಣುಕಾಸ್ವಾಮಿ ರಕ್ತ ಕಳಿಸಿದರು. ಇಲ್ಲಿ ಅವರೇ ಶೂ ಮೇಲೆ ರಕ್ತದ ಹನಿ ಹಾಕಿ ಮ್ಯಾಚ್ ಮಾಡಿರುವ ಡೌಟ್ ಇದೆ.
ನ್ಯಾ. ವಿಶ್ವಜಿತ್ ಶೆಟ್ಟಿ, ಜಡ್ಜ್ : ಯಾವ ಕಾರಣಕ್ಕೆ ಮೃತ ರಕ್ತವನ್ನ ಕಳುಹಿಸಲಾಗಿತ್ತು?
ಸಿ.ವಿ.ನಾಗೇಶ್​, ದರ್ಶನ್​ ಪರ ವಕೀಲ : ಅಲ್ಲ ಬೇರೆ ವಸ್ತುಗಳ ಡಿಎನ್ಎ ಮ್ಯಾಚ್ ಮಾಡಲು ಕಳಿಸಿರಬಹುದು. 3 ದಿನಗಳ ನಂತರ ಅಂದರೆ ಸೋಮವಾರ ಬಟ್ಟೆಗಳನ್ನ ತೊಳೆಯಲಾಗಿದೆ. ಸರ್ಫ್ ಪೌಡರ್ ನಲ್ಲಿ ನೆನೆಸಿ, ಕುಕ್ಕಿದರು ಹೇಗೆ ರಕ್ತದ ಕಲೆ ಸಿಕ್ಕಿದೆ?
ನ್ಯಾ. ವಿಶ್ವಜಿತ್ ಶೆಟ್ಟಿ, ಜಡ್ಜ್ : ಒಂದೇ ಸರಿ ಕುಕ್ಕಿರಬೇಕು
ಸಿ.ವಿ.ನಾಗೇಶ್​, ದರ್ಶನ್​ ಪರ ವಕೀಲ : ಕುಕ್ಕಿ ಕುಕ್ಕಿ, ಹೊಸಗಿ ತೊಳೆಯಲಾಗಿದೆ ಎಂದು ಉಲ್ಲೇಖವಾಗಿದೆ. ಆದ್ರೂ, ಅದರಲ್ಲಿ ರೇಣುಕಾಸ್ವಾಮಿ ರಕ್ತದ ಡಿ ಎನ್ ಎ ಮ್ಯಾಚ್ ಹೇಗೆ.? ಇದೆಲ್ಲಾ ಸುಳ್ಳು ಸಾಕ್ಷಿ ಸೃಷ್ಟಿ. ಹೀಗೆ ಕೆಲವೊಂದು ಟೆಕ್ನಿಕಲ್​ ಅಂಶಗಳನ್ನ ಉಲ್ಲೇಖಿಸಿ ದರ್ಶನ್​ ಪರ ವಕೀಲ ಸಿ.ವಿ ನಾಗೇಶ್​ ವಾದ ಮಂಡಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us