Advertisment

‘ವಿಜಯಲಕ್ಷ್ಮಿಗೆ ಕೊಟ್ಟಿದ್ದ ಸೇಮ್ ಕಾರು ನಂಗೂ ಬೇಕು’- ಹಠ ಹಿಡಿದಿದ್ದ ಪವಿತ್ರಾಗೆ ದರ್ಶನ್ ಕೊಟ್ಟ ಗಿಫ್ಟ್ ಏನು?

author-image
admin
Updated On
‘ವಿಜಯಲಕ್ಷ್ಮಿಗೆ ಕೊಟ್ಟಿದ್ದ ಸೇಮ್ ಕಾರು ನಂಗೂ ಬೇಕು’- ಹಠ ಹಿಡಿದಿದ್ದ ಪವಿತ್ರಾಗೆ ದರ್ಶನ್ ಕೊಟ್ಟ ಗಿಫ್ಟ್ ಏನು?
Advertisment
  • ಪತ್ನಿ ವಿಜಯಲಕ್ಷ್ಮಿಗೆ ದುಬಾರಿ ಕಾರನ್ನು ಗಿಫ್ಟ್​ ನೀಡಿದ್ದ ದರ್ಶನ್
  • ರೇಣುಕಾಸ್ವಾಮಿ ಕೊಲೆ ಪ್ರಕರಣದ A1 ಆರೋಪಿ ಪವಿತ್ರಾ ಗೌಡ
  • ಕೋಟಿ, ಕೋಟಿ ಬೆಲೆ ಬಾಳುವ ಕಾರಿಗೆ ಡಿಮ್ಯಾಂಡ್ ಮಾಡಿದ್ದ ಪವಿತ್ರಾ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತವರ ಗ್ಯಾಂಗ್ ಲಾಕಪ್‌ನಲ್ಲಿದೆ. ಡೆಡ್ಲಿ ಮರ್ಡರ್‌ ಕೇಸ್‌ನ ತನಿಖೆಯಲ್ಲಿ ಸಾಕಷ್ಟು ಭಯಾನಕ ಸತ್ಯಗಳು ಹೊರಬರುತ್ತಿವೆ. ರೇಣುಕಾಸ್ವಾಮಿ ಅವರ ಕೊಲೆಗೆ ಪವಿತ್ರಾಗೌಡ ಅವರಿಗೆ ಮಾಡಿದ ಕಮೆಂಟ್ ಹಾಗೂ ಅಶ್ಲೀಲ ಮೆಸೇಜ್ ಕಾರಣ ಎನ್ನಲಾಗುತ್ತಿದ್ದು, ಪೊಲೀಸರು ಸಾಕ್ಷಿಗಳನ್ನು ಕಲೆ ಹಾಕುತ್ತಿದ್ದಾರೆ.

Advertisment

ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆಗೂ ಮೊದಲು ಪವಿತ್ರಾ ಗೌಡಗೆ ಒಂದು ಗುಡ್​ನ್ಯೂಸ್​ ಕತೆ ಹೇಳಿದ್ದ ದರ್ಶನ್..! 

ನಟ ದರ್ಶನ್ ಅರೆಸ್ಟ್‌ ಆಗಿದ್ದಕ್ಕೆ ಶಾಕ್ ಆಗಿರುವ ಪತ್ನಿ ವಿಜಯಲಕ್ಷ್ಮಿ ಅವರು ಬೇಸರಗೊಂಡು ಸೋಷಿಯಲ್ ಮೀಡಿಯಾದಿಂದ ಡಿ ಆ್ಯಕ್ಟೀವ್ ಆಗಿದ್ದಾರೆ. ಮೊದಲಿಗೆ ಡಿಪಿ ಫೋಟೋ ತೆಗೆದಿದ್ದ ವಿಜಯಲಕ್ಷ್ಮಿ ಅವರು ದರ್ಶನ್ ಫ್ಯಾನ್ಸ್‌ಗಳಿಂದಲೂ ಅಂತರ ಕಾಯ್ದುಕೊಂಡಿದ್ದಾರೆ. ಈ ಬೆಳವಣಿಗೆಯ ಬಳಿಕ ನಟ ದರ್ಶನ್ ಹಾಗೂ ಪವಿತ್ರಾ ಅವರ ಬಗ್ಗೆ ಮತ್ತಷ್ಟು ರೋಚಕ ಸಂಗತಿಗಳು ಬಯಲಾಗುತ್ತಿದೆ.

publive-image

ಪವಿತ್ರಾಗೆ ಕೋಟಿ ಕಾರಿನ ಗಿಫ್ಟ್‌!
ಕೇವಲ ಎರಡೂವರೆ ತಿಂಗಳ ಹಿಂದಷ್ಟೇ ನಡೆದಿರೋ ಕೋಟಿ ಕಾರಿನ ಕತೆ ಇದು. ನಟ ದರ್ಶನ್ ಅವರು ತಮ್ಮ ಪತ್ನಿ ವಿಜಯಲಕ್ಷ್ಮಿಗೆ ದುಬಾರಿ ಕಾರನ್ನು ಗಿಫ್ಟ್​ ನೀಡಿದ್ದರು. ಈ ವಿಷಯ ತಿಳಿದಿದ್ದ ಪವಿತ್ರಾಗೌಡ ಅವರು ನನಗೂ ಅದೇ ಸೇಮ್ ಮಾಡಲ್ ಕಾರು ಬೇಕು ಅಂತ ಹಠ ಹಿಡಿದಿದ್ದರಂತೆ. ಆ ಹಿನ್ನೆಲೆ ಪತ್ನಿ ವಿಜಯಲಕ್ಷ್ಮಿಗೆ ನೀಡಿದ್ದ ಸೇಮ್ ಮಾಡಲ್ ಕಾರನ್ನು ನಟ ದರ್ಶನ್‌ ಅವರು ಪವಿತ್ರಾ ಗೌಡ ಅವರಿಗೆ ಗಿಫ್ಟ್ ನೀಡಿದ್ದಾರೆ ಎನ್ನಲಾಗಿದೆ.
2024ರ ಮಾರ್ಚ್ 28ರಂದು ಪವಿತ್ರಾಗೌಡಗೆ ನಟ ದರ್ಶನ್ ಅವರು ಬಿಳಿ ಬಣ್ಣದ ರೇಂಜ್ ರೋವರ್ ಕಾರನ್ನು ಗಿಫ್ಟ್ ನೀಡಿದ್ದಾರೆ. KA 04 NE 0777 ನಂಬರಿನ ರೇಂಜ್ ರೋವರ್ ಕಾರು 2024ರ ಮಾರ್ಚ್ 28ಕ್ಕೆ ರಿಜಿಸ್ಟರ್ ಆಗಿದೆ.

Advertisment

publive-image

ಪವಿತ್ರಾ ಗೌಡ ಹೆಸರಿನಲ್ಲೇ ನಟ ದರ್ಶನ್ ಅವರು ರೇಂಜ್‌ ರೋವರ್ ಕಾರನ್ನು ರಿಜಿಸ್ಟರ್ ಮಾಡಿಸಿದ್ದಾರೆ. ಸದ್ಯ ಪವಿತ್ರಾ ಗೌಡ ಅವರು ಕೊಲೆ ಪ್ರಕರಣದ A1 ಆರೋಪಿಯಾಗಿದ್ದು, ನಟ ದರ್ಶನ್ ಗಿಫ್ಟ್ ಕೊಟ್ಟಿರುವ ರೇಂಜ್ ರೋವರ್ ಕಾರು ಮನೆಯ ಪಾರ್ಕಿಂಗ್​ನಲ್ಲಿದೆ.

ಇದನ್ನೂ ಓದಿ: 36 ಗಂಟೆ.. 13 ಅಧಿಕಾರಿಗಳು.. ರೋಚಕ ಆಪರೇಷನ್ ಡಿ..! ದರ್ಶನ್ ಬಂಧನ ಹೇಗೆ ಆಯ್ತು..? 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment