ಬರೋಬ್ಬರಿ 44 ದಿನ ವೈದ್ಯರ ನಿಗಾದಲ್ಲಿ ದರ್ಶನ್​​; ಕಾಟೇರನ ಆರೋಗ್ಯದ ಸ್ಥಿತಿ ಹೇಗಿದೆ ಗೊತ್ತಾ?

author-image
Ganesh Nachikethu
Updated On
ದರ್ಶನ್ ಭೇಟಿಯಾಗಲು 7 ಜನರಿಗೆ ಮಾತ್ರ ಅವಕಾಶ; ಗೌಪ್ಯತೆ ಕಾಪಾಡಲು ಪತ್ನಿ ವಿಜಯಲಕ್ಷ್ಮಿ ಮನವಿ
Advertisment
  • ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿರೋ ದರ್ಶನ್
  • ತಾತ್ಕಾಲಿತ ರಿಲೀಫ್‌ನಲ್ಲಿ ಹೊರಗಿರೋ ಆರೋಪಿ
  • ಎ2 ‘ದರ್ಶನ್​​’ಗೆ ಏಳು ರೀತಿಯ ಮೆಡಿಕಲ್ ಟೆಸ್ಟ್

ಬೆಂಗಳೂರು: 2024 ದಾಸನ ಪಾಲಿಗೆ ಅಗ್ನಿ ಪರೀಕ್ಷೆಯ ವರ್ಷ. ಮೊದಲಾರ್ಧ ವರ್ಷ ಬಿಂದಾಸ್ ಆಗಿದ್ದ ಕಾಟೇರನಿಗೆ ಜೂನ್ 22ರ ನಂತರ ಎದುರಾಗಿದ್ದು ಬರೀ ಸವಾಲುಗಳೇ. 61 ದಿನಗಳ ಬಳ್ಳಾರಿ ಕಾಲ್ ಶೀಟ್ ಮುಗಿಸಿ ಹೊರ ಬಂದ ದರ್ಶನ್, ಒಂದು ದಿನ ರೆಸ್ಟ್ ಪಡೆದು ವೈದ್ಯರಿಗೆ ಮುಂದಿನ 44 ದಿನಗಳ ಡೇಟ್ ಕೊಟ್ಟಿದ್ದಾರೆ.

ಬರೋಬ್ಬರಿ 131 ದಿನಗಳ ಸೆರೆವಾಸ. ಕತ್ತಲ ಕೋಣೆಯಲ್ಲಿ ಕಾಡ್ತಿದ್ದ ಆ ಬೆನ್ನು ನೋವು. ಕೂರಲು ಚೇರ್​ ಇಲ್ಲ. ಮಲಗಲು ಹಾಸಿಗೆ ಇಲ್ಲ. ಸರ್ಜಿಕಲ್​ ಚೇರ್​ ಮೇಲೆಯೇ ರಿಲ್ಯಾಕ್ಸ್​. ಸದ್ಯ ಸಂಕಷ್ಟಗಳನ್ನ ಅನುಭವಿಸಲಾಗದೇ ಮಧ್ಯಂತರ ಜಾಮೀನು ಪಡೆದು ಹೊರಬಂದ ದರ್ಶನ್​​ ಇದೀಗ ವೈದ್ಯರ ಸುಪರ್ದಿಗೆ ಜಾರಿದ್ದಾರೆ.

‘ದರ್ಶನ್​​’ಗೆ ಏಳು ರೀತಿಯ ಪರೀಕ್ಷೆ.. ವರದಿಯಲ್ಲೇನಿದೆ?

ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯ ನಾಲ್ಕನೇ ಮಹಡಿಯ ವಿಐಪಿ ಸೂಟ್​ನಲ್ಲಿ ನಟ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ಅಬ್ಸರ್ವೇಷನ್​ನಲ್ಲಿರುವ ದಾಸನಿಗೆ ಒಟ್ಟು ಏಳು ರೀತಿಯ ಟೆಸ್ಟ್​ಗಳನ್ನ ಮಾಡಲಾಗಿದೆ.

ದರ್ಶನ್​ಗೆ ‘7’ ಪರೀಕ್ಷೆ

ಸ್ಕ್ಯಾನಿಂಗ್ ಇಸಿಜಿ, ಟ್ರೆಡ್ ಮಿಲ್ ಟೆಸ್ಟ್, ಲಿವರ್ ಫಂಕ್ಷನ್ ಟೆಸ್ಟ್, ರೀನಲ್ ಫಂಕ್ಷನ್ ಟೆಸ್ಟ್, ಯೂರಿನ್ ಟೆಸ್ಟ್, ಬ್ಲಡ್ ಪ್ರೆಷರ್ ಟೆಸ್ಟ್ ಹಾಗೂ ಶುಗರ್ ಟೆಸ್ಟ್ ಮಾಡಲಾಗಿದೆ. ಇಂದು ಈ ಎಲ್ಲಾ ಪರೀಕ್ಷೆಗಳ ವರದಿ ವೈದ್ಯರ ಕೈ ಸೇರಿದ್ದು, ಎನ್ಒಸಿ ಬಂದ ಬಳಿಕ ಫಿಸಿಯೋಥೆರಪಿ ಬಗ್ಗೆ ನಿರ್ಧಾರ ಮಾಡಲಾಗುತ್ತೆ.

ಅಷ್ಟಲ್ಲದೇ, ನುರಿತ ನರರೋಗ ತಜ್ಞ ಡಾ. ನವೀನ್ ಅಪ್ಪಾಜಿಯವರು, ಮೂಳೆ ರೋಗ ತಜ್ಞರು, ಹೃದ್ರೋಗ ತಜ್ಞರು, ಮೂತ್ರಪಿಂಡ ತಜ್ಞರು, ಜನರಲ್ ಫಿಸಿಷಿಯನ್, ಲ್ಯಾಬ್ ಬಯೋ ಕೆಮಿಸ್ಟ್ ಸೇರಿದಂತೆ ಏಳು ಜನ ನುರಿತ ವೈದ್ಯರು ದರ್ಶನ್​ಗೆ ಚಿಕಿತ್ಸೆ ನೀಡಲಿದ್ದಾರೆ.

‘ದರ್ಶನ್​​’ನನ್ನ ನೋಡಲು ಏಳು ಜನ್ರಿಗೆ ಮಾತ್ರ ಅವಕಾಶ!

ಆಸ್ಪತ್ರೆಗೆ ದಾಖಲಾಗಿರುವ ದರ್ಶನ್​​ ನೋಡೋಕೆ ಸದ್ಯ ಏಳು ಜನ್ರಿಗೆ ಮಾತ್ರ ಅವಕಾಶ ಇದೆ. ಇನ್ನು, ಯಾರಾರು ಅನ್ನೋ ಲಿಸ್ಟ್​ ಕೂಡಾ ನ್ಯೂಸ್​ ಫಸ್ಟ್​ಗೆ ಸಿಕ್ಕಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೀಶ್, ದರ್ಶನ್ ತಾಯಿಯಾದ ಮೀನಮ್ಮ, ದರ್ಶನ್​ ಸಹೋದರಿಯಾದ ದಿನಕರ್​ ತುಗೂದೀಪ, ದರ್ಶನ್ ಅಕ್ಕನ ಮಗ ಅಂದ್ರೆ ಅಳಿಯನಾದ ಚಂದ್ರು, ಹಾಗೂ ನಟರಾದ ದರ್ಶನ್ ಆಪ್ತ ಧನ್ವಿರ್​ಗೂ ಭೇಟಿಗೆ ಅವಕಾಶ ಇದೆ. ಇದ್ರ ಜೊತೆಗೆ ದರ್ಶನ್ ಸಂಬಂಧಿಯಾದ ಸುಶಾಂತ್ ಸೇರಿ ಏಳು ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ.

ಗಂಡನ ಚಿಕಿತ್ಸೆ ಬಗ್ಗೆ ಗೌಪ್ಯತೆ ಕಾಪಾಡುವಂತೆ ಪತ್ನಿ ಮನವಿ

ಇನ್ನು, ನಟ ದರ್ಶನ್​ ಚಿಕಿತ್ಸೆ ಬಗ್ಗೆ ಗೌಪ್ಯತೆ ಕಾಪಾಡುವಂತೆ ಪತ್ನಿ ವಿಜಯಲಕ್ಷ್ಮೀ, ಆಸ್ಪತ್ರೆ ವೈದ್ಯರಿಗೆ ಪರ್ಸನಲ್ ಆಗಿ ಮನವಿ ಮಾಡಿದ್ದಾರಂತೆ. ಮಾಧ್ಯಮಗಳಿಗೆ ಹಾಗೂ ಇತರೆ ಸಂಬಂಧಿಕರಿಗೆ ಯಾವುದೇ ಮಾಹಿತಿ ನೀಡದಂತೆ ವಿಜಯಲಕ್ಷ್ಮೀ ರಿಕ್ವಸ್ಟ್ ಮಾಡ್ಕೊಂಡಿದ್ದಾರೆ ಅನ್ನೋ ಮಾಹಿತಿ ಇದೆ.

ಇನ್ನು, ರಿಪೋರ್ಟ್ಸ್​​ ಪರಿಶೀಲನೆ ಬಳಿಕ ವೈದ್ಯರು ಮುಂದಿನ ಚಿಕಿತ್ಸೆಗೆ ತಯಾರಿ ನಡೆಸಲಿದ್ದಾರೆ. ಏನೇ ಹೇಳಿ ಸದ್ಯಕ್ಕೆ ದರ್ಶನ್​ಗೆ ಶಸ್ತ್ರ ಚಿಕಿತ್ಸೆ ಮಾಡಿಸ್ಬೇಕೋ ಅಥವಾ ಬೇಡ್ವೋ? ಅನ್ನೋದು ಇನ್ನೂ ತೀರ್ಮಾನ ಆಗಿಲ್ಲ. ವರದಿ ಬಂದ ಬಳಿಕವಷ್ಟೇ ಈ ಪ್ರಶ್ನೆಗೆ ಉತ್ತರ ಬಹಿರಂಗವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment