Advertisment

24 ನಿಮಿಷಗಳ ಮಾತುಕತೆ..! ಪ್ರಸಾದ ಅಷ್ಟೇ ಅಲ್ಲ, ದರ್ಶನ್​​ಗಾಗಿ ವಿಜಯಲಕ್ಷ್ಮಿ ಏನೇನು ತಂದಿದ್ದರು..?

author-image
Ganesh
Updated On
ದರ್ಶನ್ ಭೇಟಿಯಾಗಲು 7 ಜನರಿಗೆ ಮಾತ್ರ ಅವಕಾಶ; ಗೌಪ್ಯತೆ ಕಾಪಾಡಲು ಪತ್ನಿ ವಿಜಯಲಕ್ಷ್ಮಿ ಮನವಿ
Advertisment
  • ರೇಣುಕಾಸ್ವಾಮಿ ಕೇಸ್​​ನಲ್ಲಿ ಜೈಲು ಸೇರಿರುವ ದರ್ಶನ್
  • ಬಳ್ಳಾರಿ ಜೈಲಿಗೆ ಭೇಟಿ ನೀಡಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ
  • ವಕೀಲರ ಜೊತೆ ದರ್ಶನ್ ಮಾತುಕತೆ, ಬೇಲ್​ಗೆ ಅರ್ಜಿ..?

ಇಂದು ಮಧ್ಯಾಹ್ನ ವಿಜಯಲಕ್ಷ್ಮಿ ವಕೀಲರ ಸಮೇತ ಬಳ್ಳಾರಿ ಜೈಲಿಗೆ ಆಗಮಿಸಿ ಪತಿ ದರ್ಶನ್​​ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ವಿಜಯಲಕ್ಷ್ಮಿ ಅವರಿಗೆ ದರ್ಶನ್ ಸಹೋದರ ದಿನಕರ ತೂಗುದೀಪ ಸಾಥ್ ನೀಡಿದರು.

Advertisment

ದರ್ಶನ್ ಅವರಿಗಾಗಿ ವಿಜಯಲಕ್ಷ್ಮಿ ಡ್ರೈಪ್ರೂಟ್ಸ್, ಬಟ್ಟೆ , ಬೇಕರಿ ತಿನಿಸುಗಳನ್ನು ತಂದುಕೊಟ್ಟಿದ್ದಾರೆ ಎಂಬ ಮಾಹಿತಿ ಇದೆ. 24 ನಿಮಿಷಗಳ ಕಾಲ ಚರ್ಚಿಸಿ ಸೆಲ್​ನಿಂದ ದರ್ಶನ್ ವಾಪಸ್ ಆಗಿದ್ದಾರೆ. ನಂತರ ವಿಜಯಲಕ್ಷ್ಮಿ ತಂದಿದ್ದ ಬ್ಯಾಗ್ ಹಿಡಿದು ಹೋಗಿದ್ದಾರೆ. ಕಳೆದ ಎರಡ್ಮೂರು ದಿನಗಳ ಹಿಂದೆ ವಿಜಯಲಕ್ಷ್ಮಿ ಅವರು ಅಸ್ಸಾಂನ ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿದ್ದರು. ಅಲ್ಲಿಂದ ತಂದಿದ್ದ ಪ್ರಸಾದವನ್ನೂ ನೀಡಿದ್ದಾರೆ. ಜೊತೆಗೆ ಬೇಲ್ ಸಿಗುವ ಬಗ್ಗೆ ದರ್ಶನ್​ಗೆ ವಿಜಯಲಕ್ಷ್ಮಿ ಧೈರ್ಯ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಚಾರ್ಜ್‌ಶೀಟ್, ಬೇಲ್ ಅರ್ಜಿ ಸಂಬಂಧಿತ ಅರ್ಜಿಗಳ ಹಿಡಿದು ವಕೀಲರು ಆಗಮಿಸಿದ್ದರು. ಭೇಟಿ ವೇಳೆ ದರ್ಶನ್ ಜೊತೆ ಕಾನೂನು ಹೋರಾಟಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಬಳ್ಳಾರಿ ಜೈಲಿನಿಂದ ಬೇರೆ ಜೈಲಿಗೆ ಶಿಫ್ಟ್ ಆಗುವ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ:ಬಳ್ಳಾರಿ ಜೈಲಲ್ಲಿ ದರ್ಶನ್ ಭೇಟಿಯಾದ ಸುಶಾಂತ್ ನಾಯ್ಡು; ಯಾರಿವರು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment