Advertisment

ಜೈಲಲ್ಲೂ ರೂಲ್ಸ್ ಬ್ರೇಕ್? ದರ್ಶನ್​ ಭೇಟಿಯಾಗಿದ್ದೇಕೆ ಪವಿತ್ರಾ ಗೌಡ ಸ್ನೇಹಿತೆ; ಈ ಸಮತಾ ಯಾರು?

author-image
Bheemappa
Updated On
ನಟ ದರ್ಶನ್​​ಗೆ ಕೊಟ್ಟ ಹಣದ ರಹಸ್ಯ ಬಯಲು -ಮೋಹನ್​ ರಾಜ್​ ಸ್ಫೋಟಕ ಹೇಳಿಕೆ
Advertisment
  • ತೀವ್ರ ಕುತೂಹಲ ಕೆರಳಿಸಿದ ದರ್ಶನ್- ಸಮತಾ ಭೇಟಿ ವಿಚಾರ
  • ಜೈಲಿನ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿರುವ ಆರೋಪ
  • ಯಾವ ವಿಚಾರದ ಬಗ್ಗೆ ಚರ್ಚೆ ನಡೆದಿದೆ ಅನ್ನೋದು ಕುತೂಹಲ

ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್​​ರನ್ನ ಪವಿತ್ರಾಗೌಡ ಆತ್ಮೀಯ ಸ್ನೇಹಿತೆ ಸಮತಾ ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಪವಿತ್ರಾ ಗೌಡ ಗೆಳತಿಯಾಗಿರೋ ಸಮತಾ ದರ್ಶನ್ ಭೇಟಿಯಾಗಿದ್ದು ಯಾಕೆ ಅನ್ನೋ ಪ್ರಶ್ನೆ ಮೂಡಿದೆ. ದರ್ಶನ್ ಭೇಟಿಗೆ ಅವಕಾಶ ಸಿಗದ್ದಕ್ಕೆ ಸಮತಾ ವಿರುದ್ಧ ದರ್ಶನ್ ಆಪ್ತ ವಲಯ ಬೇಸರಗೊಂಡಿದೆ. ಈ ಮಧ್ಯೆ ಪವಿತ್ರಾ ಗೌಡ ಪೋಷಕರು ಕೂಡ ಜೈಲಿಗೆ ಭೇಟಿ ನೀಡಿದ್ದಾರೆ.

Advertisment

ಇದನ್ನೂ ಓದಿ: ಟೀಂ ಇಂಡಿಯಾ ತವರಿಗೆ ಆಗಮಿಸೋ ಟೈಮ್‌ ಫಿಕ್ಸ್.. ನಾಳೆ ಭರ್ಜರಿ ಸ್ವಾಗತ; ಕಾರ್ಯಕ್ರಮಗಳ ಲಿಸ್ಟ್​ ಇಲ್ಲಿದೆ

ರೇಣುಕಾಸ್ವಾಮಿ ಹತ್ಯೆ ಕೇಸ್​​ನಲ್ಲಿ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ನೋಡಲು ಹಲವು ಮಂದಿ ಜೈಲಿನತ್ತ ಎಡತಾಕುತ್ತಿದ್ದಾರೆ. ದರ್ಶನ್ ಜೈಲಿನಲ್ಲಿ ಈಗಾಗಲೇ 2 ವಾರ ಕಳೆದಿದ್ದು ಇದುವರೆಗೂ ಜಾಮೀನು ಅರ್ಜಿ ಸಲ್ಲಿಕೆ ಮಾಡಿಲ್ಲ. ಆದ್ರೆ ಚಾರ್ಜ್‌ಶೀಟ್‌ ಸಲ್ಲಿಕೆವರೆಗೆ ದರ್ಶನ್ ಪರ ವಕೀಲರು ಕಾದಿದ್ದಾರೆ. ಈ ಮಧ್ಯೆ ಎ1 ಪವಿತ್ರಾಗೌಡ ಗೆಳತಿ ಜೈಲಿನಲ್ಲಿ ದರ್ಶನ್ ಭೇಟಿಯಾಗಿರೋದು ಕೌತುಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 3 ದಿನ ಧಾರಾಕಾರ ಮಳೆ.. ಯಾವ್ಯಾವ ಜಿಲ್ಲೆಗಳಿಗೆ ಭಾರೀ ಅಲರ್ಟ್?

Advertisment

publive-image

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್​​ರನ್ನು ಪವಿತ್ರಾಗೌಡ ಗೆಳತಿ ಸಮತಾ ಭೇಟಿಯಾಗಿದ್ದಾಳೆ. ಪವಿತ್ರಾಗೌಡ ಜಾಮೀನು ಪ್ರಕ್ರಿಯೆ ಬಗ್ಗೆ ಸಮತಾ ಚರ್ಚೆ ನಡೆಸಿದ್ದಾಳೆ ಎನ್ನಲಾಗ್ತಿದೆ. ಆದ್ರೆ ಸಮತಾ ಭೇಟಿ ಬಗ್ಗೆ ದರ್ಶನ್‌ ಆಪ್ತವಲಯ ಅಸಮಾಧಾನಗೊಂಡಿದೆ. ಆಪ್ತ ಗೆಳತಿಯಾಗಿರುವ ಸಮತಾ ಕಾರಣಕ್ಕೆ ನಿನ್ನೆ ನಟ ಧನ್ವೀರ್​​​ಗೆ ದರ್ಶನ್‌ ಭೇಟಿ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಯಾರು ಈ ಸಮತಾ?

  • ಕೊಲೆ ಪ್ರಕರಣದ A1 ಪವಿತ್ರಾಗೌಡ ಆಪ್ತ ಸ್ನೇಹಿತೆ ಸಮತಾ
  • ಒಂದೇ ಆತ್ಮ ಎರಡು ದೇಹದಂತಿರೋ ಪವಿತ್ರಾ- ಸಮತಾ
  • ಜೈಲಿನ ಎಂಟ್ರಿ ಬುಕ್​ನಲ್ಲಿ ಸಮತಾ ಎಂಬ ಹೆಸರು ಉಲ್ಲೇಖ
  • ತೀವ್ರ ಕುತೂಹಲ ಕೆರಳಿಸಿದ ದರ್ಶನ್-ಸಮತಾ ಭೇಟಿ ವಿಚಾರ
  • ಆಕೆ ದರ್ಶನ್ ಭೇಟಿ ಮಾಡಿದ ಉದ್ದೇಶ ಏನು ಅಂತ ಚರ್ಚೆ

ನಟ ದರ್ಶನ್ ಜೈಲಿಗೋದ ದಿನದಿಂದ ಹಲವರು ಜೈಲಿಗೆ ಭೇಟಿ ನೀಡ್ತಿದ್ದು ಜೈಲು ಸಿಬ್ಬಂದಿ ಜೈಲಿನ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿರುವ ಆರೋಪ ಕೇಳಿ ಬಂದಿದೆ. ಸೆಲೆಬ್ರಿಟಿ ದರ್ಶನ್​ಗೆ ಒಂದು ನ್ಯಾಯ ಉಳಿದ ಬಂಧಿಗಳಿಗೆ ಮತ್ತೊಂದು ನ್ಯಾಯನಾ ಎಂಬ ಪ್ರಶ್ನೆ ಮೂಡಿದೆ.

Advertisment

ಜೈಲಿನ ನಿಯಮಗಳೇನು?

  • ಜೈಲಲ್ಲಿ ರಜಾ ದಿನಗಳಲ್ಲಿ ಯಾರ ಭೇಟಿಗೂ ಅವಕಾಶ ಇಲ್ಲ
  • ಜೈಲಾಧಿಕಾರಿಗಳು ಅವಕಾಶ ನೀಡಿದ್ರೆ ರೆಕಾರ್ಡ್ ಮಾಡ್ಬೇಕು
  • ವಾರದಲ್ಲಿ 2 ದಿನ ಸ್ನೇಹಿತರು, ಕುಟುಂಬಸ್ಥರ ಭೇಟಿಗೆ ಅವಕಾಶ
  • ವಿಡಿಯೋ ಕಾನ್ಫರೆನ್ಸ್ ಮೂಲಕ 2 ಬಾರಿ ಮಾತನಾಡಲು ಅವಕಾಶ
  • ವಿಶೇಷ ಸಂದರ್ಭಗಳಲ್ಲಿ ಹೆಚ್ಚು ಬಾರಿ ಭೇಟಿಗೆ ಅವಕಾಶ ಇದೆ
  • ಬಂಧಿಗಳು ತಮ್ಮ ವಕೀಲರನ್ನ ಭೇಟಿ ಮಾಡಲು ಅವಕಾಶ ನೀಡುತ್ತೆ
  • ಆದರೆ ದರ್ಶನ್ ವಿಚಾರದಲ್ಲಿ ಯಾವುದೇ ಕಾನೂನು ಪಾಲಿಸಿಲ್ಲ
  • ದರ್ಶನ್ ಜೈಲು ಸೇರಿದ ಕೆಲವೇ ದಿನಗಳಲ್ಲಿ ಹಲವರು​ ಭೇಟಿ

ಇದನ್ನೂ ಓದಿ:ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯುರಿಟಿ ಗಾರ್ಡ್ ಬರ್ಬರ ಹತ್ಯೆ.. ಅಸಲಿಗೆ ಆಗಿದ್ದೇನು?

publive-image

ಈ ಮಧ್ಯೆ ಆರೋಪಿ ಪವಿತ್ರಾಗೌಡ ಕುಟುಂಬಸ್ಥರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದಾರೆ. ಪವಿತ್ರಾ ತಾಯಿ-ತಂದೆ, ಸಹೋದರ ಪವಿತ್ರಾಗಾಗಿ ಬಟ್ಟೆ ಮತ್ತು ಹಣ್ಣುಗಳನ್ನ ಕೊಂಡೊಯ್ದಿದ್ದಾರೆ. ಬ್ಯಾಗ್​​​ನಲ್ಲಿ ಅಗತ್ಯ ವಸ್ತುಗಳನ್ನ ತೆಗೆದುಕೊಂಟು ಜೈಲಿನೊಳಗೆ ಹೋಗುತ್ತಿರುವುದು ಕಂಡು ಬಂದಿದೆ. ಜೈಲಿನಲ್ಲಿ ಸಮತಾ ಜೊತೆ ಮಾತಾಡಲು ದರ್ಶನ್ ಒಪ್ಪಿಗೆ ಸೂಚಿಸಿದ್ದು, ಇಬ್ಬರ ನಡುವೆ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆದಿದೆ ಎನ್ನಲಾಗಿದೆ, ಆದರೆ ಯಾವ ವಿಚಾರದ ಬಗ್ಗೆ ಚರ್ಚೆ ನಡೆದಿದೆ ಅನ್ನೋದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment