ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿ ದರ್ಶನ್
ಫೋಟೋ ವೈರಲ್ ಬೆನ್ನಲ್ಲೇ 3 FIR, ಎರಡರಲ್ಲಿ ದರ್ಶನ್ ಹೆಸರು
ಅಂದು ರಚ್ಚು ಭೇಟಿ ಮಾಡಿದ್ರು.. ಆಮೇಲೆ ಏನಾಯ್ತು ಗೊತ್ತಾ?
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ವಿಚಾರಣಾಧೀನ ಕೈದಿಯಾಗಿರುವ ದರ್ಶನ್ಗೆ ಸಂಕಟಗಳ ಮೇಲೆ ಸಂಕಟ ಎದುರಾಗುತ್ತಿದೆ. ಇದರ ಜೊತೆಗೆ ನಟನಿಗೆ ಸ್ತ್ರೀ ಕಂಟಕ ಬೆನ್ನು ಬಿದ್ದಿದೆಯಾ ಎಂಬ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ನಟಿ ಪವಿತ್ರ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ ಪ್ರಕರಣ ಸಂಬಂಧ ರೇಣುಕಾಸ್ವಾಮಿ ಕೊಲೆಯಾಗಿದೆ. ಕೊಲೆ ಪ್ರಕರಣದಲ್ಲಿ 3 ತಿಂಗಳಿಂದಲೂ ಸೆರೆಮನೆಯಲ್ಲಿರುವ ನಟನನ್ನು ಅನೇಕ ತಾರೆಯರು ಭೇಟಿ ಮಾಡಲು ಬಂದಿದ್ದಾರೆ.
ಇತ್ತೀಚೆಗೆ ನಟಿ ರಚಿತಾ ರಾಮ್ ಕೂಡ ದರ್ಶನ್ ಕಾಣಲು ಜೈಲಿಗೆ ಬಂದಿದ್ದಾರೆ. ಆದರೆ ಡಿಂಪಲ್ ಕ್ವೀನ್ ಭೇಟಿ ಬಳಿಕ ದರ್ಶನ್ಗೆ ಜೈಲಿನಲ್ಲಿ ರಾಜಾತಿಥ್ಯ ನೀಡುವ ಫೋಟೋ ವೈರಲ್ ಆಗಿದೆ. ಈ ಸಂಬಂಧ ಒಟ್ಟು ಮೂರು ಎಫ್ಐಆರ್ ದಾಖಲಾಗಿದ್ದು, ಎರಡರಲ್ಲಿ ದರ್ಶನ್ ಹೆಸರು ಇದೆ.
ಪವಿತ್ರಾ ಗೌಡರಿಂದಾಗಿ ದರ್ಶನ್ ಜೈಲು ಸೇರಿದ್ದಾರೆ ಎಂಬ ಸಂಗತಿಯನ್ನು ಮಾತನಾಡುತ್ತಿರುವುದರ ಜೊತೆಗೆ ಅಭಿಮಾನಿಗಳು ನೊಂದಿರುವುದು ಒಂದೆಡೆಯಾದರೆ. ಇದೀಗ ರಚಿತಾ ರಾಮ್ ಭೇಟಿ ಬಳಿಕ ದರ್ಶನ್ಗೆ ಮತ್ತೊಂದು ಕಂಟಕ ಶುರುವಾಗಿದೆ ಎಂಬ ಸಂಗತಿ ಬಗ್ಗೆ ಮಾತನಾಡುತ್ತಿದ್ದಾರೆ.
ರಚಿತಾ ರಾಮ್ 22ನೇ ತಾರೀಖು ಮಧ್ಯಾಹ್ನದ ವೇಳೆ ನಟ ದರ್ಶನ್ ಭೇಟಿ ಮಾಡಲು ಬಂದಿದ್ದರು. ಸ್ಪೇಷಲ್ ಎಂಟ್ರಿ ರೂಂನಲ್ಲಿ ದರ್ಶನ್ರನ್ನು ಭೇಟಿ ಮಾಡಿದ್ದರು. ಈ ವೇಳೆ ಟೀ ಕುಡಿಯಲು ಹೋಗಿದ್ದಾಗ ಪೋಟೋ ಕ್ಲಿಕ್ ಆಗಿದೆ ಎನ್ನಲಾಗುತ್ತಿದೆ.
ವಿಸಿ ಕೋರ್ಟ್ ಹಿಂಭಾಗ ಇರುವ ಜೈಲ್ ಪಾರ್ಕ್ ಇರುವ ಜಾಗದಲ್ಲಿ ದರ್ಶನ್ ಫೋಟೋ ಕ್ಲಿಕ್ ಆಗಿದೆ ಎನ್ನಲಾಗುತ್ತಿದೆ. ಅಲ್ಲಿ ಕೈದಿಗಳಿಗೆ ಟೀ ಕುಡಿಯಲು, ವಾಕ್ ಮಾಡೋಕೆ, ಆಟಕ್ಕೆ ಹೀಗೆ ವಾಲಿಬಾಲ್ ಆಡಲು ಅವಕಾಶವನ್ನು ನೀಡಲಾಗುತ್ತದೆ. ಈ ಪಾರ್ಕ್ ನಲ್ಲಿ ಈಡೀ ದಿನ ಕೈದಿಗಳಿಗೆ ಓಪನ್ ಪ್ಲೇಸ್ ಇರುತ್ತದೆ. ಆದರೀಗ ದರ್ಶನ್ ಪ್ರಕರಣ ಬೆಳಕಿಗೆ ಬಂದಂತೆ ಪಾರ್ಕ್ ಕ್ಲೋಸ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ