Advertisment

ಜೈಲೊಳಗೆ ಬಿಂದಾಸ್ ದರ್ಶನ.. ದುಡ್ಡಿದ್ರೆ ಏನ್ ಬೇಕಾದ್ರೂ ಸಿಗುತ್ತಾ? ಕಷ್ಟಪಟ್ಟು ಅರೆಸ್ಟ್ ಮಾಡಿದ ಪೊಲೀಸ್‌ ಕಥೆ ಏನು?

author-image
Bheemappa
Updated On
ಎಲೆ ಅಡಿಕೆನೇ ಕೊಡಲ್ಲ, ಸಿಗರೇಟ್‌ ಕೊಟ್ಟಿದ್ಯಾರು? ಜೈಲಲ್ಲಿ ದರ್ಶನ್‌ ರಾಜಾತಿಥ್ಯದ ಮೇಲೆ 10 ಅನುಮಾನ!
Advertisment
  • ವಿಲ್ಸನ್ ಗಾರ್ಡನ್​ ನಾಗನ ಜೊತೆ ಕುಳಿತ ದರ್ಶನ್, ಧಮ್ ಎಳೆದರಾ?
  • ಜೈಲಿನಲ್ಲಿ ಕಟ್ಟುಪಾಡು ನಿರಾಕರಣೆ ಮಾಡಿದ್ರೆ ಅದಕ್ಕೆ ಮರ್ಯಾದೆ ಇರಲ್ಲ
  • ಕೋರ್ಟ್​ ಮನೆಯೂಟ ನಿರಾಕರಣೆ ಮಾಡಿದ್ರು ಈ ರೀತಿ ಮಾಡ್ತಿದ್ದಾರಲ್ಲ?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆಯಾ ಎನ್ನುವ ಅನುಮಾನ ಮೂಡಿದೆ. ರೌಡಿಶೀಟರ್ ಜೊತೆ ಕುಳಿತು ದರ್ಶನ್ ಮಗ್​ನಲ್ಲಿ ಟೀ ಕುಡಿಯುತ್ತ, ಸಿಗರೇಟ್ ಸೇದುತ್ತಿರೋ ಫೋಟೋವೊಂದು ವೈರಲ್ ಆಗಿರೋದೇ ಇದಕ್ಕೆ ಕಾರಣ. ಈ ಕುರಿತು ನಿವೃತ್ತ ಎಸ್​.ಪಿ ನಾಗರಾಜ್ ಅವರು ಪ್ರತಿಕ್ರಿಯೆ ನೀಡಿದ್ದು ನಮ್ಮ ದೇಶದಲ್ಲಿ ಎಲ್ಲವೂ ಸಾಧ್ಯ ಎನ್ನುವುದಕ್ಕೆ ದರ್ಶನ್​ಗೆ ರಾಜಾತಿಥ್ಯ ನೀಡಿದ್ದು ಒಂದು ಉದಾಹರಣೆ ಎಂದು ಹೇಳಿದ್ದಾರೆ.

Advertisment

ಇದನ್ನೂ ಓದಿ:ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್.. ದರ್ಶನ್ ಫೋಟೋದಿಂದ ಜಾರ್ಜ್‌ಶೀಟ್‌ಗೂ ಮುನ್ನ ಕೋರ್ಟ್‌ನಲ್ಲಿ ಸಂಕಷ್ಟ?

publive-image

ನ್ಯೂಸ್​ಫಸ್ಟ್​ ಜೊತೆ ಮಾತನಾಡಿರುವ ನಿವೃತ್ತ ಎಸ್​.ಪಿ ನಾಗರಾಜ್ ಅವರು, ನಮ್ಮ ದೇಶದಲ್ಲಿ ಎಲ್ಲವೂ ಸಾಧ್ಯ ಎನ್ನುವುದಕ್ಕೆ ದರ್ಶನ್​ಗೆ ರಾಜಾತಿಥ್ಯ ನೀಡಿದ್ದು ಒಂದು ಉದಾಹರಣೆ. ರೂಲ್ ಬುಕ್​ನಲ್ಲಿ ಏನಿದೆ ಅದನ್ನು ಮಾಡಬೇಕು. ಜೈಲಿಗೆ ಅಂತ ಮಾನ್ಯುಯಲ್ ಇದೆ. ಜೈಲಿನ ಒಳಗಡೆ ಏನು ಮಾಡಬೇಕು, ಏನು ಮಾಡಬಾರದು ಎನ್ನುವುದು ಇದೆ. ಕೈದಿಗಳಿಗೆ ಈ ತರದ ಕಟ್ಟುಪಾಡುಗಳು ಇರಬೇಕಂತ ನಿಯಮಗಳಿವೆ. ಜೈಲಿನಲ್ಲಿ ಇದನ್ನೆಲ್ಲ ನಿರಾಕರಿಸಿದರೆ ಅದಕ್ಕೆ ಮರ್ಯಾದೆನೇ ಇರಲ್ಲ. ಮೊದಲು ಜೈಲಿಗೆ ಹೋಗಿ ಬಂದಿದ್ದರೆ ಅವರ ಮುಖವನ್ನು ನೋಡುತ್ತಿರಲಿಲ್ಲ. ಆದರೆ ಈಗ ವಿಐಪಿ ರೀತಿ ಹೂವಿನ ಹಾರಗಳನ್ನು ಹಾಕ್ಕೊಂಡು ಕರೆದುಕೊಂಡು ಹೋಗುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ಯಾಸೆಂಜರ್​ ಬಸ್ ಭಯಾನಕ ಆಕ್ಸಿಡೆಂಟ್​.. 30 ಪ್ರಯಾಣಿಕರ ಪೈಕಿ 29 ಜನ ಸ್ಥಳದಲ್ಲೇ ಸಾವು 

Advertisment

ಜೈಲಿನಲ್ಲಿ ಸಾಮಾನ್ಯ ಕೈದಿಗಳಿಗೆ ಒಂದು ನ್ಯಾಯ, ದುಡ್ಡು ಇದ್ದೋರಿಗೆ ಒಂದು ನ್ಯಾಯ ಅಂತ ಬೇರೆ ಬೇರೆ ತೋರಿಸಬಾರದು. ಎಲ್ಲರಿಗಿಂತ ಕಾನೂನೇ ದೊಡ್ಡದು. ತಪ್ಪು ಮಾಡಿದ್ದಾನೆ. ಜೈಲಿಗೆ ಹೋಗಿದ್ದಾನೆ. ಮನೆಯೂಟವನ್ನೇ ಕೋರ್ಟ್​ ನಿರಾಕರಣೆ ಮಾಡಿದೆ. ಇದನ್ನು ಜೈಲು ಅಧಿಕಾರಿಗಳು ಸಿಬ್ಬಂದಿ ಗಂಭೀರವಾಗಿ ಪರಿಗಣಿಸಬೇಕಿತ್ತು. ಆದರೆ ನಿರ್ಲಕ್ಷ್ಯ ತೋರಿದ್ದಾರೆ. ಅವರ ಮೇಲೆ ಕ್ರಮ ಆಗಬೇಕು ಎಂದು ಹೇಳಿದ್ದಾರೆ.

ಕೊಲೆ ಕೇಸ್​ನಲ್ಲಿ ಜೈಲಿಗೆ ಹೋದ ದರ್ಶನ್ ಮತ್ತೊಬ್ಬ ರೌಡಿಶೀಟರ್​, 10ಕ್ಕಿಂತ ಹೆಚ್ಚು ಮರ್ಡರ್​ ಕೇಸ್​ನಲ್ಲಿ ಎ1 ಆರೋಪಿ ಆಗಿರುವ ವಿಲ್ಸನ್​ ಗಾರ್ಡನ್​ ನಾಗ ಜೊತೆ ದರ್ಶನ್ ಕುಳಿತು ಮಾತಾಡುತ್ತಿದ್ದಾರೆ ಎಂದರೆ ಜೈಲು ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿದ ನಿವೃತ್ತ ಎಸ್​.ಪಿ ನಾಗರಾಜ್ ಅವರು, ಇದು ಬೇಲಿನೇ ಎದ್ದು ಹೊಲ ಮೇಯ್ದಂಗೆ ಆಗುತ್ತಿದೆ. ಇದನ್ನೆಲ್ಲ ನೋಡಿದರೆ ಜೈಲಿನಲ್ಲಿ ದರ್ಶನ್​ರನ್ನ ಫುಲ್ ಫ್ರೀಯಾಗಿ ಬಿಡಲಾಗಿದೆ. ಪೊಲೀಸರು ಕಷ್ಟಪಟ್ಟು ಜೈಲಿಗೆ ಹಾಕಿದರೆ, ಇದನ್ನೆಲ್ಲ ಮಾಡಿದ್ದು ನೋಡಿದರೆ ಅವರಿಗೆ ಅನುಮಾನ ಬರಲ್ವಾ? ಕೆಲ ಪೊಲೀಸರು ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಜೈಲು ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳದೇ ಏನು ನ್ಯಾಯಾಲಯದ ನಿರ್ದೇಶನ ಇದೆ, ಕಾನೂನಿನ ಚೌಕಟ್ಟು ಇದೆ ಅದನ್ನು ತಪ್ಪದೇ ತುಂಬಾ ಕಠಿಣವಾಗಿ ಅದನ್ನು ಮಾಡಬೇಕು. ಏಕೆಂದರೆ ಇದೊಂದು ಎಲ್ಲರಿಗೂ ನಿದರ್ಶನ ಆಗಬೇಕು. ರೌಡಿಶೀಟರ್ ಜೊತೆ ದರ್ಶನ್ ಇದ್ದಾರೆ ಎಂದರೆ ಎಲ್ಲವನ್ನು ಅವರಿಗೆ ಅನುಕೂಲ ಮಾಡಲಾಗಿದೆ ಎಂದು ಹೇಳಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment