Advertisment

ದರ್ಶನ್​​ಗಾಗಿ ಶಕ್ತಿ ದೇವತೆಯ ಮೊರೆ ಹೋದ ವಿಜಯಲಕ್ಷ್ಮಿ.. ಬಂಧನಕ್ಕೂ ಮೊದಲು ನಟ ಅದೇ ದೇಗುಲಕ್ಕೆ ಹೋಗಿದ್ದರು..!

author-image
Bheemappa
Updated On
ದರ್ಶನ್ ಬಾಯಲ್ಲಿ ಈಗ 10 ಪಶ್ಚಾತಾಪದ ಮಾತು.. ಪತ್ನಿ ವಿಜಯಲಕ್ಷ್ಮಿ ನೆನೆದು ಭಾವುಕ; ಹೇಳಿದ್ದೇನು?
Advertisment
  • ಸತತ 4 ಗಂಟೆ ಶಾಸಕರೊಬ್ಬರ ಆಪ್ತ ಕಾರ್ತಿಕ್​ ಪುರೋಹಿತ್​ ವಿಚಾರಣೆ
  • ಪತಿಯನ್ನು ಬಿಡಿಸಿಕೊಂಡು ಬರಲು ಪತ್ನಿ ವಿಜಯಲಕ್ಷ್ಮಿ ಹರಸಾಹಸ
  • ಸತತ 4 ಗಂಟೆ ವಿಚಾರಣೆ ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿದ್ರಾ?

ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಶಾಸಕರೊಬ್ಬರ ಕಾರು ಚಾಲಕ ವಿಚಾರಣೆಗೆ ಹಾಜರಾಗಿದ್ದಾನೆ. ಮತ್ತೊಂದೆಡೆ ಜೈಲು ಸೇರಿರುವ ಪತಿಗಾಗಿ ಪತ್ನಿ ವಿಜಯಲಕ್ಷ್ಮಿ ಅವರು ದೇವರ ಮೊರೆ ಹೋಗಿದ್ದಾರೆ. ಬೆಂಗಳೂರಿನ ಬಂಡೆ ಮಾಂಕಾಳಮ್ಮ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

Advertisment

ಇದನ್ನೂ ಓದಿ: ಮೊಬೈಲ್​ ಚಾರ್ಜಿಂಗ್​​ ಹಾಕುವಾಗ ಹುಷಾರ್​​.. ಪಿಜಿಯಲ್ಲಿ ವಿದ್ಯಾರ್ಥಿ ಸಾವು

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅವರು ಜೈಲುಪಾಲಾಗಿದ್ದಾರೆ. ಈ ಪ್ರಕರಣದಲ್ಲಿ ಸದ್ಯಕ್ಕಂತೂ ದರ್ಶನ್‌ ಪಾರಾಗೋದು ಅಷ್ಟು ಸುಲಭ ಅಲ್ಲ ಅಂತಿದ್ದಾರೆ ಕಾನೂನು ಪರಿಣಿತರು. ಜೈಲಿನಲ್ಲಿರುವ ಪತಿಯನ್ನು ಹೊರಗೆ ಕರೆದುಕೊಂಡು ಬರಲು ಪತ್ನಿ ವಿಜಯಲಕ್ಷ್ಮಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಕಾನೂನು ಹೋರಾಟದ ಬಗ್ಗೆ ಚಿಂತಿಸಿರುವ ಮಧ್ಯೆ ವಿಜಯಲಕ್ಷ್ಮಿ ದರ್ಶನ್ ಅವರು ದಾಸನಿಗಾಗಿ ಶಕ್ತಿ ದೇವತೆಯ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

publive-image

ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ವಿಜಯಲಕ್ಷ್ಮಿ ಪ್ರಾರ್ಥನೆ

ಬೆಂಗಳೂರಿನ ಪ್ರಸಿದ್ಧ ಬಂಡೆ ಮಹಾಕಾಳಿ ಸನ್ನಿಧಿಗೆ ವಿಜಯಲಕ್ಷ್ಮಿ ದರ್ಶನ್ ಭೇಟಿ ಕೊಟ್ಟು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗೋ 2 ದಿನಕ್ಕೂ ಮುಂಚೆ ದರ್ಶನ್ ಅವರು ಕೂಡ ಇದೇ ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ಶಕ್ತಿ ದೇವತೆಯ ಮುಂದೆ ದೃಷ್ಟಿ ತೆಗೆಸಿ ತಡೆ ಒಡೆಸಿದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ. ಇದೀಗ ಪತಿ ದರ್ಶನ್ ಆರೋಪ ಮುಕ್ತರಾಗಲಿ ಎಂದು ಪತ್ನಿ ವಿಜಯಲಕ್ಷ್ಮಿ ಅದೇ ಶಕ್ತಿ ದೇವತೆ ಮೊರೆ ಹೋಗಿದ್ದು, ಪ್ರಾರ್ಥನೆ ಸಲ್ಲಿಸಿದ್ದಾರೆ.

Advertisment

ರೇಣುಕಾಸ್ವಾಮಿ ಕೊಲೆ ಪ್ರಕರಣದ ಮತ್ತಷ್ಟು ಬಿರುಸುಗೊಂಡ ತನಿಖೆ

ನಟ ದರ್ಶನ್​ ಅಂಡ್​ ಗ್ಯಾಂಗ್​ ವಿರುದ್ಧ ಮತ್ತಷ್ಟು ಸಾಕ್ಷ್ಯಗಳ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದು, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಬೆಂಗಳೂರಿನ ಶಾಸಕರೊಬ್ಬರ ಆಪ್ತನಾಗಿರೋ ಕಾರ್ತಿಕ್ ಪುರೋಹಿತ್​ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಕೊಲೆ ಆರೋಪಿ ಪ್ರದೋಶ್ ಜೊತೆ ಕಾರ್ತಿಕ್​ ಪುರೋಹಿತ್​ ಇದ್ದಿದ್ದಕ್ಕೆ ನೋಟಿಸ್ ನೀಡಿದ್ರು.. ಈ ಹಿನ್ನೆಲೆ ಬಸವೇಶ್ವರ ನಗರ ಠಾಣೆಗೆ ಹಾಜರಾಗಿದ್ದ ಕಾರ್ತಿಕ್ ಪುರೋಹಿತ್​ಗೆ ಸತತ 4 ಗಂಟೆಗಳ ಕಾಲ ವಿಚಾರಣೆ ನಡೆಸಿ ಕಳಿಸಿದ್ದಾರೆ. ಸೋಮವಾರ ಮತ್ತೆ ವಿಚಾರಣೆಗೆ ಬರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

publive-image

ನೋಟಿಸ್​ ಕೊಟ್ಟಿದ್ದರು, ಬಂದಿದ್ದೇ, ವಿಚಾರಣೆ ಮಾಡಿದರು. ಈಗ ಮತ್ತೆ ಸೋಮವಾರ ಕರೆದಿದ್ದಾರೆ ಬರ್ತಿನಿ. ಪ್ರದೋಶ್ ಇದ್ದಿದ್ದಕ್ಕೆ ಕರೆದಿದ್ದರು. ಒಳಗಡೆ ಇನ್ನು ವಿಚಾರಣೆ ನಡೆಯುತ್ತಿದೆ. ಅದೆಲ್ಲ ಮುಗಿದ ಮೇಲೆ ನಿಮಗೆ ಎಲ್ಲ ತಿಳಿಸುತ್ತೇನೆ. ಪ್ರದೋಶ್ ಗಿರಿನಗರದಲ್ಲಿ ನನ್ನ ಫ್ರೆಂಡ್​, 4 ವರ್ಷದಿಂದ ಪರಿಚಯ.

ಕಾರ್ತಿಕ್ ಪುರೋಹಿತ್, ಆರೋಪಿ ಪ್ರದೂಷ್​ ಆಪ್ತ

ಇದನ್ನೂ ಓದಿ:ಕೊಹ್ಲಿ, ರೋಹಿತ್ ಸ್ಥಾನ ತುಂಬುವ ಯಂಗ್ ಪ್ಲೇಯರ್ಸ್ ಇವರೇ​.. ಈ ಯುವ ಬ್ಯಾಟ್ಸ್​​ಮನ್ಸ್​ಗೆ ಇದೆ ಆ ಖದರ್

Advertisment

ಮಾಡಬಾರದ ಕೆಲ್ಸ ಮಾಡಿ, ಪರಪ್ಪನ ಅಗ್ರಹಾರ ಸೇರಿರುವ ಪತಿಯನ್ನು ಬಿಡಿಸಿಕೊಂಡು ಬರಲು ಪತ್ನಿ ವಿಜಯಲಕ್ಷ್ಮಿ ಹರಸಾಹಸ ಮಾಡ್ತಿದ್ರೆ. ಇತ್ತ ಪೊಲೀಸರು ರೇಣುಕಾಸ್ವಾಮಿ ಕೊಲೆಗೆ ಸೂಕ್ತ ನ್ಯಾಯ ಕೊಡಿಸಲು ತನಿಖೆ ತೀವ್ರಗೊಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment