ತನ್ನ ಮೊಬೈಲ್​ನಲ್ಲಿ ದರ್ಶನ್​ ಹೆಸರನ್ನು ಹಿಂಗಾ ಸೇವ್ ಮಾಡಿಕೊಳ್ಳೋದು ಅಪ್ಪ! VIDEO​

author-image
Veena Gangani
Updated On
ತನ್ನ ಮೊಬೈಲ್​ನಲ್ಲಿ ದರ್ಶನ್​ ಹೆಸರನ್ನು ಹಿಂಗಾ ಸೇವ್ ಮಾಡಿಕೊಳ್ಳೋದು ಅಪ್ಪ! VIDEO​
Advertisment
  • ಚಿಕ್ಕವನಿದ್ದಾಗ ಎಷ್ಟು ತುಂಟನಾಗಿದ್ದ ಎಂದು ಹೇಳಿದ ದರ್ಶನ್ ಫಾದರ್
  • ವೇದಿಕೆಗೆ ಬರುತ್ತಿದ್ದಂತೆ ಮಗ ದರ್ಶನ್​ ಬಗ್ಗೆ ಗುಣಗಾನ ಮಾಡಿದ ತಂದೆ
  • ದರ್ಶನ್ ಚಿಕ್ಕವನಾಗಿದ್ದಾಗ 5 ಸ್ಕೂಲ್​ಗಳನ್ನು ಚೇಂಚ್​ ಮಾಡಿಸಿದ್ದರಂತೆ!

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಸಂಗೀತ ಶೋ ಎಂದರೆ ಅದು ಸರಿಗಮಪ. ಕಳೆದ ಸೀಸನ್​ ಫಿನಾಲೆ ಟ್ರೋಫಿಯನ್ನು ದರ್ಶನ್ ನಾರಾಯಣ್ ಮುಡಿಗೇರಿಸಿಕೊಂಡಿದ್ದರು. ಸದ್ಯ ಇದೇ ದರ್ಶನ್​ ನಾರಾಯಣ್​ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ.

publive-image

ಈ ವಾರ ಭರ್ಜರಿ ಬ್ಯಾಚುಲರ್ಸ್ 2 ಶೋನಲ್ಲಿ ಫ್ಯಾಮಿಲಿ ರೌಂಡ್‌ ನಡೆದಿತ್ತು. ಹೀಗಾಗಿ ಬ್ಯಾಚುಲರ್ಸ್‌ ಪೋಷಕರು ಒಬ್ಬೊಬ್ಬರಾಗಿ ವೇದಿಕೆಗೆ ಬಂದಿದ್ದರು. ಅದರಲ್ಲೂ ಗಾಯಕ ದರ್ಶನ್​ ನಾರಾಯಣ್ ಪೋಷಕರು ಬಂದಿದ್ದು ವೇದಿಕೆಗೆ ಮತ್ತಷ್ಟು ಮೆರಗು ತಂದಿತ್ತು. ಅಷ್ಟೇ ಅಲ್ಲದೇ ದರ್ಶನ್ ಚಿಕ್ಕವನಾಗಿದ್ದಾಗ ಏನೆಲ್ಲಾ ತರ್ಲೆ, ತುಂಟಾಟ ಮಾಡುತ್ತಿದ್ದ ಎಂಬುವುದರ ಬಗ್ಗೆ ವೇದಿಕೆ ಮೇಲೆ ಪೋಷಕರು ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ:ಬಿಗ್​ಬಾಸ್​ ವೀಕ್ಷಕರಿಗೆ ಶಾಕಿಂಗ್ ಸುದ್ದಿ;​ ಆರಂಭಕ್ಕೂ ಮುನ್ನವೇ ಶೋಗೆ ಭಾರೀ ಸಂಕಷ್ಟ!

ಹೌದು, ವೇದಿಕೆ ಆಗಮಿಸಿದ ದರ್ಶನ್​ ನಾರಾಯಣ್ ಪೋಷಕರು, ಈಗ ಅವನು ತುಂಬಾ ಒಳ್ಳೆಯ ಹುಡುಗ. ಆ ಹುಡುಗ ಆಗೋ ಮುಂಚೆ ಎಷ್ಟೇಲ್ಲಾ ತೊಂದರೆ ಕೊಟ್ಟಿದ್ದಾನೆ ಅಂತ ನಮಗೆ ಮಾತ್ರ ಗೊತ್ತಿದೆ. ಈವನು ಚಿಕ್ಕವನಾಗಿದ್ದಾಗ 5 ಶಾಲೆಯನ್ನು ಚೇಂಚ್​ ಮಾಡಿದ್ದೇನೆ ಅಷ್ಟು ತುಂಟನಾಗಿದ್ದ. ಅದಕ್ಕೆ ನಾನು ಫೋನ್​ನಲ್ಲಿ ದಡ್ಡ ನನ್ನ ಮಗ ಅಂತಾನೇ ಸೇವ್​ ಮಾಡಿಕೊಂಡಿದ್ದೀನಿ ಅಂತ ಫೋನ್ ಓಪನ್ ಮಾಡಿ ತೋರಿಸಿದ್ದಾರೆ. ಇದನ್ನೇ ನೋಡಿದ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ. ದಡ್ಡ ಅಂದು.. ಅಂದು ಅದಕ್ಕಾದ್ರೂ ಇನ್ನೂ ಬುದ್ಧಿವಂತ ಆಗಲಿ ಎಂದು ಹಾಗೇ ಕರೆಯುತ್ತೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment