/newsfirstlive-kannada/media/post_attachments/wp-content/uploads/2024/09/BLY-DARSHAN-4.jpg)
ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ವಿಚಾರವಾಗಿ ಜೈಲಲ್ಲಿ ಕಾಲ ಕಳೆಯುತ್ತಿರುವ ದರ್ಶನ್ ಜಾಮೀನಿಗಾಗಿ ಪೇಚಾಡುತ್ತಿದ್ದಾರೆ. ನಿನ್ನೆ ಕೋರ್ಟಿನಲ್ಲಿ ಬೇಲ್ ರಿಜೆಕ್ಟ್ ಆಗಿದ್ದು, ಈ ಸುದ್ದಿ ಕೇಳಿ ದರ್ಶನ್ ಮಂಕಾಗಿದ್ದಾರೆ. ಇದೀಗ ಜೈಲಾಧಿಕಾರಿಗಳ ಮುಂದೆ ಮತ್ತೊಂದು ಡಿಮ್ಯಾಂಡ್ ಇಟ್ಟಿದ್ದಾರಂತೆ.
ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ದರ್ಶನ್ ನಂಗೆ ಬಳ್ಳಾರಿಯಲ್ಲಿ ಚಿಕಿತ್ಸೆ ಬೇಡ ಬದಲಾಗಿ ಬೆಂಗಳೂರಿನ ಮನಿಪಾಲ್ ಆಸ್ಪತ್ರೆಯಲ್ಲಿ ಬೇಕು ಎಂದು ಪಟ್ಟುಹಿಡಿದಿದ್ದಾರಂತೆ. ಸ್ಕ್ಯಾನಿಂಗ್, ಸರ್ಜರಿ ಎಲ್ಲವೂ ಮನಿಪಾಲ್ ಆಸ್ಪತ್ರೆಯಲ್ಲಿ ಎಂದು ಹೇಳಿದ್ದಾರಂತೆ. ಸದ್ಯ ದರ್ಶನ್ ನಡೆಗೆ ಜೈಲಾಧಿಕಾರಿಗಳಿಗೆ ಟೆನ್ಶನ್ ಶುರುವಾಗಿದೆ.
ಮನವಿ ಮಾಡುವ ಸಾಧ್ಯತೆ
ದರ್ಶನ್ ಬೆನ್ನು ನೋವಿನ ಸಮಸ್ಯೆಯಿಂದ L1 ಹಾಗೂ L5 ಭಾಗದಲ್ಲಿ ವಿಪರೀತ ಊತ ಕಾಣಿಸಿಕೊಂಡಿದ್ದು, ಹೈಕೋರ್ಟ್ ಮೂಲಕವೇ ಬೆಂಗಳೂರು ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ ಮನವಿ ಮಾಡುವ ಸಾಧ್ಯತೆಯಿದೆ. ಪತ್ನಿ ಜೊತೆಗೆ ಚರ್ಚಿಸಿ ಅನಾರೋಗ್ಯದ ಕಾರಣ ನೀಡುವ ಸಾಧ್ಯತೆಯಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಆಟಗಾರನೋ? ಅತಿಥಿಯೋ? ಕನ್ಫ್ಯೂಶನ್ನಲ್ಲಿ ಧನ್ರಾಜ್ ಕಣ್ಣೀರು
ದರ್ಶನ್ಗೆ 25 ದಿನಗಳಿಂದ ಬೆನ್ನುನೋವು ಉಲ್ಬಣ ಆಗಿದೆ. ಸಿಟಿ ಹಾಗೂ ಎಂಆರ್‌ಐ ಸ್ಕ್ಯಾನಿಂಗ್ ಜೊತೆಗೆ ಸರ್ಜರಿಯೂ ಅಗತ್ಯ ಎಂದು ವಿಮ್ಸ್ ವೈದ್ಯರು ಹೇಳಿದ್ದಾರೆ. ಆದರೆ ದರ್ಶನ್ ಬಳ್ಳಾರಿಯಲ್ಲಿ ಚಿಕಿತ್ಸೆ ಬೇಡ ಎಂದು ಪಟ್ಟುಹಿಡಿದಿದ್ದಾರೆ.
ಇದನ್ನೂ ಓದಿ: ದರ್ಶನ್ಗೆ ಯಾಕೆ ಸಿಕ್ಕಿಲ್ಲ ಬೇಲ್? ಜಾಮೀನು ನಿರಾಕರಿಸಲು ಇದೇನಾ ಕಾರಣ!
ಬೆನ್ನುನೋವು, ಕೈ ಮೂಳೆ ಕುರಿತು ಈ ಹಿಂದೆ ಮನಿಪಾಲ್ ವೈದ್ಯರಿಂದ ದರ್ಶನ್ ಚಿಕಿತ್ಸೆ ಪಡೆದಿದ್ದರು. ಈಗಲೂ ನಾನು ಅಲ್ಲಿಗೆ ಹೋದ ಮೇಲೆ ಟ್ರೀಟ್ಮೆಂಟ್ ಎಂದು ದರ್ಶನ್ ಹೇಳಿದ್ದಾರೆ. ನಿನ್ನೆ ಅಳಿಯ ಹೇಮಂತ್ ಮುಂದೆಯೂ ಹೆಲ್ತ್ ಕಂಡಿಷನ್ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಪ್ರತಿದಿನವೂ ಬಳ್ಳಾರಿ ಜೈಲಲ್ಲಿ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದು, ಬೇಲ್ ಅರ್ಜಿ ವಜಾ ಬಳಿಕ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಬಗ್ಗೆ ಜಪಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ