/newsfirstlive-kannada/media/post_attachments/wp-content/uploads/2024/06/dboss14.jpg)
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲು ಸೇರಿದೆ. 8 ದಿನಗಳಿಂದ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಮೌನಕ್ಕೆ ಶರಣಾಗಿದ್ದಾರೆ. ದರ್ಶನ್ ಜೈಲು ಪಾಲಾದ ಬಗ್ಗೆ ಚರ್ಚೆಗಳು ನಡೀತಿವೆ. ಇದರ ನಡುವೆ ಬಿಗ್ಬಾಸ್ ಸ್ಪರ್ಧಿ ವಿನಯ್ ಗೌಡ ದರ್ಶನ್ ಅರೆಸ್ಟ್ ಆದ ದಿನ ಮೈಸೂರಿನಲ್ಲಿ ಆಗಿದ್ದೇನು ಅನ್ನೋದನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ:ನೀರಿನ ಟ್ಯಾಂಕ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ; ಅಸಲಿಗೆ ಆಗಿದ್ದೇನು?
ನಟ ದರ್ಶನ್ ಅಭಿನಯದ ಡೆವಿಲ್ ಚಿತ್ರ ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಜೂನ್ 11ರಂದು ಮೈಸೂರಿನಲ್ಲೇ ದರ್ಶನ್ರನ್ನು ಪೊಲೀಸರು ಅರೆಸ್ಟ್ ಮಾಡಿದ್ರು. ದರ್ಶನ್ ಅರೆಸ್ಟ್ ಆಗೋ ದಿನ ಸ್ಥಳದಲ್ಲಿ ನಾನೂ ಇದ್ದೆ ಅಂತ ಬಿಗ್ಬಾಸ್ ಸ್ಪರ್ಧಿ ವಿನಯ್ ಗೌಡ ತಿಳಿಸಿದ್ದಾರೆ. ನಾನು ಡೆವಿಲ್ ಸಿನಿಮಾದಲ್ಲಿ ಖಳನಾಯಕನಾಗಿ ಌಕ್ಟ್ ಮಾಡ್ತಿದ್ದೇನೆ. ದರ್ಶನ್ ಅರೆಸ್ಟ್ ಆಗೋ ದಿನ ನನ್ನ ಶೂಟ್ ನಡೀತಿತ್ತು. ನನ್ನ ಸೀನ್ ಬಳಿಕ ದರ್ಶನ್ ದೃಶ್ಯದ ಚಿತ್ರೀಕರಣ ಆಗ್ಬೇಕಿತ್ತು. ಆದ್ರೆ ಅಷ್ಟರಲ್ಲಿ ಅವರನ್ನ ಅರೆಸ್ಟ್ ಮಾಡಲಾಯ್ತು. ಬಳಿಕ ಡೆವಿಲ್ ಶೂಟಿಂಗ್ ಪ್ಯಾಕಪ್ ಮಾಡಲಾಯ್ತು ಎಂದು ವಿನಯ್ ಗೌಡ ನೋವಿನ ಸಂಗತಿ ಹಂಚಿಕೊಂಡಿದ್ದಾರೆ.
ಕೊಲೆ ಬಗ್ಗೆ ಹಿರಿಯ ನಟ ಸುಂದರ್ ರಾಜ್ ಬೇಸರ
ಕೊಲೆ ಕೇಸ್ವೊಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಸೇರಿದ ಬೆನ್ನಲ್ಲೇ ಇಡೀ ಕನ್ನಡ ಸಿನಿಮಾ ಇಂಡಸ್ಟ್ರಿ ಮಾತಾಡುತ್ತಿದೆ. ಈ ಕೃತ್ಯದ ಬಗ್ಗೆ ಈಗ ಸ್ಯಾಂಡಲ್ವುಡ್ನ ಹಿರಿಯ ನಟ ಸುಂದರ್ ರಾಜ್ ಬೇಸರ ಹೊರಹಾಕಿದ್ದಾರೆ. ಇದುವರೆಗೂ ಈ ರೀತಿ ಘಟನೆಗಳು ನಮ್ಮ ಇಂಡಸ್ಟ್ರಿಯಲ್ಲಿ ನಡೆದಿಲ್ಲ. ಈ ಘಟನೆ ನಡೆದಿದ್ದು ದುರಾದೃಷ್ಟ. ಜೀವ ಕೊಡಲು ಆಗಲ್ಲ ಎಂದ ಮೇಲೆ ಜೀವ ತೆಗೆಯೋ ಹಕ್ಕು ಯಾರಿಗೂ ಇಲ್ಲ ಎಂದು ನಟ ದರ್ಶನ್ ಮತ್ತು ಗ್ಯಾಂಗ್ನ ಕೃತ್ಯದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ಗುರೂ ನಾವಿನ್ನೂ ಚಿಕ್ಕವರು.. ದರ್ಶನ್ ಫ್ಯಾನ್ಸ್ಗೆ ಕೈಮುಗಿದ ಸೋನು
ಅತ್ತ ಕೊಲೆ ಕೇಸ್ನಲ್ಲಿ ದರ್ಶನ್ ಜೈಲಿನೊಳಗಿದ್ರೆ. ಇತ್ತ ದರ್ಶನ್ ಅಭಿಮಾನಿಗಳ ವರ್ತನೆ ಅತಿರೇಖಕ್ಕೆ ಹೋಗ್ತಿದೆ. ದರ್ಶನ್ ಅಭಿಮಾನಿಗಳು ತಮ್ಮ ಬಾಸ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದರ ನಡುವೆ ಸೋನು ಶ್ರೀನಿವಾಸ್ ಗೌಡ, ದರ್ಶನ್ ಅಭಿಮಾನಿಗಳ ಕಮೆಂಟ್ಸ್‌ಗೆ ರೋಸಿ ಹೋಗಿದ್ದಾರೆ. ದರ್ಶನ್ ಪರವಾಗಿ ಮಾತನಾಡಿಲ್ಲ ಎಂದು ಕೆಟ್ಟ, ಕೆಟ್ಟದಾಗಿ ಕಮೆಂಟ್ಸ್ ಮಾಡುತ್ತಿದ್ದಾರಂತೆ. ಈ ಕುರಿತು ಸೋನುಗೌಡ ಸೋಷಿಯಲ್ ಮೀಡಿಯಾದಲ್ಲಿ ಬೇಸರ ಹೊರಹಾಕಿದ್ದಾರೆ.
ಒಟ್ಟಾರೆಯಾಗಿ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಕಳೆದ 8 ದಿನಗಳಿಂದ ಪರಪ್ಪನ ಅಗ್ರಹಾರದಲ್ಲಿ ಪಶ್ಚಾತ್ತಾಪ ಪಡುತ್ತಿದ್ದಾರೆ. ಜೈಲಲ್ಲಿ ಯಾರೊಂದಿಗೂ ಬೆರೆಯದೇ ಮೌನಶಕ್ಕೆ ಶರಣಗಾಗಿದ್ದಾರೆ. ಆದ್ರೆ ದರ್ಶನ್ ಅಭಿಮಾನಿಗಳು ಮಾತ್ರ ತಮ್ಮ ಅಭಿಮಾನದ ಪರಾಕಾಷ್ಟೆ ಮೆರೆಯುತ್ತಿದ್ದಾರೆ. ಇದಕ್ಕೆ ಅಭಿಮಾನವೆನ್ನಬೇಕೋ? ಅಂಧಾಭಿಮಾನ ಎನ್ನಬೇಕೋ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ