/newsfirstlive-kannada/media/post_attachments/wp-content/uploads/2024/07/Pavitra-Gowda-8.jpg)
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಳಾಗಿದ್ದ ದರ್ಶನ್ ಸೇರಿ ಐದು ಜನರಿಗೆ ಹೈಕೋರ್ಟ್ ಜಾಮೀನು ನೀಡಿದ್ದು. ದರ್ಶನ್, ಪವಿತ್ರಾಗೌಡ ಹಾಗೂ ಉಳಿದ ಐದು ಜನರು ನಿಟ್ಟುಸಿರು ಬಿಟ್ಟಿದ್ದಾರೆ. ದರ್ಶನ್ ಬಿಡುಗಡೆಗಾಗಿ ಪ್ರಾರ್ಥಿಸಿದ ಎಲ್ಲ ಅಭಿಮಾನಿಗಳ ಪ್ರಾರ್ಥನೆ ಇಂದು ಫಲಿಸಿದೆ.
ಆದ್ರೆ ದರ್ಶನ್ ಬಿಟ್ಟು ಈಗಾಗಲೇ 6 ಜನ ಜೈಲಿನಲ್ಲಿದ್ದಾರೆ. ದರ್ಶನ್ ಮಧ್ಯಂತರ ಜಾಮೀನಿನ ಮೇಲೆ ಆಚೆ ಬಂದಿದ್ದಾರೆ. ಸದ್ಯ ಈ ಪವಿತ್ರಾಗೌಡ ಹಾಗೂ ಇನ್ನುಳಿದ ಐದು ಆರೋಪಿಗಳಿಗೆ ಜಾಮೀನು ಸಿಕ್ಕರೂ ಕೂಡ ಇಂದೇ ಬಿಡುಗಡೆಯಾಗುವ ಭಾಗ್ಯ ಬಹುತೇಕ ಡೌಟ್ ಎಂದು ಹೇಳಲಾಗುತ್ತಿದೆ. ಅದಕ್ಕೆ ಕಾರಣ ಕೋರ್ಟ್​ ರಜೆ
ಇದನ್ನೂ ಓದಿ:ದರ್ಶನ್, ಪವಿತ್ರಾ ಗೌಡ ಸೇರಿ ಹೈಕೋರ್ಟ್​​ನಿಂದ ಯಾರ್ ಯಾರಿಗೆ ಜಾಮೀನು ಸಿಕ್ಕಿದೆ?
ನಾಳೆ ಶನಿವಾರ, ಎರಡನೇ ಶನಿವಾರ ಆಗಿದ್ದರಿಂದ ಕೋರ್ಟ್​ಗೆ ರಜೆ, ನಾಡಿದ್ದು ರವಿವಾರವೂ ಕೂಡ ಕೋರ್ಟ್​ಗೆ ರಜೆ ಇರುತ್ತದೆ. ಹೀಗಾಗಿ ಪವಿತ್ರಾಗೌಡ ಹಾಗೂ ಇನ್ನುಳಿದ ಆರೋಪಿಗಳು ಸೋಮವಾರ ಬಿಡುಗಡೆಯಾಗುವ ಸಾಧ್ಯತೆಯೇ ಹೆಚ್ಚು. ಈಗಾಗಲೇ ಜಾಮೀನು ಸಿಕ್ಕರು ಕೂಡ ಉಳಿದಕೊಂಡಿರುವ ಹಲವು ನ್ಯಾಯಾಲಯದ ಪ್ರಕ್ರಿಯೆಗಳು ಸಂಪೂರ್ಣವಾಗಲು ಸೋಮವಾರದವರೆಗೂ ಕಾಯಬೇಕು ಹೀಗಾಗಿ ಪವಿತ್ರಾಗೌಡ ಹಾಗೂ ಉಳಿದ ಐದು ಆರೋಪಿಗಳಿಗೆ ಇಂದೇ ಬಿಡುಗಡೆಯ ಭಾಗ್ಯ ಸಿಗುವುದು ಬಹುತೇಕ ಅನುಮಾನ.
ಇಂದೇ ಜಾಮೀನು ಸಿಕ್ಕರು ಕೂಡ ಹೈಕೋರ್ಟ್​ ಜಾಮೀನು ಆದೇಶ ಪ್ರತಿಯನ್ನು ಕೆಳ ನ್ಯಾಯಾಲಯಕ್ಕೆ ನೀಡಬೇಕಾಗುತ್ತದೆ. ಅದಾದ ಬಳಿಕ ಕೆಳ ನ್ಯಾಯಾಲಯ ಆದೇಶದ ಪ್ರತಿ ನೀಡುತ್ತಾರೆ. ಬಳಿಕ ಆ ಆದೇಶ ಪ್ರತಿಯನ್ನು ಸಂಬಂಧಪಟ್ಟ ಜೈಲು ಅಧಿಕಾರಿಗಳಿಗೆ ನೀಡಿ ಆರೋಪಿಗಳನ್ನು ಬಿಡುಗಡೆ ಮಾಡಿಸಬೇಕಾಗುತ್ತದೆ. ಸದ್ಯ ಇವೆಲ್ಲವೂ ಒಂದೇ ದಿನದಲ್ಲಿ ಆಗದ ಕಾರಣ. ಸೋಮವಾರದವರೆಗೂ ಆರೋಪಿಗಳು ಕಾಯಲೇಬೇಕಾದ ಸ್ಥಿತಿ ಇರುತ್ತದೆ. ಅದು ಅಲ್ಲದೇ ನ್ಯಾಯಾಲಯ ಹಲವು ಷರತ್ತುಗಳನ್ನು ವಿಧಿಸಿರುವ ಕಾರಣ ಅವುಗಳೆಲ್ಲವನ್ನೂ ಪೂರ್ಣ ಮಾಡಲು ಸಮಯ ಬೇಕು. ಪಾಸ್​ಪೋರ್ಟ್​ ವಶಕ್ಕೆ ಪಡೆಯುವುದರ ಜೊತೆಗೆ ಹಲವು ಪ್ರಕ್ರಿಯೆಗಳು ಇನ್ನೂ ಬಾಕಿ ಇವೆ. ಅದು ಮಾತ್ರವಲ್ಲ. ಆರೋಪಿಗಳು ಹಲವು ಜೈಲುಗಳಲ್ಲಿ ಹರಿದು ಹಂಚಿ ಹೋಗಿದ್ದಾರೆ. ಪವಿತ್ರಾಗೌಡ ಪರಪ್ಪನ ಅಗ್ರಹಾರದಲ್ಲಿದ್ರೆ. ಕೆಲವರು ತುಮಕೂರು, ಕೆಲವರು ಬೆಳಗಾವಿ ಹೀಗೆ ಹಲವು ಜೈಲುಗಳಲ್ಲಿ ಬಂಧಿಯಾಗಿದ್ದಾರೆ. ಹೀಗಾಗಿ ಆದೇಶ ಪ್ರತಿ ಆ ಜೈಲಿಗೆ ತಲುಪಿ ಮುಗಿಯಬೇಕಾದ ಪ್ರಕ್ರಿಯೆಗಳು ಮುಗಿಸಿ ಬಳಿಕ ಅವರನ್ನು ಬಿಡುಗಡೆ ಮಾಡಲಾಗುತ್ತದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us