/newsfirstlive-kannada/media/post_attachments/wp-content/uploads/2025/05/Darshan-pavithra-gowda-9.jpg)
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದ ಎಲ್ಲಾ 17 ಆರೋಪಿಗಳಿಗೂ ಕಾಮಾಕ್ಷಿಪಾಳ್ಯ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ. 57ನೇ CCH ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸುವ ವೇಳೆ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಆರೋಪಿಗಳ ವಿರುದ್ಧ ಹೆಚ್ಚುವರಿ ಸಾಕ್ಷ್ಯಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ಕೋರ್ಟ್‌ನಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್‌ನ ಚಾರ್ಜಸ್ ಫ್ರೇಮ್‌ಗೆ ಇಂದು ಸಮಯ ನಿಗಧಿ ಆಗಿತ್ತು. ದೋಷಾರೋಪ ದಾಖಲಿಸುವ ಹಿನ್ನೆಲೆಯಲ್ಲಿ ಎ1 ಪವಿತ್ರಾಗೌಡ, ಎ2 ದರ್ಶನ್ ಸೇರಿ ಎಲ್ಲಾ 17 ಆರೋಪಿಗಳಿಗೂ ಕೋರ್ಟ್‌ಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು.
ರೇಣುಕಾಸ್ವಾಮಿ ಪ್ರಕರಣದ A3 ಪವನ್ ಹೊರತುಪಡಿಸಿ ಎಲ್ಲಾ ಆರೋಪಿಗಳು ಇಂದು ಕೋರ್ಟ್‌ಗೆ ಹಾಜರಾಗಿದ್ದರು. ದರ್ಶನ್ ಅವರು ಕಪ್ಪು ಟೀ ಶರ್ಟ್‌ನಲ್ಲಿ ಕೋರ್ಟ್‌ಗೆ ಆಗಮಿಸಿದ್ದರು. ಬಿಳಿ ಸೀರೆಯಲ್ಲಿ ನಟಿ ಪವಿತ್ರಾಗೌಡ ಅವರು ಕೋರ್ಟ್‌ಗೆ ಬಂದಿದ್ದರು. ಆಪ್ತ ಗೆಳೆಯ, ನಟ ಧನ್ವೀರ್ ಅವರು ದರ್ಶನ್ ಜೊತೆಗೆ ಆಗಮಿಸಿದ್ದರು.
ಕೋರ್ಟ್ ಹಾಲ್ ಒಳಗೆ ಎ1 ಪವಿತ್ರಾಗೌಡ ನಿಂತಿದ್ದರು. ಮೊದಲಿಗೆ ದರ್ಶನ್ ಅವರು ಕೋರ್ಟ್ ಒಳಗೆ ಬಾರದೆ ಹೊರಗೆ ನಿಂತಿದ್ದರು. ಪವಿತ್ರಗೌಡ ಅವರಿಂದ ದೂರ ನಿಂತಿದ್ದ ದರ್ಶನ್ ಅವರನ್ನು ನೋಡಿದ ನ್ಯಾಯಾಧೀಶರು 1ನೇ ಆರೋಪಿತೆ ಪಕ್ಕ ನಿಲ್ಲಿ ಎಂದು ಸೂಚನೆ ನೀಡಿದರು. ಆಮೇಲೆ ನ್ಯಾಯಾಧೀಶರು ಆರೋಪಿಗಳ ಹಾಜರಾತಿ ತೆಗೆದುಕೊಂಡರು. ಸರತಿ ಸಾಲಿನಲ್ಲಿ ದರ್ಶನ್ ಹಾಗೂ ಆರೋಪಿಗಳು ನಿಂತಿದ್ದರು.
ಇದನ್ನೂ ಓದಿ: ಕೈ ಹಿಡಿದು ಫೋನ್ ನಂಬರ್ ಕೇಳಿದ ಪವಿತ್ರಾ ಗೌಡ.. ದುಂಬಾಲು ಬಿದ್ದ ಗೆಳತಿಗೆ ದರ್ಶನ್ ಮಾಡಿದ್ದೇನು?
ಕೋರ್ಟ್‌ನಲ್ಲಿ ಆಗಿದ್ದೇನು?
ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ದರ್ಶನ್, ಪವಿತ್ರಾ ಗೌಡ ಹಾಗೂ ಇತರೆ ಆರೋಪಿಗಳು ಕೋರ್ಟ್‌ಗೆ ಹಾಜರಾಗಿದ್ದರು. ಕೋರ್ಟ್ ಸಿಬ್ಬಂದಿ ಕೇಸ್ ನಂಬರ್ ಜೋರಾಗಿ ಹೇಳಿದ್ದು, ಆರೋಪಿಗಳ ಹಾಜರಾತಿಯನ್ನು ಖಚಿತಪಡಿಸಿಕೊಂಡರು. A1 ಇಂದ A17 ಆರೋಪಿಗಳ ಹೆಸರು ಕೂಗಲಾಯಿತು.
ನಿಮ್ಮ ಮೇಲೆ ಐಪಿಸಿ ಸೆಕ್ಷನ್ 302 - ಕೊಲೆ, 364 - ಕಿಡ್ನ್ಯಾಪ್ ಹಾಗೂ 201 - ಸಾಕ್ಷಿನಾಶ ಕೇಸ್ ಇದೆ. ನೀವು ಇದನ್ನ ಒಪ್ಪಿಕೊಳ್ಳುವಿರಾ ಎಂದು ನ್ಯಾಯಾಧೀಶರು ಕೇಳಿದರು. ಇಲ್ಲ ಸ್ವಾಮಿ.. ಇದೆಲ್ಲಾ ಸುಳ್ಳು ವಿಚಾರಣೆ ನಡೆಯಲಿ ಎಂದು ನಿವೇದನೆ ಮಾಡಿದ ಬಳಿಕ ಜುಲೈ 10ಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಲಾಗಿದೆ.
ವಿಚಾರಣೆ ಬಳಿಕ ಕೋರ್ಟ್ ಹಾಲ್‌ನಿಂದ ಹೊರಟ ದರ್ಶನ್ ಅವರು ಪವಿತ್ರಾಗೌಡ ಅವರ ಕೈ ಹಿಡಿದುಕೊಂಡು ಹೊರಗೆ ಬಂದಿದ್ದಾರೆ.
ಕೋರ್ಟ್ ಹಾಲ್ ಒಳಗೆ ದರ್ಶನ್ ಗಪ್ ಚುಪ್ ಆಗಿದ್ದರು. ಆದರೆ ಲಿಫ್ಟ್‌ನಲ್ಲಿ ನಟ ದರ್ಶನ್‌ಗೆ ಪವಿತ್ರಾಗೌಡ ಅವರು ದುಂಬಾಲು ಬಿದ್ದು ಮಾತನಾಡಿಸಿದರು. ಕೈ ಹಿಡಿದು ಫೋನ್ ನಂಬರ್ ನೀಡುವಂತೆ ಒತ್ತಾಯ ಮಾಡಿದರು. ಕೊನೆಗೆ ದರ್ಶನ್ ಅವರು ತನ್ನ ಫೋನ್ ನಂಬರ್ ಅನ್ನ ಡಯಲ್ ಮಾಡಿಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ