newsfirstkannada.com

ಪವಿತ್ರಗೌಡಗೆ ಕಳುಹಿಸಿದ್ನಂತೆ ‘ಆ’ ಫೋಟೋ.. ದರ್ಶನ್​ಗೆ ಗೊತ್ತಾದ ಮೇಲೆ ನಡೆಯಿತು ಅನಾಹುತ..!

Share :

Published June 12, 2024 at 9:40am

Update June 12, 2024 at 11:20am

    ಪದೇ ಪದೆ ಪವಿತ್ರಾ ಗೌಡಗೆ ಮೆಸೇಜ್ ಮಾಡ್ತಿದ್ನಂತೆ ರೇಣುಕಾಸ್ವಾಮಿ

    ಅಕೌಂಟ್ ಬ್ಲಾಕ್ ಮಾಡಿದ್ರೂ ಬೇರೆ ಅಕೌಂಟ್​ನಿಂದ ಮೆಸೇಜ್ ಮಾಡ್ತಿದ್ನಂತೆ

    ಫೆಬ್ರವರಿ 27ರಿಂದ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡ್ತಿದ್ದ ಆರೋಪ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಗೌಡ ಸೇರಿ ಒಟ್ಟು 13 ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸ್ ಅಧಿಕಾರಿಗಳು ಒಂದೊಂದೇ ವಿಚಾರವನ್ನು ಬಯಲಿಗೆ ಎಳೆಯುತ್ತಿದ್ದಾರೆ.

ಕೆಲವು ಮಾಹಿತಿಗಳ ಪ್ರಕಾರ.. ಕೊಲೆಯಾದ ರೇಣುಕಾಸ್ವಾಮಿ ಪವಿತ್ರಗೌಡಗೆ ಪದೇ ಪದೆ ಮೆಸೇಜ್ ಮಾಡ್ತಿದ್ದನಂತೆ. ಅಕೌಂಟ್ ಬ್ಲಾಕ್ ಮಾಡಿದ್ರೂ ಬೇರೆ ಅಕೌಂಟ್​ ಕ್ರಿಯೇಟ್ ಮಾಡಿ ಮೆಸೇಜ್ ಮಾಡುತ್ತಿದ್ದ. ಅಂತೆಯೇ ಫೆಬ್ರವರಿ 27ರಿಂದ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದನಂತೆ. ರೇಣುಕಾಸ್ವಾಮಿಯ ಅಶ್ಲೀಲ ಮೆಸೇಜ್​ಗಳಿಂದ ಪವಿತ್ರಾ ಬೇಸತ್ತಿದ್ದಳು. ಇತ್ತೀಚೆಗೆ ಮರ್ಮಾಂಗದ ಫೋಟೋ ಕಳುಹಿಸಿ ನನ್ನ ಜೊತೆ ಬಾ ಎಂದು ಮೆಸೇಜ್ ಮಾಡಿದ್ದನಂತೆ ಎನ್ನಲಾಗಿದೆ.

ಇದನ್ನೂ ಓದಿ:ಅವನ ಪಾಪಕರ್ಮ ಅವನ ಸುಡುತ್ತದೆ -ಜಗ್ಗೇಶ್ ಇನ್ನೂ ಏನೇನು ಹೇಳಿದ್ರು..?

ತನ್ನ ಅಕೌಂಟ್​ಗೆ ಈ ರೀತಿ ಮೆಸೇಜ್ ಬರ್ತಿದೆ ಎಂದು ಮನೆ ಕೆಲಸ ಮಾಡುತ್ತಿದ್ದ ಪವನ್​ಗೆ ಪವಿತ್ರಾ ಗೌಡ ಹೇಳಿದ್ದಳಂತೆ. ಅಲ್ಲದೆ, ಈ ವಿಚಾರವನ್ನು ದರ್ಶನ್​ಗೆ ಹೇಳಬೇಡ ಅಂತಲೂ ಸೂಚನೆ ನೀಡಿದ್ದಳಂತೆ. ದರ್ಶನ್​ಗೆ ಹೇಳಿದ್ರೆ ಏನಾದ್ರೂ ಮಾಡಿಬಿಡಬಹುದು ಅನ್ನೋ ಆತಂಕ ಇತ್ತಂತೆ. ಪವಿತ್ರಾ ಗೌಡ ಹೇಳಬೇಡ ಎಂದಿದ್ದರೂ ದರ್ಶನ್ ಗಮನಕ್ಕೆ ಪವನ್ ತಂದಿದ್ದನಂತೆ. ನಾವು ನೋಡಿಕೊಳ್ತೀವಿ ಏನೇನೂ ಗಾಬರಿ ಆಗೋದು ಬೇಡ ಎಂದು ಪವನ್ ಹೇಳಿದ್ದನಂತೆ ಎನ್ನಲಾಗಿದೆ.

ಇದನ್ನೂ ಓದಿ:ಚಾಲೆಂಜಿಂಗ್ ಸ್ಟಾರ್ ದರ್ಶನ್​​ ತನಿಖೆ ಹೆಂಗಿರುತ್ತೆ..? ಆ ಆರು ದಿನಗಳಲ್ಲಿ ರೋಚಕ ಟ್ವಿಸ್ಟ್​..!

ಮೊದಲಿಗೆ ದರ್ಶನ್ ಹೆಸರು ಪ್ರಸ್ತಾಪವಾಗಿತ್ತು, ಆದರೀಗ ಪೊಲೀಸರೆದುರು ಆರೋಪಿಗಳ ಹೇಳಿಕೆಯಲ್ಲಿ ಸ್ವಲ್ಪ ಟ್ವಿಸ್ಟ್​ಗಳೂ ಇವೆ. ಹೀಗಾಗಿ ನಿಜಕ್ಕೂ ಇದೇ ರೀತಿಯಲ್ಲಿ ಘಟನೆಗಳು ನಡೆದಿವೆಯಾ ಅನ್ನೋ ಬಗ್ಗೆ ಪೊಲೀಸರಿಗೂ ಅನುಮಾನ ಶುರುವಾಗಿದೆಯಂತೆ. ಘಟನೆಗಳು ಹೀಗೇ ನಡೆದಿವೆಯಾ ಅಥವಾ ದರ್ಶನ್ ಮತ್ತು ಪವಿತ್ರಾ ಗೌಡರನ್ನ ಬಚಾವ್ ಮಾಡೋಕೆ ಆರೋಪಿಗಳು ಈ ರೀತಿಯಲ್ಲಿ ಹೇಳ್ತಿದ್ದಾರಾ ಅನ್ನೋ ಅನುಮಾನವಿದ್ದು, ಪೊಲೀಸರು ಈ ನಿಟ್ಟಿನಲ್ಲೂ ತನಿಖೆಯನ್ನ ಮುಂದುವರಿಸುತ್ತಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪವಿತ್ರಗೌಡಗೆ ಕಳುಹಿಸಿದ್ನಂತೆ ‘ಆ’ ಫೋಟೋ.. ದರ್ಶನ್​ಗೆ ಗೊತ್ತಾದ ಮೇಲೆ ನಡೆಯಿತು ಅನಾಹುತ..!

https://newsfirstlive.com/wp-content/uploads/2024/06/darshan1.jpg

Load More