newsfirstkannada.com

ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್.. ದರ್ಶನ್ ಫೋಟೋದಿಂದ ಜಾರ್ಜ್‌ಶೀಟ್‌ಗೂ ಮುನ್ನ ಕೋರ್ಟ್‌ನಲ್ಲಿ ಸಂಕಷ್ಟ?

Share :

Published August 25, 2024 at 4:50pm

Update August 25, 2024 at 4:51pm

    ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್​ಗೆ ರಾಜಾತಿಥ್ಯ ನೀಡಲಾಗುತ್ತಿದೆಯಾ?

    ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನನ ಜೊತೆ ದರ್ಶನ್ ಬಿಂದಾಸ್‌ ಮಾತು!

    ವೈರಲ್ ಆದ ಫೋಟೋದಿಂದ ನಟ ದರ್ಶನ್ ಎದುರಾಗುತ್ತೆ ದೊಡ್ಡ ಸಂಕಷ್ಟ!

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಸೆರೆವಾಸದಲ್ಲಿ ಅವರಿಗೆ ರಾಜಾತಿಥ್ಯ ನೀಡಲಾಗುತ್ತಿದೆಯಾ ಎಂಬ ಅನುಮಾನ ಇದೀಗ ಮೂಡಿದೆ. ಈ ಒಂದು ಫೋಟೋದಿಂದ ದರ್ಶನ್ ಅವರಿಗೆ ಕೋರ್ಟ್​ನಿಂದ ಹೊಸ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಮನೆಯೂಟ ಸಿಗುವುದು ಇನ್ನಷ್ಟು ಜಟಿಲವಾಗಬಹುದು.

ಇದನ್ನೂ ಓದಿ: ಜೈಲಿನಲ್ಲಿ ದರ್ಶನ್ ಆರಾಮಾಗಿ ಇದ್ದಾರಾ? ಫೋಟೋ ಫುಲ್ ವೈರಲ್‌; ಏನಿದರ ಅಸಲಿಯತ್ತು?

ಪರಪ್ಪನ ಅಗ್ರಹಾರ ಜೈಲಿನಿಂದ ಲೀಕ್ ಆಗಿರುವ ಫೋಟೋದಲ್ಲಿ ದರ್ಶನ್ ಅವರು ಚೇರ್ ಮೇಲೆ ಕುಳಿತು ಒಂದು ಕೈಯಲ್ಲಿ ಸಿಗರೇಟ್ ಮತ್ತೊಂದು ಕೈಯಲ್ಲಿ ಕಪ್ ಹಿಡಿದು ಟೀ ಕುಡಿಯುತ್ತಿದ್ದಾರೆ. ದರ್ಶನ್ ಪಕ್ಕದಲ್ಲಿ ರೌಡಿಶೀಟರ್‌ಗಳು ಕುಳಿತು ನಗುತ್ತ ಮಾತನಾಡುತ್ತಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗಿದ್ದು ಫೋಟೋದಲ್ಲಿ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ, ನಾಗರಾಜ್ ಎಂಬುವವರು ಚೇರ್ ಮೇಲೆ ಕುಳಿತು ಯಾವುದೋ ವಿಷಯದ ಚರ್ಚೆಯಲ್ಲಿದ್ದು ನಗುತ್ತಿದ್ದಾರೆ.

ಇದನ್ನೂ ಓದಿ: ಪ್ಯಾಸೆಂಜರ್​ ಬಸ್ ಭಯಾನಕ ಆಕ್ಸಿಡೆಂಟ್​.. 30 ಪ್ರಯಾಣಿಕರ ಪೈಕಿ 29 ಜನ ಸ್ಥಳದಲ್ಲೇ ಸಾವು

ಪರಪ್ಪನ ಅಗ್ರಹಾರ ಜೈಲಿನಲ್ಲಿನಲ್ಲಿರುವ ದರ್ಶನ್ ಅವರು ಜೈಲೂಟಕ್ಕೆ ಒಗ್ಗಿಕೊಳ್ಳುತ್ತಿಲ್ಲ. ಅಜೀರ್ಣ, ಅತಿಸಾರವಾಗುತ್ತಿದೆ. ಹೀಗಾಗಿ ಮನೆಯೂಟ ಕೊಡಲು ಅನುಮತಿ ಕೊಡಬೇಕು ಎಂದು ಮ್ಯಾಜಿಸ್ಟ್ರೇಟ್​ ಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಊಟದ ಜೊತೆಗೆ ಬಟ್ಟೆ, ಹಾಸಿಗೆ, ಪುಸ್ತಕ ನೀಡುವಂತೆ ಕೋರ್ಟ್​​ಗೆ ಮನವಿ ಮಾಡಿದ್ದರು. ಇದನ್ನು ವಿಚಾರಣೆ ಮಾಡಿದ್ದ ಕೋರ್ಟ್​ ಅರ್ಜಿಯನ್ನು ವಜಾಗೊಳಿಸಿತ್ತು. ಹೀಗಾಗಿ ಮತ್ತೊಮ್ಮೆ ದರ್ಶನ್ ಅವರ ಪರ ವಕೀಲರು ಕೋರ್ಟ್​ಗೆ ಅರ್ಜಿ ಸಲ್ಲಿಸಿದರೆ ಮನೆ ಊಟಕ್ಕೆ ಅನುಮತಿ ಸಿಗುವುದು ಡೌಟ್ ಆಗಿದೆ.

ಇದನ್ನೂ ಓದಿ: ಒಂದು​ ಕೈಯಲ್ಲಿ ಸಿಗರೇಟ್, ಮತ್ತೊಂದು ಕಡೆ ಟೀ ಕಪ್‌; ಜೈಲಲ್ಲಿ ದರ್ಶನ್‌ಗೆ ರಾಜಾತಿಥ್ಯ? ಶಾಕಿಂಗ್ ಮಾಹಿತಿ ಬಹಿರಂಗ 

ಇದೊಂದು ಫೋಟೋದಿಂದ ಜೈಲು ಅಧಿಕಾರಿಗಳ ನಡೆ ಬಗ್ಗೆ ಅನುಮಾನ ಮೂಡಿದೆ. ಏಕೆಂದರೆ ಜೈಲಿನಲ್ಲಿರುವ ದರ್ಶನ್ ಅವರು ಚೇರ್​ ಮೇಲೆ ಕುಳಿತು ರೌಡಿಶೀಟರ್ ಜೊತೆ ಹರಟೆ ಹೊಡೆಯುತ್ತಿದ್ದಾರೆ. ಮಗ್​ನಲ್ಲಿ ಟೀ ಕುಡಿಯುತ್ತಿದ್ದು ಕೈಯಲ್ಲಿ ಸಿಗರೇಟ್ ಹಿಡಿದು ನಗುತ್ತಿದ್ದಾರೆ. ಕಣ್ಣಿಗೆ ಕಾಣಿಸಿದ್ದು ಇಷ್ಟೇ ಆದರೆ ಅವರಿಗೆ ಜೈಲಿನಲ್ಲಿ ಏನೆಲ್ಲ ಸೌಲಭ್ಯ ನೀಡಲಾಗುತ್ತಿದೆ ಎನ್ನುವ ಸಂಶಯ ಮೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್.. ದರ್ಶನ್ ಫೋಟೋದಿಂದ ಜಾರ್ಜ್‌ಶೀಟ್‌ಗೂ ಮುನ್ನ ಕೋರ್ಟ್‌ನಲ್ಲಿ ಸಂಕಷ್ಟ?

https://newsfirstlive.com/wp-content/uploads/2024/08/DARSHAN_RENUKA-1.jpg

Load More