/newsfirstlive-kannada/media/post_attachments/wp-content/uploads/2024/07/Pranita-Subhash.jpg)
ದರ್ಶನ್​ ನಟನೆಯ ‘ಪೊರ್ಕಿ’ ಸಿನಿಮಾದ ನಟಿ ಪ್ರಣಿತಾ ಸುಭಾಷ್​ ತನ್ನ ಅಭಿಮಾನಿಗಳಿಗೆ 2ನೇ ಸಿಹಿಸುದ್ದಿಯನ್ನು ಹೊತ್ತು ತಂದಿದ್ದಾರೆ. ತಾನು ಮತ್ತೊಮ್ಮೆ ತಾಯಿಯಾಗುತ್ತಿದ್ದೇನೆ ಎಂದು ಹೇಳುವ ಮೂಲಕ ಫ್ಯಾನ್ಸ್​ಗೆ ಸರ್​ಪ್ರೈಸ್​ ನೀಡಿದ್ದಾರೆ.
ಪ್ರಣಿತಾ ಸುಭಾಷ್ 2021ರಲ್ಲಿ ನಿತಿನ್​ ರಾಜ್​ ಅವರನ್ನು ವಿವಾಹವಾದರು. ಬಳಿಕ ಮೊದಲ ಮಗುವನ್ನು ಬರಮಾಡಿಕೊಂಡರು. ಇದೀಗ 2ನೇ ಬಾರಿಗೆ ಪ್ರಣಿತಾ ಸುಭಾಷ್ ಗರ್ಭಧರಿಸಿದ್ದಾರೆ. ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲೂ ಪೋಸ್ಟ್​ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: VIDEO: ಶಿರೂರಿನಲ್ಲಿ ನಾಪತ್ತೆಯಾದ ಲಾರಿ ಚಾಲಕ ಅರ್ಜುನ್​ ಕೊನೆಯ ವಿಡಿಯೋ ಇಲ್ಲಿದೆ
30 ವರ್ಷ ವಯಸ್ಸಿನ ಪ್ರಣಿತಾ ಸುಭಾಷ್ ಇನ್​ಸ್ಟಾದಲ್ಲಿ ‘ಇದು ಸೆಕೆಂಡ್​​ ರೌಂಡ್​​.. ಪ್ಯಾಂಟ್​​ ಫಿಟ್​ ಆಗುತ್ತಿಲ್ಲ’ ಎಂದು ಫೋಟೋಗೆ ಅಡಿಬರಹ ಬರೆದುಕೊಂಡಿದ್ದಾರೆ. ಸದ್ಯ ಇವರ ಪೋಸ್ಟ್​ ನೋಡಿ ಅನೇಕರು ಕಾಮೆಂಟ್​​ ಮಾಡಿದ್ದಾರೆ. ಶುಭಾಶಯಗಳನ್ನು ತಿಳಿಸಿದ್ದಾರೆ.
View this post on Instagram
ಇದನ್ನೂ ಓದಿ: ‘ದರ್ಶನ್ ತುಂಬಾ ಮುಗ್ಧ ಹುಡುಗ’.. ದಾಸನ ಸ್ಥಿತಿ ನೆನೆದು ಕಣ್ಣೀರು ಹಾಕಿದ ಹಿರಿಯ ನಟಿ ಗಿರಿಜಾ ಲೋಕೇಶ್​
ಪ್ರಣಿತಾ ಸುಭಾಷ್ ಸ್ಯಾಂಡಲ್​​​​ವುಡ್​ ಮಾತ್ರವಲ್ಲ, ಬಾಲಿವುಡ್​, ಮಾಲಿವುಡ್​​, ಕಾಲಿವುಡ್​​, ಟಾಲಿವುಡ್​ನಲ್ಲೂ ನಟಿಸಿದ್ದಾರೆ. ದರ್ಶನ್​ ಜೊತೆಗೆ ‘ಪೊರ್ಕಿ’ ಸಿನಿಮಾದ ಮೂಲಕ ಮೊದಲು ಬಣ್ಣ ಹಚ್ಚಿ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು ಆ ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಈ ವರ್ಷ ಮಲಯಾಳಂನಲ್ಲಿ ತಂಕಮಣಿ ಮತ್ತು ಕನ್ನಡದಲ್ಲಿ ರಾಮನ ಅವತಾರ ಸಿನಿಮಾದಲ್ಲಿ ಬಣ್ಣ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us