ಜೈಲಿನಿಂದ ದರ್ಶನ್‌ ಬಿಡುಗಡೆಗೆ ಸಂತಸ.. ರಚಿತಾ ರಾಮ್​, ತನಿಷ್ ಕುಪ್ಪಂಡ ಫುಲ್ ಖುಷ್​; ಹೇಳಿದ್ದೇನು?

author-image
Veena Gangani
Updated On
ಜೈಲಿನಿಂದ ದರ್ಶನ್‌ ಬಿಡುಗಡೆಗೆ ಸಂತಸ.. ರಚಿತಾ ರಾಮ್​, ತನಿಷ್ ಕುಪ್ಪಂಡ ಫುಲ್ ಖುಷ್​; ಹೇಳಿದ್ದೇನು?
Advertisment
  • ರೇಣುಕಾಸ್ವಾಮಿ ಹತ್ಯೆ ಆರೋಪದಲ್ಲಿ ಜೈಲು ಸೇರಿದ್ದ ನಟ ದರ್ಶನ್​
  • ನಟ ದರ್ಶನ್​ಗೆ ಹೈಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು
  • ಮಧ್ಯಂತರ ಜಾಮೀನು ಮಂಜೂರು ಆಗುತ್ತಿದ್ದಂತೆ ನಟಿಯರು ಹ್ಯಾಪಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ನಟ ದರ್ಶನ್​ಗೆ ರಿಲೀಫ್​ ಸಿಕ್ಕಿದೆ. ಇಂದು ನಟ ದರ್ಶನ್ ಅವರಿಗೆ ಹೈಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಇದನ್ನೂ ಓದಿ: ದರ್ಶನ್ ಇವತ್ತೇ ಬಳ್ಳಾರಿ ಜೈಲಿನಿಂದ ರಿಲೀಸ್? ಮಧ್ಯಂತರ ಜಾಮೀನಿಗೆ 13 ಷರತ್ತುಗಳು; ಏನವು?

publive-image

ಹೈಕೋರ್ಟ್‌ ನೀಡಿದ ಮಧ್ಯಂತರ ಜಾಮೀನಿನ ಆದೇಶವನ್ನು ದರ್ಶನ್ ಪರ ವಕೀಲರು ಈಗಾಗಲೇ ಅಧೀನ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ಹೈಕೋರ್ಟ್ ಆದೇಶದ ಪ್ರತಿ ಸಲ್ಲಿಕೆಯಾದ ಬಳಿಕ ದರ್ಶನ್ ಬೇಲ್‌ ಶ್ಯೂರಿಟಿ ಪ್ರಕ್ರಿಯೆ ನಡೆದಿದೆ.

publive-image

ಇನ್ನು, ನಟ ದರ್ಶನ್​ಗೆ ಮಧ್ಯಂತರ ಜಾಮೀನು ಸಿಕ್ಕಿದೆ ಅಂತ ವಿಚಾರ ತಿಳಿದು ಸ್ಯಾಂಡಲ್​ವುಡ್​ ನಟ ನಟಿಯರು ಫುಲ್ ಖುಷ್ ಆಗಿದ್ದಾರೆ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಗೂ ಸ್ಟೋರಿ ಶೇರ್​ ಮಾಡಿಕೊಳ್ಳುವ ಮೂಲಕ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

publive-image

ಸ್ಯಾಂಡಲ್​ವುಡ್​ ನಟಿ ರಚಿತಾ ರಾಮ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಕಾಲಾಯ ತಸ್ಮೈ ನಮಃ ಅಂತ ಹೇಳಿದ್ದಾರೆ.

ಇದನ್ನೂ ಓದಿ:‘ಓ ದೇವರೆ..!’ ಬಿಗ್​ಬಾಸ್​​ ಜೊತೆ ಮಾತ್ರವಲ್ಲ, ದೇವರ ಬಳಿಯೂ ಕ್ಯೂಟ್, ಕ್ಯೂಟ್ ಕೋರಿಕೆ..! Video

publive-image

ಮತ್ತೊಂದು ಕಡೆ ನಟಿ ರಕ್ಷಿತಾ ಪ್ರೇಮ್​ ಕೂಡ ತಮ್ಮ ಇನ್​​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಅವರ ಫೋಟೋ ಹಾಕಿ ಇಂದು ತುಂಬಾ ಖುಷಿಯಾದ ದಿನ ಅಂತ ಬರೆದುಕೊಂಡಿದ್ದಾರೆ.

publive-image

ಕನ್ನಡದ ಬಿಗ್​ಬಾಸ್​ ಸೀಸನ್​ 10ರ ಮಾಜಿ ಸ್ಪರ್ಧಿ ಈ ಬಗ್ಗೆ ನ್ಯೂಸ್​ಫಸ್ಟ್​ಗೆ ರಿಯಾಕ್ಟ್​ ಮಾಡಿದ್ದಾರೆ. ದರ್ಶನ್​​​​ ಸರ್​ಗೆ ಬೇಲ್​ ಸಿಕ್ಕಿದ್ದು ಕೇಳಿ ಖುಷಿ ಆಯ್ತು. ಅವರು ಆದಷ್ಟು ಬೇಗ ಈ ಕಷ್ಟಗಳಿಂದ ಪಾರಾಗಲಿ. ಬೆನ್ನು ನೋವಿಗೆ ಒಂದು ಸಲ್ಯೂಷನ್​ ಬೇಗ ಸಿಗಲಿ. ಫ್ಯಾನ್​ ಆಗಿ ಅವರು ಫ್ರೀ ಇರೋದನ್ನ ನೋಡಬೇಕು ಅಂತ ಹೇಳಿದ್ದಾರೆ.

publive-image

ದರ್ಶನ್​ ಬೇಲ್​ ಕಂಡೀಷನ್!

ಷರತ್ತು 01: ಪಾಸ್ ಪೋರ್ಟ್ ಸರಂಡರ್ ಮಾಡಬೇಕು
ಷರತ್ತು 02: ಕೋರ್ಟ್​ಗೆ 2 ಲಕ್ಷ ರೂಪಾಯಿ ಬಾಂಡ್ ನೀಡ್ಬೇಕು
ಷರತ್ತು 03: ಜಾಮೀನಿಗೆ ಇಬ್ಬರ ಶ್ಯೂರಿಟಿಯನ್ನ ನೀಡಬೇಕು
ಷರತ್ತು 04: ಸಾಕ್ಷಿ ಮೇಲೆ ಪ್ರತ್ಯಕ್ಷ/ಪರೋಕ್ಷ ಬೆದರಿಕೆ ಹಾಕಬಾರದು
ಷರತ್ತು 05: 1 ವಾರದಲ್ಲಿ ವೈದ್ಯಕೀಯ ಶಿಫಾರಸು ವರದಿ ಸಲ್ಲಿಸಬೇಕು
ಷರತ್ತು 06: ಪ್ರಕರಣದ ಸಾಕ್ಷಿಗಳ ನಾಶಕ್ಕೆ ಪ್ರಯತ್ನ ಪಡಬಾರದು
ಷರತ್ತು 07: ಪ್ರಕರಣದ ಸಾಕ್ಷಿಗಳನ್ನ ಸಂಪರ್ಕ ಮಾಡಬಾರದು
ಷರತ್ತು 08: ಜಾಮೀನನ್ನ ದುರುಪಯೋಗ ಮಾಡಿಕೊಳ್ಳಬಾರದು
ಷರತ್ತು 09: ದರ್ಶನ್​ ಬೆಂಗಳೂರು ಬಿಟ್ಟು ಹೊರಹೋಗುವಂತಿಲ್ಲ
ಷರತ್ತು 10: ಟ್ರಯಲ್ ನಡೆಸುವ ಕೋರ್ಟ್ ವ್ಯಾಪ್ತಿಯಲ್ಲಿಯೇ ಚಿಕಿತ್ಸೆ
ಷರತ್ತು 11: ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವಂತಿಲ್ಲ
ಷರತ್ತು 12: ಸಾಮಾಜಿಕ ಜಾಲತಾಣದಲ್ಲೂ ಪ್ರತಿಕ್ರಿಯೆ ನೀಡುವಂತಿಲ್ಲ
ಷರತ್ತು 13: ತಮ್ಮ ಆರೋಗ್ಯದ ಬಗ್ಗೆ ಎಲ್ಲೂ ಹೇಳಿಕೆ ನೀಡುವಂತಿಲ್ಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment