Advertisment

ದರ್ಶನ್ ಮೇಲೆ ಹದ್ದಿನ ಕಣ್ಣಿಟ್ಟ ಪೊಲೀಸರು.. ಎಚ್ಚರಿಕೆಯ ಹೆಜ್ಜೆ! ಆಸ್ಪತ್ರೆಗೆ ದಾಖಲು ಯಾವಾಗ?

author-image
admin
Updated On
ಟೆಸ್ಟ್​ ಮೇಲೆ ಟೆಸ್ಟ್.. ಇಂದು ವೈದ್ಯರ ಕೈ ಸೇರಲಿದೆ ದರ್ಶನ್ ಹೆಲ್ತ್ ರಿಪೋರ್ಟ್​
Advertisment
  • ನನ್ನಿಂದ ಏನಾದ್ರು ತಪ್ಪಾಗಿದ್ರೆ ಕ್ಷಮಿಸಿ ಬಿಡಿ ಎಂದ ದರ್ಶನ್
  • ಖುಷಿಯೋ.. ಖುಷಿ.. ಸಂತಸದಲ್ಲಿ ದರ್ಶನ್ ಸೆಲೆಬ್ರೇಟಿಸ್​
  • 131 ದಿನ ಬಳಿಕ ‘ಕಾಟೇರ’ನಿಗೆ ಇವತ್ತು ಸಿಕ್ತು ಕೊಂಚ ರಿಲೀಫ್​

ಬೆಂಗಳೂರು: ಈ ವರ್ಷದ ದೀಪಾವಳಿ ಹಬ್ಬವನ್ನ ನಟ ದರ್ಶನ್ ಮೆರೆಯೋಕೆ ಸಾಧ್ಯವೇ ಇಲ್ಲ. 61 ದಿನಗಳ ಕಾಲ ಬಳ್ಳಾರಿಯಲ್ಲಿ ಕಾಲ್ ಶೀಟ್ ಮುಗಿಸಿದ ದಾಸನಿಗೆ ದೀಪಾವಳಿ ಹಬ್ಬಕ್ಕೆ 45 ದಿನಗಳ ಬೋನಸ್​ ಸಿಕ್ಕಿದೆ. ಬಳ್ಳಾರಿ ಬಂಧಿಖಾನೆಯಲ್ಲಿ ಬೆನ್ನು ನೋವಿನಿಂದ ಬಳಲಿದ್ದ ದರ್ಶನ್,​ ರಿಲೀಸ್ ವಿಷ್ಯ ದರ್ಶನ್​ ಪಾಲಿನ ಸೆಲೆಬ್ರೇಟಿಸ್​ಗೆ ಡಬಲ್ ಧಮಾಕ ತಂದಿದೆ.

Advertisment

ನಟ ದರ್ಶನ್ ಜೈಲು ಪಂಜರದಲ್ಲಿ ಬಂಧಿಯಾಗಿ ಬರೋಬ್ಬರಿ 130ದಿನಗಳಾಗಿತ್ತು. ಆವತ್ತಿನಿಂದ ಒಂದಲ್ಲ ಒಂದು ತೊಂದರೆ ಅನುಭವಿಸ್ತಿದ್ದ ದಾಸ’ ಬಳಲಿ ಬೆಂಡಾಗಿದ್ರು. ನೆಟ್ಟಗೆ ನಿದ್ದೆ ಇಲ್ಲದೇ, ಹೊಟ್ಟೆಗೆ ಇಷ್ಟದ ಊಟ ಇಲ್ಲದೇ ಚಡಪಡಿಸುತ್ತಾ ಇದ್ದರು. ಬೆಂಗಳೂರಿನಿಂದ ಬಳ್ಳಾರಿಗೋದ್ರು ದರ್ಶನ್​ಗೆ ಬೆನ್ನು ನೋವಿನ ಕಾಟ ತಪ್ಪಿರಲಿಲ್ಲ. ಸದ್ಯ ದೀಪಾವಳಿ ಬಂದಿದ್ದೇ ಬಂದಿದ್ದು. ಕತ್ತಲೆ ಜಾರಿದ್ದ ದಾಸನ ಮುಖದಲ್ಲಿ ಮಂದಹಾಸ ಮೂಡಿದೆ.

publive-image

ಬಳ್ಳಾರಿ ಜೈಲು ಸಿಬ್ಬಂದಿಗೆ ಸಾರಿ ಕೇಳಿದ್ದ ನಟ ದರ್ಶನ್​!
ನನ್ನಿಂದ ಏನಾದ್ರು ತಪ್ಪಾಗಿದ್ರೆ ಕ್ಷಮಿಸಿ ಬಿಡಿ ಎಂದ ‘ದಾಸ’
ಬಳ್ಳಾರಿ ಪಂಜರದಲ್ಲಿ ಜೈಲು ಹಕ್ಕಿಯಾಗಿದ್ದ ನಟ ದರ್ಶನ್​ಗೆ ತಾತ್ಕಾಲಿಕ ಮುಕ್ತಿ ಸಿಕ್ಕಿದೆ. ಬೆನ್ನು ನೋವಿಗೆ ಚಿಕಿತ್ಸೆಗೆಂದು ಹೈಕೋರ್ಟ್​ ಮಧ್ಯಂತರ ಜಾಮೀನು ನೀಡಿದೆ. ಜಾಮೀನು ಪಡೆದು ಬಂಧಿಖಾನೆಯಿಂದ ಕುಟುಂತ್ತಾ, ಕುಟುಂತ್ತಾ ಹೊರ ಬಂದ ಚಿಂಗಾರಿ ಜೈಲು ಸಿಬ್ಬಂದಿಗೆ ಸಾರಿ ಕೇಳಿದ್ದಾರಂತೆ. ನನ್ನಿಂದ ಏನಾದ್ರು ತಪ್ಪಾಗಿದ್ರೆ ಕ್ಷಮಿಸಿ. ಪದೇ ಪದೇ ಅದು ಬೇಕು, ಇದು ಬೇಕು ಅಂತಾ ಕೇಳುತ್ತಿದ್ದೆ. ತುಂಬಾ ತೊಂದರೆ ಕೊಟ್ಟಿದ್ದೀನಿ ಎಂದ್ರಂತೆ. ಬಳ್ಳಾರಿ ಜೈಲಿನಿಂದ ಹೊರ ಬಂದ ದಾಸನಿಗೆ ಉತ್ತಮ ಚಿಕಿತ್ಸೆ ಪಡೆದುಕೊಳ್ಳಿ. ಆರೋಗ್ಯದ ಬಗ್ಗೆ ಗಮನ ಕೊಡಿ ಎಂದು ಜೈಲು ಸಿಬ್ಬಂದಿಗೆ ಕಿವಿ ಮಾತು ಹೇಳಿದ್ರಂತೆ.

publive-image

ಕನಕ ದುರ್ಗಮ್ಮನಿಗೆ ಪೂಜೆ ಮಾಡಿಸಿದ ದರ್ಶನ್​ ಪತ್ನಿ..!
ರಿಲೀಸ್​ಗೂ ಮುನ್ನ ದೇವಿ ದರ್ಶನ ಮಾಡಿದ ವಿಜಯಲಕ್ಷ್ಮೀ
ದರ್ಶನ್ ಜೈಲಿನಲ್ಲಿರುವಾಗ ಪತ್ನಿ ವಿಜಯಲಕ್ಷ್ಮೀ ಟೆಂಪಲ್ ರನ್​ನಲ್ಲಿ ಬ್ಯುಸಿಯಾಗಿದ್ರು. ನಿನ್ನೆ ಕೂಡ ದರ್ಶನ್​ ಬೇಲ್ ಆದೇಶ ಬಂದ್ಮೇಲೆ ಪತ್ನಿ ವಿಜಯಲಕ್ಷ್ಮೀ ಬಳ್ಳಾರಿಯಲ್ಲಿರುವ ಕನಕ ದುರ್ಗಮ್ಮ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ದೇವಿಯಲ್ಲಿ ಹರಕೆ ಕೂಡ ಮಾಡ್ಕೊಂಡಿದ್ದು, ಶೀಘ್ರದಲ್ಲೇ ಹರಕೆ ತೀರಿಸೋದಾಗಿ ಹೇಳಿ ಹೋಗಿದ್ದಾರಂತೆ. ವಿಜಯಲಕ್ಷ್ಮೀ ಮೊದಲ ಬಾರಿ ಬಂದಾಗ ದುಖಃ ದುಗುಡದಿಂದ ದೇಗುಲಕ್ಕೆ ಬಂದು ಪೂಜೆ ಸಲ್ಲಿಸಿದ್ದರು.

Advertisment

publive-image

ಅತಿ ಶೀಘ್ರದಲ್ಲೇ ದರ್ಶನ್ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ..!
ನಟ ದರ್ಶನ್ ಅಕ್ಟೋಬರ್ 31ರ ಮಧ್ಯಾಹ್ನವೇ ಖಾಸಗಿ ಆಸ್ಪತ್ರೆಗೆ ದಾಖಲಾಗ್ತಾರೆ ಅಂತ ಹೇಳಲಾಗುತ್ತಿತ್ತು. ಒಂದು ವಾರದಲ್ಲಿ ವೈದ್ಯಕೀಯ ವರದಿಯನ್ನ ನ್ಯಾಯಾಲಯಕ್ಕೆ ಸಲ್ಲಿಸ್ಬೇಕು. ಹೀಗಾಗಿ ಆದಷ್ಟು ಬೇಗನೇ ಬೆನ್ನು ನೋವು ಸರ್ಜರಿಗೆ ದರ್ಶನ್​​ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಮಗನ ಬರ್ತ್​​ಡೇ! ಬಳ್ಳಾರಿಯಿಂದ ಪತ್ನಿ, ಪುತ್ರ ವಿನೀಶ್​ನನ್ನು ನೋಡಲು ಬಂದ ದರ್ಶನ್​​ 

ಅಕ್ಟೋಬರ್ 31ರಂದು ಪುತ್ರ ವಿನೀಶ್​ ಹುಟ್ಟುಹಬ್ಬ ಇದ್ದು ಮಗನ ಬರ್ತ್​ಡೇ ಆಚರಣೆ ಬಳಿಕ ತಡವಾಗಿ ಆಸ್ಪತ್ರೆ ಸೇರುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ. ಅತ್ತ, ದರ್ಶನ್​ನ ನೋಡಲು ದರ್ಶನ್​ ತಾಯಿ ಮತ್ತು ಸಹೋದರ ಹೊಸಕೆರೆಹಳ್ಳಿಯ ವಿಜಯಲಕ್ಷ್ಮೀ ಮನೆಗೆ ಆಗಮಿಸಿದ್ದಾರೆ.

Advertisment

ಈ 45 ದಿನ ದರ್ಶನ್​ಗೆ ಅಕ್ಷರಶಃ ಚಾಲೆಂಜಿಂಗ್.. ಈ ಆರು ವಾರಗಳಲ್ಲಿ ಸಣ್ಣ ಯಡವಟ್ಟು ಮಾಡ್ಕೊಂಡ್ರು ಜಾಮೀನು ವಜಾ ಆಗೋದು ಶತಸಿದ್ಧ. ಅತ್ತ, ಅಭಿಮಾನಿಗಳಿಂದಲೂ ಏನಾದ್ರು ಸಣ್ಣ ತಪ್ಪುಗಳು ನಡೆದ್ರೂ ದರ್ಶನ್​ಗೆ ಲಿಂಕ್ ಆಗುವ ಸಾಧ್ಯತೆ ಇದೆ. ಹೀಗಾಗಿ, ದರ್ಶನ್ ತಮ್ಮ ಪ್ರತಿ ಹೆಜ್ಜೆ ಮೇಲೂ ಪೊಲೀಸರು ಹದ್ದಿನ ಕಣ್ಣಿಟ್ಟಿರೋದಂತೂ ಸತ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment