/newsfirstlive-kannada/media/post_attachments/wp-content/uploads/2024/07/dharshan.jpg)
ಬೆಂಗಳೂರು: ದರ್ಶನ್‌ಗೆ ಇದು ಅಗ್ನಿಪರೀಕ್ಷೆಯ ಕಾಲ. ಜೈಲಿನಲ್ಲಿ ಈಗ ಅವರ ಕೃತಕ ಕೂದಲಿಗೂ ಕತ್ತರಿ ಬಿದ್ದಿದೆ ಅನ್ನೋ ಸಂಗತಿ ಕೇಳಿ ಬಂದಿದೆ. ಇದ್ರಿಂದ ದರ್ಶನ್ ಅವರ ವಿಗ್ ಸ್ಟೋರಿ ಗೊತ್ತಿಲ್ಲದವರಿಗೂ ತಿಳಿಯುವಂತಾಗಿದೆ. ಮತ್ತೊಂದೆಡೆ ಸಂಕಟ ಬಂದಾಗ ವೆಂಕಟರಮಣ ಅಂತ ದಾಸ ಆಧ್ಯಾತ್ಮಿಕತೆಯ ಮೊರೆ ಹೋಗಿದ್ದಾರಂತೆ.
ಒಂದೇ ಒಂದು ತಪ್ಪು. ಒಬ್ಬ ವ್ಯಕ್ತಿಯ ಅಸಲಿ ಮುಖವನ್ನು ತೆರೆದಿಡುತ್ತೆ. ಆದ್ರೆ ದರ್ಶನ್ ತಪ್ಪಿನ ಮೇಲೆ ತಪ್ಪು ಮಾಡಿ ತಮ್ಮ ವೈಯಕ್ತಿಕ ಜೀವನಗಾಥೆಯನ್ನ ಜಗಜ್ಜಾಹೀರು ಮಾಡಿಕೊಂಡಿದ್ದಾರೆ. ಸದಾ ಜಿಮ್. ವರ್ಕೌಟ್.. ಮೇಕಪ್.. ಆ್ಯಕ್ಷನ್ ಕಟ್‌ನಲ್ಲಿ ಬ್ಯುಸಿ ಇರ್ತಿದ್ದ ದರ್ಶನ್‌ಗೆ ಅತಿ ಕಠಿಣ ಕಾಲ ಎದುರಾಗಿದೆ.
ಇದನ್ನೂ ಓದಿ: ಶೆಡ್‌ನಲ್ಲಿ ಮತ್ತೊಂದು ಮರ್ಡರ್.. ಯುವಕನನ್ನು ಕರೆದು ಸುಟ್ಟು ಹಾಕಿದ ದುಷ್ಕರ್ಮಿಗಳು; ಕಾರಣವೇನು?
‘ಕಾಟೇರ’ನ ಕೃತಕ ಕೂದಲನ್ನೇ ತೆಗಿಸಿದ್ರಾ ಪೊಲೀಸ್?
ಜೈಲಿನಲ್ಲಿ ತಲೈವಾ ಶಿವಾಜಿ ಲುಕ್‌ನಲ್ಲಿದ್ದಾರಾ ದಾಸ?
ತುಂಬಾ ಜನರಿಗೆ ಗೊತ್ತಿರದ ವಿಚಾರ ಅಂದ್ರೆ ದರ್ಶನ್ ತಲೆ ಕೂದಲು ಒರಿಜಿನಲ್ ಅಲ್ಲ ಅನ್ನೋದು. ಯೆಸ್.. ದರ್ಶನ್ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಾಗ ಅವರ ಕೇಶರಾಶಿ, ಅವರ ಸ್ಟೈಲ್‌ಗೆ ಮರುಳಾಗದವರೇ ಇಲ್ಲ. ಚಿತ್ರಕ್ಕೊಂದು ಹೇರ್‌ಸ್ಟೈಲ್ ಮಾಡಿರೋದನ್ನ ನೋಡದವರಿಲ್ಲ. ಆದ್ರೆ, ದರ್ಶನ್ ಇತ್ತೀಚಿಗೆ ವಿಗ್ ಹಾಕೋದು ಸೂಕ್ಷ್ಮವಾಗಿ ಗಮನಿಸಿದ್ರೆ ಗೊತ್ತಾಗೋದು. ಇದೀಗ ಕೊಲೆ ಕೇಸಲ್ಲಿ ಜೈಲು ಸೇರಿದ್ಮೇಲೆ ವಿಗ್ನ ಮೇಂಟೇನ್ ಮಾಡೋದು ಕಷ್ಟ ಆಗ್ತಿದೆಯಂತೆ. ಹೀಗಾಗಿ ವಿಗ್ ತೆಗಿಸಿರೋ ಪೊಲೀಸರು ದರ್ಶನ್ ತಲೆ ಕೂದಲನ್ನ ಪೂರ್ತಿಯಾಗಿ ಬೋಳಿಸಿದ್ದಾರೆ ಎನ್ನಲಾಗ್ತಿದೆ.
ವಿಗ್ ತೆಗೆಸಿದ್ರಾ ಪೊಲೀಸ್?
ದರ್ಶನ್ ತಲೆ ಕೂದಲನ್ನ ಶೇವ್ ಮಾಡಿದ್ದಾರೆ ಎಂಬ ಮಾತು
ವಿಗ್ ತೆಗಿಸಿ ಇಡೀ ತಲೆಯ ಕೂದಲನ್ನೂ ಶೇವ್ ಮಾಡಿದ್ರಾ?
ಜೈಲಿನಲ್ಲಿ ವಿಗ್ ಮೇಂಟೇನ್ ಮಾಡೋದು ದಾಸನಿಗೆ ಕಷ್ಟ
ವಿಗ್ ಕೂದಲು-ನಿಜವಾದ ಕೂದಲು ಬ್ಯಾಲೆನ್ಸ್ ಮಾಡಬೇಕು
ಪ್ರತಿ 20 ದಿನಕ್ಕೊಂದು ಸಾರಿ ಚೆಕ್ ಮಾಡಿ ಬ್ಯಾಲೆನ್ಸ್ ಮಾಡ್ಬೇಕು
ಈ ರೀತಿ ಜೈಲಿನಲ್ಲಿ ಮೇಂಟೇನ್ ಮಾಡೋದು ತುಂಬಾ ಕಷ್ಟ
ಈ ಕಷ್ಟವನ್ನ ನೋಡದೇ ಜೈಲಧಿಕಾರಿಗಳು ವಿಗ್ ತೆಗಿಸಿದ್ದಾರೆ
ದರ್ಶನ್ರ ತಲೆಯನ್ನ ಕ್ಲೀನ್ ಶೇವ್ ಮಾಡಿಸಿರುವ ಮಾಹಿತಿ
ಡಿ ಬಾಸ್ ಆಗಿದ್ದ ದರ್ಶನ್ರನ್ನ ಶಿವಾಜಿ ಸಿನಿಮಾದ ರಜನಿ ಬಾಸ್ ಲುಕ್‌ಗೆ ಪೊಲೀಸರು ಬದಲಾಯಿಸಿದ್ದಾರೆ ಎನ್ನಲಾಗ್ತಿದೆ. ಇದ್ರ ಮಧ್ಯೆ ದರ್ಪ ದೌಲತ್ತುಗಳಿಲ್ಲದೆ ಯಾವುದರ ಗೊಡವೆ ಇಲ್ಲದೆ ಮನಃ ಶಾಂತಿಯನ್ನ ಬಯಸೋ ದಾಸನನ್ನ ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗುತ್ತೆ ಎನ್ನಲಾಗ್ತಿದೆ. ಆದ್ರೆ ಈ ಬಗ್ಗೆ ಜೈಲು ಅಧಿಕಾರಿಗಳಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್‌ಗೆ ಸ್ಫೋಟಕ ಟ್ವಿಸ್ಟ್.. ಇನ್ನೊಂದು ವಾರದಲ್ಲಿ ದರ್ಶನ್ ಗ್ಯಾಂಗ್ ಹಣೆಬರಹ ನಿರ್ಧಾರ
ಜೈಲಲ್ಲಿ ಆಂಜನೇಯನ ಭಜನೆ.. ದರ್ಶನ್ ಆಧ್ಯಾತ್ಮದ ಮೊರೆ
ದರ್ಶನ್‌ಗೆ ಈಗ ಸಂಕಟ ಬಂದಾಗ ವೆಂಕಟರಮಣ ಅನ್ನೋ ಟೈಮು. ಈ ಕಾರಣಕ್ಕಾಗಿಯೇ ದರ್ಶನ್ ಆಧ್ಯಾತ್ಮದತ್ತ ಹೊರಳ್ತಿದ್ದಾರಂತೆ. ಯೋಗ ಮಾಡ್ತಿದ್ದಾರಂತೆ. ಆಂಜನೇಯನ ಭಜನೆ ಕೂಡ ಮಾಡ್ತಿದ್ದಾರಂತೆ. ಸಂಜೆ ಹೊತ್ತಲ್ಲಿ ಟೈಮ್ ತಳ್ಳೋದಕ್ಕೆ ತುಳಸಿದಾಸರು ರಚಿಸಿದ್ದ ಪವನ ತನಯ ಸಂಕಟ ಹರಣ ಮಂಗಳ ಮೂರತಿ ರೂಪ.. ಭೂತ ಪಿಸಾಚ ನಿಕಟ ನಹಿನ ಆವೈ, ಮಹಾವೀರ ಜಬ ನಾಮ ಸುನಾವೈ ಅಂತ ಹನುಮಾನ್ ಚಾಲೀಸಾ ಪಠಿಸುತ್ತಿದ್ದಾರಂತೆ. ಅಲ್ಲದೇ ಸ್ವಾಮಿ ವಿವೇಕಾನಂದ ಸೇರಿ ದಾರ್ಶನಿಕರ ಪುಸ್ತಕಗಳನ್ನೂ ದರ್ಶನ್ ಓದುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಹಾಗೆ ದರ್ಶನ್ ಜೈಲಿನಲ್ಲಿ ಮನಃ ಶಾಂತಿಯ ಮೊರೆ ಹೋಗಿದ್ದಾರೆ. ಇದೇ ಶಾಂತಿಯನ್ನ ರೇಣುಕಾಸ್ವಾಮಿಯನ್ನ ಶೆಡ್‌ಗೆ ಕರೆದಾಗ ತಗೊಂಡಿದ್ರೆ ಇಷ್ಟೆಲ್ಲಾ ಅನಾಹುತ ಆಗುತ್ತಾ ಇರ್ಲಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ