/newsfirstlive-kannada/media/post_attachments/wp-content/uploads/2024/06/darshan-3-2.jpg)
ರೇಣುಕಾಸ್ವಾಮಿಯನ್ನು ಬರ್ಬರವಾಗಿ ಕೊಲೆ ಮಾಡಿ ಪೊಲೀಸರ ವಶದಲ್ಲಿರುವ ಆರೋಪಿ ದರ್ಶನ್​ಗೆ ಪಶ್ಚಾತ್ತಾಪ ಕಾಡುತ್ತಿದೆ. ಮಹಜರು ಪ್ರಕ್ರಿಯೆ ಮುಗಿದ ಬಳಿಕ ದರ್ಶನ್ ಮನಸ್ಥಿತಿಯಲ್ಲಿ ಬದಲಾವಣೆಯಾಗಿದೆ. ನಡೆದ ಘಟನೆ ಬಗ್ಗೆ ತೀವ್ರ ಪಶ್ಚಾತ್ತಾಪದ ಮಾತುಗಳನ್ನಾಡುತ್ತಿದ್ದಾರಂತೆ.
/newsfirstlive-kannada/media/post_attachments/wp-content/uploads/2024/06/dboss2.jpg)
ಇದನ್ನೂ ಓದಿ: ಮುಕ್ತಾಯದ ಹಂತಕ್ಕೆ ಬಂದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ.. ದರ್ಶನ್ ಮತ್ತು ಗ್ಯಾಂಗ್ ಜೈಲು ಸೇರುವ ಸಾಧ್ಯತೆ
ನಟ ದರ್ಶನ್​ ಪರಿಚಯಸ್ಥ ಅಧಿಕಾರಿಗಳ ಬಳಿ ತಪ್ಪಾಗೋಯ್ತು ಎನ್ನುತ್ತಿದ್ದಾರೆ. ಸದ್ಯ ದರ್ಶನ್ ಪರಿಸ್ಥಿತಿ ಉಗುರಲ್ಲಿ ಹೋಗೋದಕ್ಕೆ ಕೊಡಲಿ ತಗೊಂಡ್ರು ಎನ್ನುವಂತಾಗಿದೆ.
/newsfirstlive-kannada/media/post_attachments/wp-content/uploads/2024/06/Darshan-Arrest-3.jpg)
ಇದನ್ನೂ ಓದಿ: ಸಿನಿಮಾ ಕಂಪ್ಲೀಟ್ ಮಾಡದಿದ್ರೆ, ಭೂಮಿ ಮೇಲೆ ಇಲ್ಲದಂತೆ ಮಾಡಿಸ್ತೀನಿ.. ನಿರ್ಮಾಪಕನಿಗೆ ದರ್ಶನ್​ ಜೀವ ಬೆದರಿಕೆ
ಕಸ್ಟಡಿಯಲ್ಲಿರುವ ನಟ ದರ್ಶನ್ ಪಶ್ಚಾತ್ತಾಪದ ನುಡಿಗಳನ್ನು ಆಡುತ್ತಿದ್ದಾರೆ. ತನ್ನೊಂದಿಗೆ ಸಹಚರರ ಜೀವನವೂ ಹಾಳು ಮಾಡಿದೆ ಎಂಬ ಪಶ್ಚಾತ್ತಾಪ ಮಾಡಿಕೊಳ್ಳುತ್ತಿದ್ದಾರಂತೆ. ಈ ಸ್ಥಾನದಲ್ಲಿದ್ದುಕೊಂಡು ಈ ಕೇಸ್ ನಲ್ಲಿ ಅರೋಪಿಯಾಗಿರೋದಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾರಂತೆ. ಮತ್ತೊಂದೆಡೆ ಅಭಿಮಾನಿಗಳು, ಚಿತ್ರರಂಗದ ಗಣ್ಯರನ್ನ ಫೇಸ್ ಮಾಡೋದು ಹೇಗೆ ಎನ್ನುವ ಟೆನ್ಷನ್ ಶುರುವಾಗಿದೆಯಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us