ಹೆಂಡ್ತಿ ವಿಜಯಲಕ್ಷ್ಮಿ ಬಗ್ಗೆ ಇಂಟರೆಸ್ಟಿಂಗ್​ ವಿಚಾರ ರಿವೀಲ್​ ಮಾಡಿದ ನಟ ದರ್ಶನ್​!

author-image
Ganesh Nachikethu
Updated On
ಹೆಂಡ್ತಿ ವಿಜಯಲಕ್ಷ್ಮಿ ಬಗ್ಗೆ ಇಂಟರೆಸ್ಟಿಂಗ್​ ವಿಚಾರ ರಿವೀಲ್​ ಮಾಡಿದ ನಟ ದರ್ಶನ್​!
Advertisment
  • ಮುದ್ದು ಮುದ್ದು ಮುದ್ದು ರಾಕ್ಷಸಿ ಅನ್ನೋ ಸಾಂಗ್​​ ಸಖತ್​ ಹಿಟ್
  • ನಿಮಗೆ ಮಾತ್ರವಲ ಈ ಹಾಡು ನಟ ದರ್ಶನ್​ಗೂ ಬಹಳ ಇಷ್ಟ..!
  • ವಿಜಯಲಕ್ಷ್ಮಿ ಬಗ್ಗೆ ಇಂಟರೆಸ್ಟಿಂಗ್​ ವಿಚಾರ ರಿವೀಲ್​ ಮಾಡಿದ ದರ್ಶನ್

ಮುದ್ದು ಮುದ್ದು ಮುದ್ದು ರಾಕ್ಷಸಿ ಅನ್ನೋ ಸಾಂಗ್​​ ಸಖತ್​ ಹಿಟ್​ ಆಗಿದೆ ಎಂಬುದು ಎಲ್ಲರಿಗೂ ಗೊತ್ತಿರೋ ವಿಚಾರ. ಈ ರೊಮ್ಯಾಂಟಿಕ್ ಹಾಡು ಎಂದರೆ ನಿಮಗೆ ಮಾತ್ರವಲ ನಟ ದರ್ಶನ್​ಗೂ ಇಷ್ಟ ಎಂಬುದು ವಿಶೇಷ.

ಇಂದು ಸಂಜೆ ನಟ ದರ್ಶನ್​​ ಧನ್ವೀರ್​ ಅಭಿನಯದ ವಾಮನ ಸಿನಿಮಾ ಟ್ರೇಲರ್ ರಿಲೀಸ್​ ಮಾಡಿದ್ರು. ಈ ಸಿನಿಮಾ ಎಷ್ಟು ಸೌಂಡ್​ ಮಾಡುತ್ತೋ ಗೊತ್ತಿಲ್ಲ. ಆದರೆ, ಮುದ್ದು ರಾಕ್ಷಸಿ ಸಾಂಗ್​ ಮಾತ್ರ ಭಾರೀ ಸೌಂಡ್​ ಮಾಡಿದೆ. ಈ ಹಾಡಿಗೆ ಖುದ್ದು ನಟ ದರ್ಶನ್​ ಫಿದಾ ಆಗಿದ್ದಾರೆ. ಈ ಬಗ್ಗೆ ನಟ ದರ್ಶನ್​ ಮಾತಾಡಿದ್ದಾರೆ.

ಏನಂದ್ರು ದರ್ಶನ್​?

ನನಗೆ ವಾಮನ ಸಿನಿಮಾದ ಮುದ್ದು ರಾಕ್ಷಸಿ ಅನ್ನೋ ಸಾಂಗ್​ ಬಹಳ ಇಷ್ಟು. ನನ್ನ ಹಂಡ್ತಿಗೆ ಕೋಪ ಬಂದಾಗ ಮುದ್ದು ರಾಕ್ಷಸಿ ಅಂತಲೇ ಕರಿಯುತ್ತೇನೆ. ಆಗಾಗ ಮುದ್ದು ರಾಕ್ಷಸಿ ಎಂದು ರೇಗಿಸುತ್ತೇನೆ ಎಂದರು ನಟ ದರ್ಶನ್​.


">March 27, 2025

ಖ್ಯಾತ ಸಾಹಿತಿ ವಿ. ನಾಗೇಂದ್ರ ಪ್ರಸಾದ್​ ಸಾಹಿತ್ಯ ಬರೆದಿರೋ ಮುದ್ದು ರಾಕ್ಷಸಿ ಹಾಡಿಗೆ ಅಜನೀಶ್​ ಲೋಕನಾಥ್​ ಟ್ಯೂನ್​ ಹಾಕಿದ್ದಾರೆ. ವಿಜಯ್​ ಪ್ರಕಾಶ್​ ಹಾಗೂ ಹರ್ಷಿಕಾ ದೇವನಾಥ್​ ಧ್ವನಿಯಾಗಿದ್ದಾರೆ. ಧನ್ವೀರ್​ ಹಾಗೂ ರೀಷ್ಮಾ ನಾಣಯ್ಯ ಹೆಜ್ಜೆ ಹಾಕಿದ್ದಾರೆ.

ವಾಮನ ಸಿನಿಮಾದಲ್ಲಿ ಧನ್ವೀರ್‌ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಅಭಿನಯಿಸಿದ್ದಾರೆ. ಹಿರಿಯ ನಟರಾದ ತಾರಾ, ಸಂಪತ್‌, ಆದಿತ್ಯ ಮೆನನ್‌, ಶಿವರಾಜ್ ಕೆ.ಆರ್ ಪೇಟೆ, ಅವಿನಾಶ್‌, ಅಚ್ಯುತ್‌ ಕುಮಾರ್‌, ಕಾಕ್ರೋಚ್‌ ಸುಧಿ, ಭೂಷಣ್‌ ಮುಂತಾದವರು ಈ ಸಿನಿಮಾದ ಭಾಗವಾಗಿದ್ದಾರೆ.

ಇದನ್ನೂ ಓದಿ:ನಾಳೆ ಚೆನ್ನೈ ವಿರುದ್ಧ ರೋಚಕ ಪಂದ್ಯ; ಬಲಿಷ್ಠ ಆರ್​​ಸಿಬಿ ತಂಡ ಕಣಕ್ಕೆ; ಯಾರಿಗೆ ಚಾನ್ಸ್​​?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment