‘ಪ್ಲೀಸ್ ಯಾರನ್ನೂ ಭೇಟಿಗೆ ಬಿಡಬೇಡಿ..’ ಜೈಲು ಅಧಿಕಾರಿಗಳ ಮುಂದೆ ದರ್ಶನ್ ಪಶ್ಚಾತ್ತಾಪದ ಮಾತುಗಳು..?

author-image
Ganesh
Updated On
ಕಂಬಿ ಹಿಂದಿರೋ ದಾಸನಿಗೆ ಬಿಗ್ ಶಾಕ್‌.. ದರ್ಶನ್‌ಗೆ ಇನ್ನೆಷ್ಟು ದಿನ ಜೈಲೂಟ? ಹೈಕೋರ್ಟ್‌ ಹೇಳಿದ್ದೇನು?
Advertisment
  • ಪರಪ್ಪನ ಅಗ್ರಹಾರ ಜೈಲು ಸೇರಿದ ಬಳಿಕ ದರ್ಶನ್ ಸೈಲೆಂಟ್‌
  • ಪುತ್ರ ವಿನೀಶ್, ವಿಜಯಲಕ್ಷ್ಮೀ ಬಂದು ಹೋದ ಬಳಿಕ‌ ಮೌನ
  • ಮಗ ಬಂದ ದಿನ ಸುಮಾರು ಎರಡು ನಿಮಿಷ ತಬ್ಬಿಕೊಂಡು ಕಣ್ಣೀರು

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲು ಸೇರಿದ ಬಳಿಕ ನಟ ದರ್ಶನ್ ಮೌನಕ್ಕೆ ಶರಣಾಗಿದ್ದಾರಂತೆ. ಪ್ಲೀಸ್ ಯಾರನ್ನು ನನ್ನ ಭೇಟಿಗೆ ಬಿಡಬೇಡಿ ಎಂದು ದರ್ಶನ್ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮಗ ವಿನೀಶ್ ಹಾಗೂ ಪತ್ನಿ ವಿಜಯಲಕ್ಷ್ಮೀ ಬಂದು ಹೋದ ಬಳಿಕ‌ ಮೌನಕ್ಕೆ ದರ್ಶನ್ ಮೌನಕ್ಕೆ ಜಾರಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂದು ಜೈಲು ಅಧಿಕಾರಿಗಳ ಮುಂದೆ ದರ್ಶನ್ ಪಶ್ಚಾತಾಪ ಪಟ್ಟುಕೊಂಡಿದ್ದಾರೆ. ಕೆಲವು ಪರಿಚಯಗಳೇ ನಾನು ಮಾಡಿಕೊಂಡ ದೊಡ್ಡ ತಪ್ಪು ಎಂದು ದರ್ಶನ್ ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ನ್ಯೂಸ್ ​ಫಸ್ಟ್ ಇಂಫ್ಯಾಕ್ಟ್​; ಆರೋಪಿ ರವಿ ಕುಟುಂಬಕ್ಕೆ ಹರಿದು ಬಂದ ನೆರವಿನ ಹಸ್ತ.. ಶಾಲೆಗೆ ಹೊರಟ ಮಕ್ಕಳು

ಇನ್ನು ದರ್ಶನ್ ಇರುವ ಭದ್ರತಾ ಕೊಠಡಿಯಲ್ಲಿ ಟಿವಿ ಹಾಗೂ ಕಾಟ್ ವ್ಯವಸ್ಥೆ ಇದೆ. ಜೈಲಿಗೆ ಹೋದಾಗಿಂದ ಇದುವರೆಗೂ ನ್ಯೂಸ್‌ ಚಾನೆಲ್ ಹಾಕಿಲ್ಲ. ಜೊತೆಗೆ ಕನ್ನಡದ ಯಾವುದೇ ಮನರಂಜನೆಯ ಚಾನೆಲ್ ಕೂಡ ಹಾಕ್ತಿಲ್ಲ, ಕನ್ನಡ ಸಿನಿಮಾ ಕೂಡ ನೋಡ್ತಿಲ್ಲ. ಬರೀ ಹಿಂದಿ ಸಿನಿಮಾಗಳನ್ನೇ ದರ್ಶನ್ ವೀಕ್ಷಣೆ ಮಾಡುತ್ತಿದ್ದಾರೆ. ತುಂಬಾ ಬೋರ್ ಆದಾಗ ಸ್ಪೋರ್ಟ್ಸ್​ ಚಾನೆಲ್ ಹಾಕಿಕೊಂಡು ಇರ್ತಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ನಿಶ್ಚಿತಾರ್ಥ ಮುಗಿಸಿ ಬರುವಾಗ ಭೀಕರ ಅಪಘಾತ.. ಓರ್ವ ಸಾವು, 10 ಮಂದಿ ಗಂಭೀರ

ಮಗ ಬಂದ ದಿನ ಸುಮಾರು ಎರಡು ನಿಮಿಷ ಮಗನನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ. ಮಗ ಹಾಗೂ ಪತ್ನಿ ಬಳಿ ಇಲ್ಲಿ ಇರೋಕೆ ಆಗುತ್ತಿಲ್ಲ ಎಂದು ಕಣ್ಣೀರು ಇಟ್ಟಿದ್ದಾರಂತೆ. ಈ ವೇಳೆ ಜಾಮೀನಿನ ಮೇಲೆ ಹೊರಗಡೆ ತರೋದಾಗಿ ಪತ್ನಿ ವಿಜಯಲಕ್ಷ್ಮೀ ಧೈರ್ಯ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:IND vs ENG ಸೆಮಿಫೈನಲ್ ಪಂದ್ಯ ಕ್ಯಾನ್ಸಲ್..? ವೆದರ್​​ ರಿಪೋರ್ಟ್​​ನಲ್ಲಿ ಶಾಕಿಂಗ್ ಮಾಹಿತಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment