/newsfirstlive-kannada/media/post_attachments/wp-content/uploads/2025/02/DARSHAN_SON_NEW.jpg)
ರಾಮನಗರ: ಪ್ರಕರಣ ಒಂದಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಅವರು ನಿನ್ನೆಯಷ್ಟೇ ಕೋರ್ಟ್ಗೆ ಹಾಜರಾಗಿದ್ದರು. ಇದರ ಬೆನ್ನಲ್ಲೇ ದರ್ಶನ್ ಪುತ್ರ ವಿನೀಶ್ ಅವರು ದೇವಾಲಯವೊಂದಕ್ಕೆ ಭೇಟಿ ನೀಡಿದ್ದು ಅಪ್ಪನ ಸಂಕಷ್ಟ ನಿವಾರಣೆಗೆ ದೇವಿ ಬಳಿ ಪ್ರಾರ್ಥನೆ ಸಲ್ಲಿಕೆ ಮಾಡಿದ್ದಾರೆ.
ವಿನೀಶ್ ಅವರು ರಾಮನಗರದ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ಇರುವ ಶಕ್ತಿವಂತೆ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ದೇವತೆಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಅಪ್ಪನ ಸಂಕಷ್ಟ ನಿವಾರಣೆ ಮಾಡುವಂತೆ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಈ ವೇಳೆ ದರ್ಶನ್ ಪುತ್ರ ವಿನಿಶ್ಗೆ ದೇವಾಲಯ ಧರ್ಮದರ್ಶಿಗಳು ಗೌರವ ಸಲ್ಲಿಸಿದರು. ಜೊತೆಗೆ ವಿನೀಶ್ಗೆ ತಾಯಿ ಚಾಮುಂಡೇಶ್ವರಿ ಪೋಟೋ ನೀಡುವ ಮೂಲಕ ಮಲ್ಲೇಶ್ ಗುರೂಜಿ ಶುಭಕೋರಿದರು.
ಇದನ್ನೂ ಓದಿ:ಧ್ರುವ ಸರ್ಜಾ, ಪ್ರೇರಣಾಗೆ ಧನ್ಯವಾದ ಹೇಳಿದ ಸರ್ಕಾರಿ ಶಾಲೆ ಮಕ್ಕಳು.. ಯಾಕೆ ಗೊತ್ತಾ?
ವಿನೀಶ್ ಅವರು ದೇವರ ದರ್ಶನ ಪಡೆಯುವಾಗ ಕೆಲವರು ಯಾರೋ.. ವಿಡಿಯೋ ಮಾಡುತ್ತಿದ್ದರು. ಈ ವೇಳೆ ವಿಡಿಯೋ ಮಾಡದಂತೆ ಮನವಿ ಮಾಡಿದ್ದಾರೆ. ಇನ್ನು ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ದೇವಾಲಯಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು ದೇವರ ಆಶೀರ್ವಾದ ಪಡೆಯುತ್ತಿದ್ದರು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ