newsfirstkannada.com

ಜೈಲಲ್ಲಿ 2ನೇ ರಾತ್ರಿ ಕಳೆದ ದರ್ಶನ್​.. ಸರಿಯಾಗಿ ಊಟ, ನಿದ್ದೆ ಇಲ್ಲದ ‘ಕಾಟೇರ’ನ ಕತೆ-ವ್ಯಥೆ ಹೀಗಿದೆ

Share :

Published June 24, 2024 at 12:52pm

  ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ದೂಡುತ್ತಿರುವ ದರ್ಶನ್​

  ಮಾಂಸದೂಟ ಕೊಟ್ಟರೂ ಬೇಡ ಎಂದ ಚಾಲೆಂಜಿಂಗ್​ ಸ್ಟಾರ್​

  ಜೈಲಿನಲ್ಲಿ ಪಶ್ಚಾತ್ತಾಪ.. ಸರಿಯಾಗಿ ಊಟ, ನಿದ್ದೆ ಮಾಡದೆ ಚಡಪಡಿಕೆ

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​, ನಟಿ ಪವಿತ್ರಾ ಸೇರಿ 17 ಮಂದಿ ಜೈಲು ಪಾಲಾಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ದೂಡುತ್ತಿದ್ದಾರೆ. ಸದ್ಯ ಜೈಲಿನಿಂದ ಹೊರಬರಲು ಸಮಯ ಎಣಿಸುತ್ತಿರುವ ‘ಕಾಟೇರ’​ ಜೈಲಿನಲ್ಲಿ ಸರಿಯಾಗಿ ಊಟ, ನಿದ್ದೆ ಮಾಡದೆ ಚಡಪಡಿಸುತ್ತಿದ್ದಾರಂತೆ.

ಜೈಲಿನ ಮೆನುವಿನಂತೆ ಇಂದು ಜೈಲ್ ಸಿಬ್ಬಂದಿ ಉಪ್ಪಿಟ್ಟು ನೀಡಿದ್ದಾರೆ. ಸಿಬ್ಬಂದಿ ನೀಡಿದ ಉಪ್ಪಿಟ್ಟನ್ನು ದರ್ಶನ್​ ಆ್ಯಂಡ್​ ಗ್ಯಾಂಗ್​ ಸವಿಸಿದ್ದಾರಂತೆ.

ಮಾಂಸದೂಟ ಸೇವಿಸದ ದರ್ಶನ್

ಇನ್ನು ಪ್ರತಿ ಭಾನುವಾರ ಜೈಲಿನಲ್ಲಿ ಮಾಂಸದೂಟವಿರುತ್ತದೆ. ಆದರಂತೆ ನಿನ್ನೆ ಸಹ ನಾನ್​ವೆಜ್​ ನೀಡಲಾಗಿತ್ತು. ಆದರೆ ದರ್ಶನ್ ಮಾತ್ರ​ ಮಾಂಸದೂಟವನ್ನು ನಿರಾಕರಿಸಿದ್ದಾರಂತೆ.

ಇದನ್ನೂ ಓದಿ: ಪ್ರೀತಿಸಿ ಮದುವೆಯಾಗ್ತೀನಿ ಕಣೆ ಎಂದು ನಂಬಿಸಿದ ಆರೋಪ.. 18 ಲಕ್ಷ ರೂಪಾಯಿ ಪೀಕಿ ಕೈಕೊಟ್ಟ ಪೊಲೀಸಪ್ಪ!

ಮತ್ತೊಂದೆಡೆ ಜೈಲಿನಲ್ಲಿ ಪಶ್ಚಾತ್ತಾಪ ಪಡುತ್ತಿರುವ ದರ್ಶನ್​ ಸರಿಯಾಗಿ ಊಟ, ನಿದ್ದೆ ಮಾಡದೆ ಚಡಪಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಮೊದಲ ರಾತ್ರಿ ಹೇಗಿತ್ತು?

ದರ್ಶನ್​​​ಗೆ ಜೈಲು ಸೇರಿದ ಮೊದಲ ರಾತ್ರಿ ಊಟಕ್ಕೆ ಚಪಾತಿ, ಅನ್ನ, ಮಜ್ಜಿಗೆ ನೀಡಿದ್ದಾರೆ. ಚಪಾತಿ ಮಾತ್ರ ತಿಂದು ಮಜ್ಜಿಗೆ ಕುಡಿದಿರುವ ನಟ ದರ್ಶನ್ ಜೈಲು ಸಿಬ್ಬಂದಿ ಕೊಟ್ಟ ಅನ್ನ ತಿನ್ನಲು ಒಲ್ಲೆ ಎಂದಿದ್ದಾರಂತೆ. ರಾತ್ರಿ 8 ಗಂಟೆ ಸುಮಾರಿಗೆ ಜೈಲೂಟ ಸೇವಿಸಿದ ದರ್ಶನ್ ಯಾರ ಜೊತೆಗೂ ಮಾತನಾಡದೇ ಮೌನಕ್ಕೆ ಜಾರಿದ್ದಾರಂತೆ. ಸಪ್ಪೆ ಮೊರೆ ಹಾಕಿಕೊಂಡು ನಟ ದರ್ಶನ್ ಜೈಲಲ್ಲಿ ಕುಳಿತಿದ್ದರಂತೆ.

ಇದನ್ನೂ ಓದಿ: ಹೆರಿಗೆಗೆಂದು ಬಂದ ಗರ್ಭಿಣಿ ಸಾವು.. ಆಸ್ಪತ್ರೆ ಮುಂದೆ ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ

ದರ್ಶನ್​ 6106

ಸದ್ಯ ವಿಚಾರಣಾಧೀನ ಖೈದಿಯಾಗಿರುವ ದರ್ಶನ್​ಗೆ 6106 ನಂಬರ್​ ಕೊಟ್ಟಿದ್ದಾರೆ. ಭದ್ರತೆಯ ದೃಷ್ಟಿಯಿಂದ ನಟ ದರ್ಶನ್​ನನ್ನ ಪರಪ್ಪನ ಅಗ್ರಹಾರ ಜೈಲಿನ ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲಲ್ಲಿ 2ನೇ ರಾತ್ರಿ ಕಳೆದ ದರ್ಶನ್​.. ಸರಿಯಾಗಿ ಊಟ, ನಿದ್ದೆ ಇಲ್ಲದ ‘ಕಾಟೇರ’ನ ಕತೆ-ವ್ಯಥೆ ಹೀಗಿದೆ

https://newsfirstlive.com/wp-content/uploads/2024/06/DARSHAN-JAIL-2-1.jpg

Load More