/newsfirstlive-kannada/media/post_attachments/wp-content/uploads/2024/10/DARSHAN-11.jpg)
ನಟ ದರ್ಶನ್ ಅವರು ಜೈಲಿನಲ್ಲಿ ಇದ್ದರೂ ಅವರ ಹಳೆಯ ಸಿನಿಮಾಗಳು ಥಿಯೇಟರ್ಗಳಲ್ಲಿ ಸೌಂಡ್ ಮಾಡುತ್ತಿವೆ. ಇತ್ತೀಚೆಗಷ್ಟೇ ದರ್ಶನ್ ಅಭಿನಯದ ಕರಿಯ ಹಾಗೂ ಶಾಸ್ತ್ರಿ ಸಿನಿಮಾಗಳನ್ನು ಮರು ಬಿಡುಗಡೆ ಮಾಡಲಾಗಿತ್ತು. ಇದೀಗ ದರ್ಶನ್ ಮತ್ತು ಪ್ರಣೀತಾ ಸುಭಾಷ್ ನಟಿಸಿರುವ ಪೊರ್ಕಿ ಸಿನಿಮಾವನ್ನು ರೀ- ರಿಲೀಸ್ ಮಾಡಲಾಗಿದೆ.
ಸದ್ಯ ಥಿಯೇಟರ್ಗಳಲ್ಲಿ ರಜನಿಕಾಂತ್ ಅಭಿನಯದ ವೆಟ್ಟೈಯನ್ ಹಾಗೂ ಧ್ರುವ ಸರ್ಜಾ ಅವರ ಮಾರ್ಟಿನ್ ಸಿನಿಮಾ ಇವೆ. ಈ ಎರಡು ಸಿನಿಮಾಗಳ ಅಬ್ಬರ 2ನೇ ವಾರವು ತುಸು ಜೋರಾಗಿ ನಡೆಯುತ್ತಿದೆ. ಇದರ ಬೆನ್ನಲ್ಲೇ ದರ್ಶನ್ ಅವರ ಪೊರ್ಕಿ ಮೂವಿ ರಾಜ್ಯಾದ್ಯಂತ ರೀ ರಿಲೀಸ್ ಮಾಡಲಾಗಿದೆ. ಪ್ರಕರಣ ಒಂದರಲ್ಲಿ ದರ್ಶನ್ ಜೈಲು ಪಾಲು ಆದಾಗಿನಿಂದ ದರ್ಶನ್ ಅಭಿನಯದ ಸಿನಿಮಾಗಳನ್ನ ಮರು ಬಿಡುಗಡೆ ಮಾಡಲಾಗುತ್ತಿದೆ.
ಇದನ್ನೂ ಓದಿ:IND vs NZ ರೋಚಕ ಘಟ್ಟ ತಲುಪಿದ ಟೆಸ್ಟ್ ಪಂದ್ಯ.. ಟೀಮ್ ಇಂಡಿಯಾ ಮುಂದಿರುವ ಚಾಲೆಂಜ್ ಏನು?
ಇನ್ನು ಎಂ.ಡಿ ಶ್ರೀಧರ್ ನಿರ್ದೇಶನದ ಪೊರ್ಕಿ ಸಿನಿಮಾ ಈಗಾಗಲೇ ಮರು ಬಿಡುಗಡೆ ಮಾಡಲಾಗಿದೆ. ದರ್ಶನ್‌ಗೆ ಜೋಡಿಯಾಗಿ ನಟಿ ಪ್ರಣೀತಾ ಸುಭಾಷ್ ನಾಯಕಿಯಾಗಿ ಈ ಸಿನಿಮಾದಲ್ಲಿದ್ದಾರೆ. 2010ರಲ್ಲಿ ಕನ್ನಡದಲ್ಲಿ ತೆರೆಗೆ ಬಂದ ಈ ಸಿನಿಮಾ ತೆಲುಗಿನಲ್ಲಿ ಮಹೇಶ್ ಬಾಬು, ಪ್ರಕಾಶ್ ರಾಜ್, ಮುಮೈತ್ ಖಾನ್ ನಟಿಸಿದ ಪೊಕಿರಿ ಮೂವಿಯ ರಿಮೇಕ್ ಆಗಿದೆ.
ಇಲ್ಲಿ ತನಕ ಶಾಸ್ತ್ರಿ, ಕರಿಯ ಸಿನಿಮಾಗಳು ಮರು ಬಿಡುಗಡೆ ಮಾಡಿದಾಗ ಅಭಿಮಾನಿಗಳಿಂದ ಒಳ್ಳೆಯ ರೆಸ್ಪಾನ್ಸ್ ಬಂದಿತ್ತು. ಈ ಸಿನಿಮಾಗೂ ಉತ್ತಮ ಮಟ್ಟದಲ್ಲಿ ಫ್ಯಾನ್ಸ್ ಪ್ರತಿಕ್ರಿಯಿಸಿದ್ದಾರೆ. ಇದೀಗ ಪೊರ್ಕಿ ಸಿನಿಮಾ ರಾಜ್ಯದ ಚಿತ್ರಮಂದಿರಗಳಲ್ಲಿ ಸೌಂಡ್ ಮಾಡುತ್ತಿದ್ದು ಮುಂದಿನ ತಿಂಗಳು ನವಗ್ರಹ ಸಿನಿಮಾ ಬಿಡುಗಡೆ ಆಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ