/newsfirstlive-kannada/media/post_attachments/wp-content/uploads/2024/06/darshan20.jpg)
ಬೆಂಗಳೂರು: ಐಷಾರಾಮಿ ಬಂಗ್ಲೆ, ಆಳು-ಕಾಳು ಅಂತಿದ್ದ ಒಡೆಯ ಈಗ ಚೌಕಾಕಾರದ ಪೊಲೀಸ್ ಠಾಣೆಯಲ್ಲಿ ದಾಸನಾಗಿದ್ದಾನೆ. ಇಷ್ಟು ದಿನ ಯಜಮಾನನಂತಿದ್ದ ಜಗ್ಗುದಾದಾ ಈಗ ಸರಿಯಾಗಿ ನಿದ್ರೆ, ನೆಮ್ಮದಿ ಇಲ್ಲದೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಸದ್ಯ ಎರಡು ದಿನ ಕಳೆದಿರುವ ದರ್ಶನ್ ಮೂರನೇ ದಿನಕ್ಕೆ ಕಾಲಿಟ್ಟಿದ್ದಾರೆ. ಆದ್ರೆ ತಡರಾತ್ರಿವರೆಗೂ ಪೊಲೀಸರು ವಿಚಾರಣೆ ನಡೆಸಿದ್ರೂ ದರ್ಶನ್ ಅದೊಂದೇ ಉತ್ತರ ಹೇಳ್ತಿದ್ದಾರೆ.
ಪಾಪ.. ಬಡಪಾಯಿ ರೇಣುಕಾಸ್ವಾಮಿ.. ತಾನಾಯ್ತು ತನ್ನ ಕೆಲಸ ಆಯ್ತು ಅಂತಿದ್ರೆ ಹೀಗೆ ದುರಂತ ಅಂತ್ಯ ಕಾಣ್ತಿರಲಿಲ್ವೇನೋ? ಒಬ್ಬ ಸೋ ಕಾಲ್ಡ್ ನಟ.. ಚಾಲೆಂಜಿಂಗ್ ಸ್ಟಾರ್ ಬಿರುದಾಂಕಿತ.. ರೀಲ್ ಲೈಫ್ನಲ್ಲಿ ನಾಯಕ.. ರಿಯಲ್ ಲೈಫ್ನಲ್ಲಿ ಖಳನಾಯಕ.. ಇದುವರೆಗೂ ಐಷಾರಾಮಿ ಜೀವನ ನಡೆಸ್ತಿದ್ದ ಒಡೆಯ ಸುಂದರಿಯ ಸಹವಾಸ ಮಾಡಿದ ಬಳಿಕ ಈಗ ಪೊಲೀಸ್ ಕಸ್ಟಡಿಯಲ್ಲಿ ದಾಸ.
ಪೊಲೀಸ್ ಕಸ್ಟಡಿಯಲ್ಲಿ ಎರಡನೇ ರಾತ್ರಿ ಕಳೆದ ದರ್ಶನ್
ಬೃಂದಾವನದಂತಿದ್ದ ಐಷಾರಾಮಿ ಬಂಗಲೆ.. ಆಳು-ಕಾಳು.. ಗುಂಡು-ತುಂಡು ಅಂತಿದ್ದ ಭೂಪತಿ, ಕಿತಾಪತಿ ಮಾಡಿದ ಬಳಿಕ ಚೌಕಾಕಾರದ ಪೊಲೀಸ್ ಠಾಣೆಯಲ್ಲಿ ಅನಾಥರಾಗಿ ಎರಡನೇ ದಿನ ಕಳೆದಿದ್ದಾರೆ. ಮೆತ್ತನೆಯ ಬೆಡ್ ಮೇಲೆ ಹಾಯಾಗಿ ಮಲಗುತ್ತಿದ್ದ ಚಕ್ರವರ್ತಿ ಈಗ ಕಂಬಿ ಹಿಂದೆ ದಾಸನಾಗಿ ಮೂರನೇ ದಿನಕ್ಕೆ ಕಾಲಿಟ್ಟಿದ್ದಾರೆ. ಅಗ್ರಜನಿಗೆ ಸ್ನೇಹಿತರಾಗಿ ದರ್ಶನ್ ಗ್ಯಾಂಗ್ ಕೂಡ ಈ ಬಂಧನವಾಗಿದ್ದಾರೆ. ಕೊಲೆ ನಡೆದ ಶೆಡ್ನಲ್ಲಿ ನಿನ್ನೆ ಮಹಜರು ಪ್ರಕ್ರಿಯೆ ಬಳಿಕ ರಾತ್ರಿ ಊಟದ ನಂತರ ತಡರಾತ್ರಿವರೆಗೂ ತನಿಖಾಧಿಕಾರಿಗಳು ಆರೋಪಿಗಳ ವಿಚಾರಣೆ ಮಾಡಿದ್ದಾರೆ. ಸಿಸಿಟಿವಿ ಫುಟೇಜ್, ಸಿಡಿಆರ್ ಹಾಗೂ ಟವರ್ ಡಂಪ್ ಅಂತ ಟೆಕ್ನಿಕಲ್ ಎವಿಡೆನ್ಸ್ಗಳನ್ನ ಮುಂದಿಟ್ಟುಕೊಂಡು ತೀವ್ರವಾಗಿ ವಿಚಾರಣೆ ನಡೆಸಿ ಆರೋಪಿಗಳಿಂದ ಮತ್ತಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಆದ್ರೆ ತೀವ್ರ ವಿಚಾರಣೆ ಬಳಿಕವೂ ಪ್ರರಕರಣದ ಬಗ್ಗೆ ನನಗೇನು ಗೊತ್ತಿಲ್ಲ ಅಂತಾನೇ ದರ್ಶನ್ ಹೇಳ್ತಿದ್ದಾರೆ. ಮೊದಲನೇ ದಿನ ನಿದ್ರೆಯಿಲ್ಲದೆ ಚಿಂತಾಕ್ರಾಂತರಾಗಿದ್ದ ದರ್ಶನ್ ಎರಡನೇ ದಿನದ ರಾತ್ರಿ ಕೆಲ ಹೊತ್ತು ನಿದ್ರೆ ಮಾಡಿದ್ದಾರೆ.
ಇಂದು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದರ್ಶನ್ & ಗ್ಯಾಂಗ್‌ನ ವಿಚಾರಣೆ
ಇನ್ನು ಎರಡು ದಿನಗಳ ಕಾಲ ಪೊಲೀಸ್ ಠಾಣೆಯಲ್ಲಿ ಕಳೆದಿರುವ ಎ2 ದರ್ಶನ್ಗೆ ಪೊಲೀಸರು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ರೇಣುಕಾಸ್ವಾಮಿ ಕೊಲೆ ಸಂಬಂಧ ಮ್ಯಾರಥಾನ್ ಪ್ರಶ್ನಾವಳಿ ನಡೆಸಿದ್ದಾರೆ. ಇಂದು ಕೂಡ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪೊಲೀಸರು ದರ್ಶನ್ ಮತ್ತು ಗ್ಯಾಂಗ್‌ನ ವಿಚಾರಣೆ ನಡೆಸಿದ್ದಾರೆ. ಆದ್ರೆ ಎಲ್ಲದಕ್ಕೂ ದಾಸ ನಂಗೇನೂ ಗೊತ್ತಿಲ್ಲ ಅಂತಾನೇ ಉತ್ತರಿಸುತ್ತಿದ್ದಾರಂತೆ.
ರಾತ್ರಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಪವಿತ್ರಾ ಗೌಡ ಶಿಫ್ಟ್
ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದ ಕೇಂದ್ರ ಬಿಂದು ಹಾಗೂ ಎ1 ದರ್ಶನ್ ಆಪ್ತೆ ಪವಿತ್ರಾ ಗೌಡಳನ್ನು ನಿನ್ನೆ ಸಂಜೆ ಪೊಲೀಸ್ ಠಾಣೆಯಿಂದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಬಳಿಕ ಇಂದು ಬೆಳಗ್ಗೆ ವಾಪಸ್ ಪೊಲೀಸ್ ಠಾಣೆಗೆ ಕರೆತಂದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮತ್ತೆ ಸಂಜೆ 6 ಗಂಟೆ ಬಳಿಕ ಸಾಂತ್ವನ ಕೇಂದ್ರಕ್ಕೆ ಕಳಿಸಿದ್ದಾರೆ. ಮಹಿಳೆಯರನ್ನು ಸಂಜೆ 6 ಗಂಟೆ ಬಳಿಕ ಪೊಲೀಸ್ ಠಾಣೆಯಲ್ಲಿ ಇಟ್ಟುಕೊಳ್ಳುವಂತಿಲ್ಲ ಅನ್ನೋ ನಿಯಮದ ಕಾರಣ ಈ ಪ್ರಕ್ರಿಯೆಯನ್ನು ಪೊಲೀಸರು ಪಾಲಿಸುತ್ತಾರೆ.
ಒಟ್ಟಾರೆ ಎರಡು ದಿನಗಳ ಕಾಲ ಪೊಲೀಸ್ ಠಾಣೆಯಲ್ಲಿ ಬಂಧನವಾಗಿರುವ ದಾಸ ಮೂರನೇ ದಿನವೂ ಠಾಣೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ರೇಣುಕಾಸ್ವಾಮಿಗೆ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಮತ್ತು ಪಟಾಲಂನ್ನ ಪೊಲೀಸರು ಇನ್ನಿಲ್ಲದಂತೆ ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ