newsfirstkannada.com

‘ಊಟ ಮಾಡಿ ಊರು ಸೇರು ಅಂದಿದ್ದೆ..’ ಸ್ಟೇಟ್​ಮೆಂಟ್​ನಲ್ಲಿ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ದರ್ಶನ್

Share :

Published June 14, 2024 at 10:20am

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್

    ತೀವ್ರ ವಿಚಾರಣೆ, ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸ್

    ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ತನಿಖೆ ನಡೆಯುತ್ತಿದೆ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಗೌಡ ಸೇರಿದಂತೆ ಒಟ್ಟು 13 ಆರೋಪಿಗಳ ಬಂಧನ ಆಗಿದೆ. ಬಂಧಿತರನ್ನು ತೀವ್ರ ತನಿಖೆಗೆ ಒಳಪಡಿಸಿರುವ ಪೊಲೀಸರು ಒಂದೊಂದೇ ವಿಚಾರವನ್ನು ಬಯಲಿಗೆ ಎಳೆಯುತ್ತಿದ್ದಾರೆ.

ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ಕೋರ್ಟ್​ಗೆ ಒಪ್ಪಿಸಿ 6 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದರು. ಈ ಅವಧಿಯಲ್ಲಿ ನಿನ್ನೆಯವರೆಗೆ ಸ್ಥಳ ಮಹಜರು ಸೇರಿದಂತೆ ಇತರೆ ವಿಚಾರಣೆಗಳು ಪೂರ್ಣಗೊಂಡಿವೆ. ಸ್ಥಳ ಮಹಜರು ಬಳಿಕ ಆರೋಪಿಗಳ ಹೇಳಿಕೆಯನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಅಂತೆಯೇ ನಟ ದರ್ಶನ್​​ರಿಂದಲೂ ಪೊಲೀಸರು ಹೇಳಿಕೆ ದಾಖಲಿಸಿದ್ದಾರೆ.

ಇದನ್ನೂ ಓದಿ:ಕೊಲೆ ಮಾಡ್ತಾರೆ ಅನ್ನೋ ಸಣ್ಣ ಕಲ್ಪನೆಯೂ ಇರಲಿಲ್ಲ.. ಇನ್ನೂ ಏನೇನು ಹೇಳಿಕೆ ಕೊಟ್ರು ಪವಿತ್ರ ಗೌಡ..?

ಎ2 ದರ್ಶನ್
ಪ್ರಕರಣದ ಎರಡನೇ ಆರೋಪಿ ಆಗಿರುವ ದರ್ಶನ್​​​ ಅವರಿಂದಲೂ ಪೊಲೀಸರು ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಪವನ್​ನಿಂದ ಪವಿತ್ರಾಗೆ ಅಶ್ಲೀಲ ಮೆಸೇಜ್ ಮಾಡಿರೋದು ಗೊತ್ತಾಯ್ತು. ಅದಕ್ಕೆ ರೇಣುಕಾಸ್ವಾಮಿಯನ್ನು ಕರೆತರುವಂತೆ ರಾಘವೇಂದ್ರನಿಗೆ ಸೂಚಿಸಿದೆ. ಶನಿವಾರ ಸಂಜೆ ರೇಣುಕಾಸ್ವಾಮಿಯನ್ನು ಶೆಡ್​ನಲ್ಲಿ ಭೇಟಿಯಾದೆ. ಇನ್ನೊಂದು ಸಲ ಪವಿತ್ರಾಗೆ ಅಶ್ಲೀಲ ಮೆಸೇಜ್ ಮಾಡಿದ್ರೆ ಸರಿ ಇರಲ್ಲ ಎಂದು ವಾರ್ನ್ ಮಾಡಿದೆ. ದುಡ್ಡು ಕೊಟ್ಟು ಊಟ ಮಾಡ್ಕೊಂಡು ಊರು ಸೇರುವಂತೆ ಹೇಳಿ ಹೊರಟು ಹೋದೆ. ನಾನು ಈ ಕೊಲೆಯನ್ನು ಮಾಡಿಲ್ಲ. ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ:ದರ್ಶನ್​​ನಿಂದಾಗಿ ಸೈಡ್​​ ವಾಲ್​.. ಶಾಮಿಯಾನ ಹಿಂದಿನ ಅಸಲಿ ರಹಸ್ಯ ರಿವೀಲ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಊಟ ಮಾಡಿ ಊರು ಸೇರು ಅಂದಿದ್ದೆ..’ ಸ್ಟೇಟ್​ಮೆಂಟ್​ನಲ್ಲಿ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ದರ್ಶನ್

https://newsfirstlive.com/wp-content/uploads/2024/06/darshan3.jpg

Load More