ಕಷ್ಟದ ಕಾಲದಲ್ಲೂ ಸೆಲೆಬ್ರಿಟಿಗಳಿಗೆ ಕೈ ಮುಗಿದ ಕಾಟೇರ.. ದರ್ಶನ್ ಆಡಿದ ಒಂದು ಮಾತಿಗೆ ಫ್ಯಾನ್ಸ್ ಹವಾ ಶುರು!

author-image
Veena Gangani
Updated On
ರೇಣುಕಾಸ್ವಾಮಿ ಹತ್ಯೆ ಕೇಸ್‌ಗೆ ಸ್ಫೋಟಕ ಟ್ವಿಸ್ಟ್‌.. ಇನ್ನೊಂದು ವಾರದಲ್ಲಿ ದರ್ಶನ್‌ ಗ್ಯಾಂಗ್ ಹಣೆಬರಹ ನಿರ್ಧಾರ
Advertisment
  • ಪರಪ್ಪನ ಅಗ್ರಹಾರಕ್ಕೆ ಹೋಗೋ ಮುನ್ನ ಸೆಲೆಬ್ರಿಟಿಗಳಿಗೆ ದರ್ಶನ್ ಹೇಳಿದ್ದೇನು?
  • ನಟನನ್ನು ಮನೆ, ಮನದಲ್ಲಿಟ್ಟು ಆರಾಧಿಸುತ್ತಿದ್ದ ಫ್ಯಾನ್ಸ್​ಗೆ ಬರಸಿಡಿಲು
  • ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಆ ವಿಡಿಯೋ

ಬೆಂಗಳೂರು: ನೆಚ್ಚಿನ ನಟನ ಮೇಲೆಅಭಿಮಾನ ಇರಬೇಕೇ ಹೊರೆತು ಹುಚ್ಚು ಅಭಿಮಾನ ಇರಬಾರದು. ಕುಳಿತುಕೊಂಡರು, ನಿಂತುಕೊಂಡರು ಬರೀ ಡಿ ಬಾಸ್​.. ಡಿ ಬಾಸ್​​ ಅಂತ ಜಪಿಸೋ ಅಭಿಮಾನಿಗಳೇ ಹೆಚ್ಚು. ಮನೆ, ಮನದಲ್ಲಿಟ್ಟು ಆರಾಧಿಸ್ತಾಯಿದ್ದ ಫ್ಯಾನ್ಸ್​ಗೆ ಇಂದು ದೊಡ್ಡ ಬರಸಿಡಿಲು ಬಡಿದಂತೆ ಆಗಿತ್ತು. ಆದರೆ ಜೈಲಿಗೆ ಹೋಗೋ ಮುನ್ನ ದರ್ಶನ್ ಆಡಿದ ಒಂದು ಫ್ಯಾನ್ಸ್‌ಗೆ ಹೊಸ ಚೈತನ್ಯ, ಹುರುಪು ತಂದಿದೆ.

publive-image

ಇದನ್ನೂ ಓದಿ:ದರ್ಶನ್​​, ಪವಿತ್ರ ಈ ಜೀವನವೇ ಬೇಡ ಅಂತ ನರಕ ಅನುಭವಿಸಬೇಕು; ರೇಣುಕಾಸ್ವಾಮಿ ತಾಯಿ ಹಿಡಿಶಾಪ

ಕೊಲೆ ಕೇಸ್‌ನಲ್ಲಿ ದರ್ಶನ್​ ಜೈಲಿಗೆ ಹೋಗುತ್ತಾರೆ ಎಂಬ ಸುದ್ದಿ ಕೇಳಿದ ಅಭಿಮಾನಿಗಳು ಆತಂಕಕ್ಕೀಡಾಗಿದ್ದರು. ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಪರಪ್ಪನ ಅಗ್ರಹಾರ ಜೈಲಿಗೆ ದೌಡಾಯಿಸಿದ್ದರು. ಕೊನೆಯದಾಗಿ ನೆಚ್ಚಿನ ನಟನನ್ನು ಕಣ್ತುಂಬಿ ಕೊಳ್ಳಬೇಕು ಅಂತ ತುದಿಗಾಲಲ್ಲಿ ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಬೇಸರಗೊಂಡು ಡಿ ಬಾಸ್​ನನ್ನು ನೋಡಲು ನಿಂತಿದ್ದ ಅಭಿಮಾನಿಗಳಿಗೆ ನಟ ದರ್ಶನ್​ ಆ ಮಾತಿನ ಮೂಲಕ ಹೊಸ ಹುರುಪನ್ನು ತುಂಬಿದ್ದಾರೆ.

ಇಂದು ನಟ ದರ್ಶನ್​ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕ ಪೊಲೀಸ್ ವ್ಯಾನ್​ನಲ್ಲಿ ಪರಪ್ಪನ ಅಗ್ರಹಾರಕ್ಕೆ ಪ್ರಯಾಣ ನಡೆಸಿದರು. ಇದೇ ವೇಳೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ದರ್ಶನ್​ನನ್ನು ನೋಡಲು ಜಮಾಯಿಸಿದ್ದರು. ಆಗ ಪೊಲೀಸ್ ವ್ಯಾನ್​ನಲ್ಲೇ ಮೊದಲ ಬಾರಿಗೆ ತಮ್ಮ ಅಭಿಮಾನಿಗಳತ್ತ ನಟ ದರ್ಶನ್ ಕೈ ಬೀಸಿ ಮಾತನಾಡಿದ್ದಾರೆ. ಜೊತೆಗೆ ತಮ್ಮ ಅಭಿಮಾನಿಗಳಿಗೆ ಆ ಒಂದು ಮಾತಿನಿಂದ ಧೈರ್ಯ ತುಂಬಿದ್ದಾರೆ.

publive-image

ಪೊಲೀಸ್ ವ್ಯಾನ್​ ಹೊರಗೆ ನೆರೆದಿದ್ದ ಅಭಿಮಾನಿಗಳತ್ತ ಕೈಬೀಸಿದ ದರ್ಶನ್ ಪ್ಲೈಯಿಂಗ್ ಕಿಸ್‌ ಕೊಟ್ಟು ನಾನು ಆರಾಮಾಗಿದ್ದೇನೆ. ನನಗೆ ಏನೂ ಆಗಲ್ಲ ಹೆದರಬೇಡಿ ಅಂತ ಹೇಳಿದ್ದಾರೆ. ಈ ಮಾತನ್ನು ಕೇಳಿಕೊಂಡ ಅಭಿಮಾನಿಗಳು ಜೋರಾಗಿ ಜೈ ಡಿಬಾಸ್​ ಅಂತ ಕೂಗಾಡ ತೊಡಗಿದ್ದಾರೆ. ಇಷ್ಟೂ ದಿನದ ಬಳಿಕ ನೆಚ್ಚಿನ ನಟನ ಮಾತುಗಳನ್ನು ಕೇಳಿದ ಅಭಿಮಾನಿಗಳು ಸಖತ್​ ಖುಷಿ ಪಟ್ಟಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಪೊಲೀಸ್ ವ್ಯಾನ್​ನಲ್ಲಿ ನಟ ದರ್ಶನ್ ಅವರು ಪ್ರತಿಕ್ರಿಯೆ ನೀಡಿರೋ ವಿಡಿಯೋ ಸಖತ್ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment