ಪವಿತ್ರಾ ಗೌಡಗೆ ಮೀಟ್​ ಮಾಡಲ್ಲ ಎಂದ ನಟ ದರ್ಶನ್​​​; ನಿನ್ನ ಸಹವಾಸವೇ ಬೇಡ ಎಂದು ದೂರ

author-image
Ganesh Nachikethu
Updated On
ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.. ದರ್ಶನ್, ಪವಿತ್ರ ಗೌಡ ಸೇರಿ ಮತ್ತೆ ಮೂವರ ಅರೆಸ್ಟ್; ಮುಂದೇನು?
Advertisment
  • ಪವಿತ್ರಾ ಗೌಡ ಸಹವಾಸ ಬೇಡವೆಂದು ದರ್ಶನ್ ದೂರ?
  • ಪವಿತ್ರಾ ಗೌಡ ಮೀಟ್ ಮಾಡಲು ದರ್ಶನ್ ನಿರಾಕರಣೆ
  • ಪತ್ನಿ ಜೊತೆ ಫಾರ್ಮ್​ ಹೌಸ್​ನಲ್ಲಿರುವ ನಟ ದರ್ಶನ್..!

ಮೈಸೂರು: ಜೈಲಿನಿಂದ ಬಿಡುಗಡೆಯಾದ ಬಳಿಕ ನಟ ದರ್ಶನ್ ಆರಾಮಾಗಿ ಫಾರ್ಮ್​ ಹೌಸ್​ನಲ್ಲಿ ಕಾಲ ಕಳೆಯುತ್ತಿದ್ದಾರೆ. ಕುಟುಂಬದ ಸದಸ್ಯರ ಜೊತೆಗೆ ಮಾತ್ರ ಇರುವ ದಾಸ ಬೇಱರನ್ನೂ ಭೇಟಿ ಮಾಡೋಕೆ ಬಿಲ್​ಕುಲ್ ತಯಾರಿಲ್ಲ. ಪವಿತ್ರಾ ಗೌಡ ಸಹವಾಸವೇ ಬೇಡ ಅಂತ ತೋಟದ ಮನೆಯಲ್ಲಿ ರಿಲ್ಯಾಕ್ಸ್ ಮಾಡ್ತಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿ ನಟ ದರ್ಶನ್‌ ರಿಲ್ಯಾಕ್ಸ್​ ಮೂಡ್​ನಲ್ಲಿದ್ದಾರೆ. ಮೊನ್ನೆ ಜಾಮೀನು ಸಿಕ್ಕಿ ಬಿಜಿಎಸ್​ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ದಾಸ ಸೀದಾ ಪತ್ನಿ ಮನೆಗೆ ತೆರಳಿದ್ದರು. ಬೆನ್ನುನೋವು ಹಿನ್ನೆಲೆ ಕೋರ್ಟ್​ನಿಂದ ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆಯಿಂದ ಸರ್ಜರಿ ಮಾಡಿಸಿಕೊಳ್ಳದೆ ಡಿಸ್ಚಾರ್ಜ್​ ಆಗಿದ್ದರು. ಸದ್ಯ ದರ್ಶನ್​ ಕೂಲ್​ ಕೂಲ್ ಆಗಿದ್ದಾರೆ.

ಪವಿತ್ರಾ ಗೌಡ ಸಹವಾಸ ಬೇಡವೆಂದು ದರ್ಶನ್ ದೂರ?

ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ಬಳಿಕ ದರ್ಶನ್ ಮನೆಯಲ್ಲಿ ಆರಾಮಾಗಿದ್ದಾರೆ. ಮೈಸೂರಿಗೆ ಬಂದಿರುವ ದರ್ಶನ್, ತನ್ನ ಪತ್ನಿ ವಿಜಯಲಕ್ಷ್ಮಿ, ತಾಯಿ‌ ಮೀನಾ ತೂಗುದೀಪ ಜೊತೆ ಆಪ್ತತೆಯಿಂದ ಇದ್ದಾರೆ. ಜಾಮೀನು ಸಿಕ್ಕ ಬಳಿಕ ಆಸ್ಪತ್ರೆಯಿಂದ ನೇರವಾಗಿ ಪತ್ನಿ ಮನೆಗೆ ತೆರಳಿದ್ದ ದರ್ಶನ್, ಬಳಿಕ ಮೈಸೂರಿನ ಫಾರಂ ಹೌಸ್​ನಲ್ಲಿ ಕಾಲ ಕಳೆಯುತ್ತಿದ್ದಾರೆ. ಕುಟುಂಬಸ್ಥರು ಹಾಗೂ ಆಪ್ತ ಬಳಗದ ಜೊತೆ ರಿಲ್ಯಾಕ್ಸ್ ಮಾಡ್ತಿದ್ದಾರೆ.

publive-image

ಪವಿತ್ರಾ ಭೇಟಿಗೆ ದರ್ಶನ್ ನಕಾರ!?

ರಿಲೀಸ್ ಆದ ಬಳಿಕ ಪವಿತ್ರಾ ಗೌಡ ಮೀಟ್ ಮಾಡಲು ದರ್ಶನ್ ನಿರಾಕರಿಸಿದ್ದಾರಂತೆ. ಪವಿತ್ರಾಗೌಡ ಸಹವಾಸ ಬೇಡವೆಂದು ದೂರ ಉಳಿದಿದ್ದಾರೆ ಎನ್ನಲಾಗ್ತಿದೆ. ಪತ್ನಿ ಜೊತೆ ಫಾರ್ಮ್​ ಹೌಸ್​ನಲ್ಲಿರುವ ದರ್ಶನ್ ಅಲ್ಲೇ ಕಾಲ ಕಳೆಯುತ್ತಿದ್ದಾರೆ. ಅಲ್ಲದೇ ಫಾರ್ಮ್​ ಹೌಸ್​ಗೆ ಯಾರು ಬರಬೇಡಿ ಎಂದು ಮನವಿ ಮಾಡಿದ್ದಾರೆ. ಸಿನಿಮಾ ರಂಗದ ಗಣ್ಯರು ರಾಜಕೀಯ ಗಣ್ಯರು ಸೇರಿದಂತೆ ಯಾರು ಬರದಂತೆ ಕೋರಿದ್ದಾರೆ. ಸದ್ಯ ಯಾರನ್ನೂ ಮೀಟ್ ಮಾಡಲ್ಲ ಎಂದು ಕುಟುಂಬಸ್ಥರ ಮೂಲಕ ಮನವಿ ಮಾಡಿದ್ದಾರೆ. ಸ್ವಲ್ಪ ದಿನಗಳ ನಂತರ ಎಲ್ಲರನ್ನೂ ನಾನೇ ಮೀಟ್ ಮಾಡ್ತೀನಿ ಎಂದಿದ್ದಾರೆ.

ಚಾಮುಂಡೇಶ್ವರಿ ದೇವಿಗೆ ಹರಕೆ ತೀರಿಸಿದ ದರ್ಶನ್​ ಪತ್ನಿ ವಿಜಯಲಕ್ಷ್ಮೀ

ಇನ್ನು ದರ್ಶನ್ ತಾಯಿ ಮೀನಾ ತೂಗುದೀಪ್, ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದಿದ್ದಾರೆ. ದರ್ಶನ್ ಹೊರತುಪಡಿಸಿ ಕುಟುಂಬ ಸಮೇತ ದೇವಿ ದರ್ಶನ ಪಡೆದಿದ್ದಾರೆ. ಈ ವೇಳೆ ಪತ್ನಿ ವಿಜಯಲಕ್ಷ್ಮೀ ದೇವಿಗೆ ಹರಕೆ ತೀರಿಸಿದ್ದಾರೆ.

ಒಟ್ಟಾರೆ ಜಾಮೀನು ಸಿಕ್ಕ ಬಳಿಕ ದರ್ಶನ್ ತೋಟದ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಎಲ್ಲದಕ್ಕೂ ಕಾರಣವಾದ ಪವಿತ್ರಾ ಗೌಡ ಸಹವಾಸವೇ ಬೇಡ ಅಂತ ತಮ್ಮ ಪಾಡಿಗೆ ಇದ್ದಾರೆ. ಇದು ಹೀಗೆ ಮುಂದುವರೆಯುತ್ತಾ ಅನ್ನೋದನ್ನ ಕಾದು ನೋಡಬೇಕು.

ಇದನ್ನೂ ಓದಿ:Shyam Benegal: ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ನಿಧನ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment