Advertisment

ದರ್ಶನ್ ಆರೋಗ್ಯ ಅಪ್​ಡೇಟ್ಸ್; ಬಿಜಿಎಸ್​​ನಲ್ಲಿ ಸರ್ಜರಿಗೆ ಗ್ರೀನ್ ಸಿಗ್ನಲ್

author-image
Ganesh
Updated On
ದರ್ಶನ್ ಆರೋಗ್ಯ ಅಪ್​ಡೇಟ್ಸ್; ಬಿಜಿಎಸ್​​ನಲ್ಲಿ ಸರ್ಜರಿಗೆ ಗ್ರೀನ್ ಸಿಗ್ನಲ್
Advertisment
  • ದರ್ಶನ್, ವಿಜಯಲಕ್ಷ್ಮಿ ಜೊತೆ ಚರ್ಚೆ ನಡೆಸಿರುವ ವೈದ್ಯರು
  • ಪಿಜಿಯೋಥೆರಪಿ ಜೊತೆ ಶಸ್ತ್ರ ಚಿಕಿತ್ಸೆ ಅಗತ್ಯ ಎಂದಿರುವ ವೈದ್ಯರು
  • ಮಧ್ಯಂತರ ಜಾಮೀನು ಪಡೆದುಕೊಂಡಿರುವ ನಟ ದರ್ಶನ್

ಬೆಂಗಳೂರು: ಮಧ್ಯಂತರ ಜಾಮೀನು ಪಡೆದು ಬಳ್ಳಾರಿ ಜೈಲಿನಿಂದ ಆಚೆ ಬಂದಿರುವ ದರ್ಶನ್​​ಗೆ ಬೆನ್ನು ನೋವಿನ ಸಮಸ್ಯೆ ಉಲ್ಬಣಿಸಿದೆ.  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್, ಇದೀಗ ಸರ್ಜರಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisment

ಬಿಜಿಎಸ್ ಆಸ್ಪತ್ರೆಯಲ್ಲಿ ಸರ್ಜರಿಗೆ ದರ್ಶನ್ ಅನುಮತಿ ನೀಡಿದ್ದಾರೆ. ಈ ಸಂಬಂಧ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ಜೊತೆ ವೈದ್ಯರು ಚರ್ಚೆ ನಡೆಸಿದ್ದಾರೆ. ಪಿಜಿಯೋಥೆರಪಿ (Physiotherapy) ಜೊತೆ ಶಸ್ತ್ರ ಚಿಕಿತ್ಸೆಯ ಅಗತ್ಯ ಇದೆ. ಕೇವಲ ಪಿಜಿಯೋಥೆರಪಿಯಿಂದ ಬೆನ್ನು ನೋವು ಗುಣಮುಖ ಸಾಧ್ಯವಿಲ್ಲ ಎಂದು ವೈದ್ಯ ಡಾ.ನವೀನ್ ಅಪ್ಪಾಜಿಗೌಡ ಅವರು ದರ್ಶನ್​ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ್ರಾ ಬಿಗ್​ಬಾಸ್​ ಮಾಜಿ ಸ್ಪರ್ಧಿ ಸೋನು ಗೌಡ; ಹುಡುಗ ಯಾರು ಗೊತ್ತಾ?

ಬಿಜಿಎಸ್ ಆಸ್ಪತ್ರೆ ವೈದ್ಯರ ತಂಡದ ಮನವರಿಕೆ ಬೆನ್ನಲ್ಲೇ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮೀ ಸರ್ಜರಿಗೆ ಅನುಮತಿ ನೀಡಿದ್ದಾರೆ ಎಂದು ಹೇಳಲಾಗಿದೆ. ಅಂತೆಯೇ ದರ್ಶನ್​ಗೆ ಸರ್ಜರಿ ಮಾಡಲು ಬಿಜಿಎಸ್ ವೈದ್ಯರ ತಂಡ ಸಿದ್ಧತೆ ನಡೆಸುತ್ತಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment