/newsfirstlive-kannada/media/post_attachments/wp-content/uploads/2024/02/Devil.jpg)
ಸ್ಯಾಂಡಲ್​ವುಡ್​ ನಟ ದರ್ಶನ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 47ನೇ ಹುಟ್ಟುಹಬ್ಬವನ್ನು ಡಿ ಬಾಸ್​ ಆಚರಿಸಿಕೊಳ್ಳುತ್ತಿದ್ದಾರೆ. ದಾಸನ ಹುಟ್ಟುಹಬ್ಬದ ವಿಶೇಷ ದಿನದಂದು ಚಿತ್ರತಂಡ ಡೆವಿಲ್​ ಸಿನಿಮಾದ ಫಸ್ಟ್​ ಲುಕ್ ಟೀಸರ್​​ ರಿಲೀಸ್​ ಮಾಡಿದೆ.
ಕಾಟೇರ ಸಿನಿಮಾ ಸಕ್ಸಸ್​ ಪ್ರದರ್ಶನದ ಬಳಿಕ ದರ್ಶನ್​ ಡೆವಿಲ್​ ಸಿನಿಮಾಸದಲ್ಲಿ ನಟಿಸುತ್ತಿದ್ದಾರೆ. ಡೆವಿಲ್​ನಲ್ಲಿ ದಾಸ ಮಾಸ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ‘ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು.. ಫೋಟೋ ತೆಗೆಯಲು ಅದಕೆ ಬಲು ಕೋಪ ಬರುವುದು’ ಎಂದು ಹೇಳುತ್ತಾ ಸಿಗರೇಟ್​ ಸೇದುವ ಲುಕ್​ ಅನ್ನು ಬಿಡುಗಡೆ ಮಾಡಿದ್ದಾರೆ. ಸದ್ಯ ಯ್ಯೂಟೂಬ್​ನಲ್ಲಿ ದರ್ಶನ್​ ನ್ಯೂ ಲುಕ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ.
ಇನ್ನು ಡೆವಿಲ್​ ಸಿನಿಮಾ ಪ್ರಕಾಶ್​ ವೀರ್​ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಅಜನೀಶ್​​ ಲೋಕನಾಥ್​ ಸಂಗೀತ ಸಂಯೋಜನೆ ಇದಕ್ಕಿದೆ. ಜೆ ಜಯಮ್ಮ ಡಿವಿಲ್​ ಸಿನಿಮಾಗೆ ಬಂಡವಾಳ ಹಾಕಿದ್ದು, ಶ್ರೀ ಜೈ ಮಾತಾ ಕಂಬೈನ್ಸ್​ನಡಿ ಸಿನಿಮಾ ಮೂಡಿಬರುತ್ತಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us